More

    ಆನ್‌ಲೈನ್‌ ವಂಚನೆ, 33 ಲಕ್ಷ ಕಳೆದುಕೊಂಡ ಮಹಿಳೆ

    ಬಳ್ಳಾರಿ: ಹೂಡಿಕೆಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ ಆನ್‌ಲೈನ್‌ ವಂಚಕರ ಮಾತು ನಂಬಿದ ಮಹಿಳೆಯೊಬ್ಬರು 33.04 ಲಕ್ಷ ಹಣ ಕಳೆದುಕೊಂಡಿದ್ದಾರೆ.
    ಈ ಸಂಬಂದ ಮಹಿಳೆ ಪತಿ ಬಳ್ಳಾರಿಯ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.
    ಎಸ್‌ಬಿಐನಲ್ಲಿ ಖಾತೆ ಹೊಂದಿದ್ದ ಮಹಿಳೆ, ಕೆಲ ತಿಂಗಳ ಹಿಂದೆ ‌ಫೇಸ್‌ಬುಕ್‌ನಲ್ಲಿ ‘ವೆಲ್ತ್‌ ಟ್ರೈನಿಂಗ್‌ ಕ್ಯಾಂಪ್‌’ ಎಂಬ ಜಾಹೀರಾತು ನೋಡಿ, ಅದನ್ನು ಕ್ಲಿಕ್‌ ಮಾಡಿದ್ದರು. ಅಲ್ಲಿ ಹೇಳಲಾಗಿದ್ದ ಆನ್‌ಲೈನ್‌ ತರಗತಿಗೆ ಸೇರಿದ್ದರು. ಆನ್‌ಲೈನ್‌ ತರಗತಿಯಲ್ಲಿ ಶೇರು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡುತ್ತಾ, ತಮ್ಮ ಬಳಿ ಹಣ ಹೂಡಿಕೆ ಮಾಡಿದರೆ ಶೇರು ಮಾರುಕಟ್ಟೆಗಿಂತಲೂ ಶೇ 10ರಷ್ಟು ಹೆಚ್ಚು ಲಾಭಾಂಶ ನೀಡುವುದಾಗಿ ಮಹಿಳೆಗೆ ನಂಬಿಸಿದ್ದಾರೆ ಎನ್ನಲಾಗಿದೆ.
    ಜತೆಗೆ, ಹಣ ಹೂಡಿಕೆ ಮಾಡಿದರೆ ಆರಂಭಿಕ ಖರೀದಿ ಕೊಡುಗೆಯಾಗಿ ಶೇ. 30 ಲಾಭಾಂಶ ನೀಡುವುದಾಗಿಯೂ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಒಟ್ಟು ₹33,04,999 ಹಣವನ್ನು ಆನ್‌ಲೈನ್‌ ವಂಚಕರ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts