More

    ಚವನಭಾವಿ ಗ್ರಾಮದಲ್ಲಿ ಪುರಾತನ ತೆರೆದ ಬಾವಿ ಸ್ವಚ್ಛತೆ

    ಮುದ್ದೇಬಿಹಾಳ: ತಾಲೂಕಿನ ಚವನಭಾವಿ ಗ್ರಾಮದ ಪುರಾತನ ತೆರೆದ ಬಾವಿಯ ಹೂಳನ್ನು ಗ್ರಾಮದ ಯುವಕರು ಸ್ವಯಂಪ್ರೇರಿತರಾಗಿ ಶುಕ್ರವಾರ ಸ್ವಚ್ಛಗೊಳಿಸಿ ಮಾದರಿ ಕಾರ್ಯ ಮಾಡಿದರು.

    ಬಾವಿಯಲ್ಲಿದ್ದ ಕಸಕಡ್ಡಿ, ಕೊಳಚೆ, ಅಲ್ಲಲ್ಲಿ ಗುಂಪಾಗಿ ಸಂಗ್ರಹಗೊಂಡಿದ್ದ ಮಣ್ಣನ್ನು ತೆಗೆದರು. ಶನಿವಾರ ಗ್ರಾಮದಲ್ಲಿ ಯಮನೂರಪ್ಪನ ಉರುಸು ಇದ್ದು, ದೇವರನ್ನು ಇದೇ ಬಾವಿಗೆ ಗಂಗಸ್ಥಳಕ್ಕೆ ಕರೆತರುತ್ತಾರೆ. ಇದನ್ನರಿತ ಯುವಕರು ದೇವರ ಮೂರ್ತಿಗಳಿಗೆ ಸ್ನಾನ ಮಾಡಿಸಲು ಸ್ವಚ್ಛ ವಾತಾವರಣ ಇರಬೇಕೆನ್ನುವ ಸದುದ್ದೇಶದಿಂದ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದರು.

    ಗ್ರಾಮಸ್ಥರು ಪ್ರತಿವರ್ಷ ವಿಶೇಷ ಹಬ್ಬ ಹರಿದಿನ, ಜಾತ್ರೆ, ಉರುಸ್‌ಗಳಂದು ದೇವರಿಗೆ ಗಂಗಾಸ್ನಾನ ಮಾಡಿಸಲು ಇಲ್ಲಿಗೆ ಕರೆತರುತ್ತಾರೆ. ಇದು ಪುರಾತನ ಕಾಲದ ಪವಿತ್ರ ಬಾವಿ ಎನ್ನುವುದು ಗೊತ್ತಿದ್ದರೂ ಗ್ರಾಪಂನವರು ಇದರ ಸ್ವಚ್ಛತೆಗೆ ಮುಂದಾಗಿರಲಿಲ್ಲ. ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಬಾವಿಯ ಸ್ವಚ್ಛತೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಗ್ರಾಪಂನವರು ನಡೆದುಕೊಂಡಿದ್ದರು. ಇದರಿಂದ ಬೇಸತ್ತ ಯುವಕರ ತಂಡ ತಾವೇ ಸ್ವಚ್ಛಗೊಳಿಸಲು ಮುಂದಾಗಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಯಿತು ಎಂದು ಹಣಮಂತ ಬಿರಾದಾರ ತಿಳಿಸಿದರು.

    ಗದ್ದೆಪ್ಪ ಬಿರಾದಾರ, ಲಕ್ಷ್ಮಣ ಈಳಗೇರ, ರಾಮಣ್ಣ ಈಳಗೇರ, ಹುಲಗಯ್ಯ ಗೋಗಿ, ಶಿವಪ್ಪ ಸೋಮನಾಳ, ಶರಣಪ್ಪ ಈಳಗೇರ, ಹಣಮಂತ ಗೋಗಿ ಇತರರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts