More

    ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ನಕಲಿ ಆ್ಯಪ್: ಆನ್‌ಲೈನ್‌ನಲ್ಲಿ ಟ್ಯಾಕ್ಸ್ ಸ್ವೀಕರಿಸುವ ನೆಪದಲ್ಲಿ ಮೋಸ

    ಬೆಂಗಳೂರು: ಆದಾಯ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸುವ ಮುನ್ನ ಎಚ್ಚರ ವಹಿಸಿ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಜನರನ್ನು ಯಾಮಾರಿಸುವ ಸಲುವಾಗಿಯೇ ನಕಲಿ ವೆಬ್‌ಸೈಟ್‌ಗಳು ಸಕ್ರಿಯವಾಗಿವೆ.

    ಇಲ್ಲೊಂದು ಪ್ರಕರಣದಲ್ಲಿ ಆದಾಯ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುವ ನೆಪದಲ್ಲಿ 49,950 ರೂ. ಪಡೆದು ಮೋಸ ಮಾಡಿದ್ದು, ಕೇಂದ್ರ ಸಿಇಎನ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

    ಇದನ್ನೂ ಓದಿ: ಜೆಡಿಎಸ್​ ಪಕ್ಷಕ್ಕೆ ಹಿನ್ನಡೆ, ನಿಖಿಲ್​ ಸೋಲು, ಡಿಕೆಶಿ ಡಿಸಿಎಂ ಬಗ್ಗೆ ಮಾಜಿ ಸಿಎಂ ಎಚ್​ಡಿಕೆ ಹೇಳಿದ್ದಿಷ್ಟು…

    ಆನೇಪಾಳ್ಯದ ವಿ. ಏಂಜಲ್ ಜೆನಿರ್ ವಂಚನೆಗೆ ಒಳಗಾದ ಮಹಿಳೆ. ಮೇ 5ಕ್ಕೆ ಮಹಿಳೆಯ ಇಮೇಲ್‌ಗೆ ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಲಿಂಕ್ ಬಂದಿದ್ದು, ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ಆ್ಯಪ್‌ಡೌನ್ ಲೋಡ್ ಮಾಡಿಕೊಳ್ಳಿ. ಆ್ಯಪ್‌ನಲ್ಲಿ ಲಾಗಿನ್ ಆಗಿ ಸುಲಭವಾಗಿ ತೆರಿಗೆ ಪಾವತಿ ಮಾಡಬಹುದು ಎಂದು ಸಲಹೆ ನೀಡಿದ್ದರು. ಅದರಂತೆ ಮಹಿಳೆ, ತನಗೆ ಬಂದಿದ್ದ ಲಿಂಕ್‌ನಿಂದ ಆ್ಯಪ್ ಡೌನ್‌ಲೋ ಮಾಡಿಕೊಂಡು ಲಾಗಿನ್ ಆಗಿ ನೆಟ್ ಬ್ಯಾಂಕಿಂಗ್ ಮೂಲಕ ತೆರಿಗೆ ಪಾವತಿಗೆ ಮುಂದಾಗಿದ್ದಾರೆ.

    ಬ್ಯಾಂಕ್ ಮಾಹಿತಿ ಅಪ್‌ಡೇಟ್ ಮಾಡುತ್ತಿದಂತೆ ಮಹಿಳೆ ಖಾತೆಯಿಂದ 49,950 ರೂ. ಕಡಿತವಾಗಿದೆ. ಆನಂತರ ಇದು ನಕಲಿ ವೆಬ್‌ಸೈಟ್ ಮತ್ತು ಆ್ಯಪ್ ಎಂಬುದು ಗೊತ್ತಾಗಿ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಮುಂದಿವೆ ಸಾಲು ಸಾಲು ಸವಾಲುಗಳು!

    ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ:ನಿಖಿಲ್ ಕುಮಾರಸ್ವಾಮಿ

    ಜೆಡಿಎಸ್​ ಪಕ್ಷಕ್ಕೆ ಹಿನ್ನಡೆ, ನಿಖಿಲ್​ ಸೋಲು, ಡಿಕೆಶಿ ಡಿಸಿಎಂ ಬಗ್ಗೆ ಮಾಜಿ ಸಿಎಂ ಎಚ್​ಡಿಕೆ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts