More

    ಸಂದರ್ಶನ ನೆಪದಲ್ಲಿ ಆನ್‌ಲೈನ್ ವಂಚನೆ

    ಶಿವಮೊಗ್ಗ: ಆನ್‌ಲೈನ್ ಸಂದರ್ಶನ ನೀಡಿ ಹಣ ಸಂಪಾದಿಸಬಹುದೆಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 4.17 ಲಕ್ಷ ರೂ. ವಂಚಿಸಲಾಗಿದೆ.

    ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಆ್ಯಪ್ ಮೂಲಕ ಮಾಹಿತಿ ನೀಡಿ ಹಣ ವರ್ಗಾಯಿಸಿಕೊಳ್ಳಲಾಗಿದೆ. ಶಿವಮೊಗ್ಗದ ವ್ಯಕ್ತಿಗೆ ವಾಟ್ಸ್‌ಆ್ಯಪ್‌ನಲ್ಲಿ ಎಚ್‌ಸಿಎಲ್ ಟೆಕ್ನಾಲಜಿಗೆ ಸಂದರ್ಶನ ನೀಡಿದರೆ 150 ರೂ. ಸಿಗಲಿದೆ ಎಂದು ಮೆಸೇಜ್ ಬಂದಿತ್ತು. ಬಳಿಕ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು.
    ಮೊದಲು 2 ಸಾವಿರ ರೂ. ವರ್ಗಾಯಿಸಿದ್ದರು. ಅವರಿಗೆ 2800 ರೂ. ಮರಳಿತ್ತು. ಬಳಿಕ ಟೆಲಿಗ್ರಾಂ ಗ್ರೂಪ್ ಒಂದಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಹಂತ ಹಂತವಾಗಿ 4.17 ಲಕ್ಷ ರೂ. ಹೂಡಿಕೆ ಮಾಡಿಕೊಂಡು ವಂಚಿಸಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts