More

    ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಮುಂದಿವೆ ಸಾಲು ಸಾಲು ಸವಾಲುಗಳು!

    ಬೆಂಗಳೂರು: ಮುಖ್ಯಮಂತ್ರಿ ಪಟ್ಟಕ್ಕಾಗಿ ಕಳೆದ ಐದು ದಿನಗಳಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ ನಡುವೆ ನಡೆದ ಹಗ್ಗಜಗ್ಗಾಟದಲ್ಲಿ ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಗೆಲುವಾಗಿದೆ. ಎರಡನೇ ಬಾರಿಗೆ ಸಿಎಂ ಆಗುವ ಅವಕಾಶ ಸಿಕ್ಕಿತ್ತು ಎಂಬ ಖುಷಿ ಒಂದೆಡೆಯಾದರೆ, ಮುಂದೆ ಸಾಲು ಸಾಲು ಸವಾಲುಗಳನ್ನು ಎದುರಿಸಬೇಕಾಗಿರುವ ಆತಂಕವೂ ಸಿದ್ದರಾಮಯ್ಯ ಅವರಿಗೆ ಇದೆ.

    ಗ್ಯಾರಂಟಿ ಜಾರಿಯೇ ಮೊದಲ ಸವಾಲು

    ರಾಜ್ಯದಲ್ಲಿ ಸಂಪೂರ್ಣ ಕುಸಿಯುವ ಭೀತಿಯಲ್ಲಿದ್ದ ಕಾಂಗ್ರೆಸ್​ಗೆ ಮತದಾರರ ಪ್ರಭುಗಳು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಬಿಜೆಪಿ ವಿರೋಧಿ ಅಲೆ ಒಂದೆಡೆಯಾದರೆ, ಕಾಂಗ್ರೆಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅವರ ಘೋಷಿಸಿದ ಗ್ಯಾರಂಟಿ ಯೋಜನೆಗಳು ಎಂಬುದು ಜಗಜ್ಜಾಹೀರು. ಚುನಾವಣೆಗೆ ಮುನ್ನವೇ ಐದು ಉಚಿತ ಗ್ಯಾರಂಟಿಗಳನ್ನು ಕಾಂಗ್ರೆಸ್​ ಘೋಷಣೆ ಮಾಡಿದೆ. ಇದೀಗ ಎಲ್ಲರ ನಿರೀಕ್ಷೆಯಂತೆ ಕಾಂಗ್ರೆಸ್​ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತಿದ್ದೆ. ಮೊದಲ ಸಭೆಯಲ್ಲೇ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಹೇಳಿಕೊಂಡು ಬಂದಿದ್ದಾರೆ. ಇದೀಗ ಸಿಎಂ ಆಗಿ ಆಯ್ಕೆಯಾಗಿರುವ ಸಿದ್ದರಾಮಯ್ಯಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದು ಮೊದಲನೆಯ ಸವಾಲಾಗಿದೆ.

    ಇದನ್ನೂ ಓದಿ: ಆರೋಪ ಸಾಬೀತು ಮಾಡಿದರೆ ಸರ್ಕಲ್​ನಲ್ಲಿ ನೇಣು ಹಾಕಿಕೊಂಡು ಸಾಯುವೆ ಎಂದು ಸವಾಲೆಸೆದ ಪರಾಜಿತ ಅಭ್ಯರ್ಥಿ!

    ಹಣಕಾಸು ಸ್ಥಿತಿ ನಿರ್ವಹಣೆ

    ಅಂದಹಾಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಉಚಿತ ಭರವಸೆಯಿಂದ ಆಡಳಿತ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತೂ ಇದೆ. ಗ್ಯಾರಂಟಿಗಳನ್ನು ಜಾರಿ ಮಾಡುವುದಾದರೆ ಸರ್ಕಾರದ ಬೊಕ್ಕಸಕ್ಕೆ 62 ಸಾವಿರ ರೂ. ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಇದರಿಂದ ಹೀಗಿರುವ ಹಣಕಾಸು ಸ್ಥಿತಿಗಿಂತ ಹೆಚ್ಚಿನ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಹಣಕಾಸು ಸ್ಥಿತಿಯನ್ನೂ ಕಾಪಾಡಿಕೊಂಡು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಒಂದು ವೇಳೆ ಈ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್​ ಎಡವಿದ್ದೇ ಆದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಳ್ಳುವ ಭೀತಿ ಕಾಂಗ್ರೆಸ್​ಗೆ ಕಾಡಲಿದೆ.

    ಕಾಂಗ್ರೆಸ್​ ಅಲೆ ಉಳಿಸಿಕೊಳ್ಳಬೇಕಿದೆ

    ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಲೋಕಸಭಾ ಚುನಾವಣೆ ಮೇಲೂ ಬೀರಲಿದೆ ಎಂಬ ಆಶಾವಾದವನ್ನು ಕಾಂಗ್ರೆಸ್​ ಇಟ್ಟುಕೊಂಡಿದೆ. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್​ ಪರ ಇರುವ ಅಲೆಯನ್ನು ಲೋಕಸಭಾ ಚುನಾವಣೆಯವರೆಗೂ ಉಳಿಸಿಕೊಂಡು ಹೋಗಬೇಕಾದ ಮಹತ್ವದ ಜವಬ್ದಾರಿ ಸಿದ್ದರಾಮಯ್ಯ ಅವರ ಮೇಲೆ ಬಿದ್ದಿದೆ. ಜನತೆಗೆ ಕೊಟ್ಟ ಮಾತುಗಳನ್ನು ಉಳಿಸಿಕೊಂಡು, ಉತ್ತಮ ಆಡಳಿತ ನೀಡುವುದರ ಜೊತೆಗೆ ಸಚಿವ ಸಂಪುಟದಲ್ಲಿ ಯಾವುದೇ ಮನಸ್ತಾಪಗಳು ಬರದಂತೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕಾದ ಬಹುದೊಡ್ಡ ಸವಾಲು ಸಿದ್ದರಾಮಯ್ಯ ಅವರ ಮುಂದಿದೆ.

    ಒಕ್ಕಲಿಗರ ಆಕ್ರೋಶ ತಣಿಸಬೇಕಿದೆ

    ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್​ ಅವರಿಗೆ ಸಿಎಂ ಸ್ಥಾನವನ್ನು ತಪ್ಪಿಸಿದ್ದಾರೆ ಎಂಬ ಆರೋಪ ಸಿದ್ದರಾಮಯ್ಯ ಅವರ ಮೇಲೆ ಇದೆ. ಇದರಿಂದ ಒಕ್ಕಲಿಗರಿಗೆ ಸಿದ್ದು ಮೇಲೆ ಸಹಜವಾಗಿಯೇ ಅಸಮಾಧಾನ ಇದೆ. ಕಳೆದ ಬಾರಿಗಿಂತ ಈ ಬಾರಿ ಒಕ್ಕಲಿಗರ ಹೆಚ್ಚಿನ ಮತಗಳು ಕಾಂಗ್ರೆಸ್​ ಪಾಲಾಗಿವೆ. ಡಿಕೆಶಿ ಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ಒಕ್ಕಲಿಗರು ಮತ ಹಾಕಿದ್ದಾರೆ. ಆದರೆ, ಡಿಕೆಶಿ ಸಿಎಂ ಸ್ಥಾನ ವಂಚಿತರಾಗಿರುವುದರಿಂದ ಅಸಮಾಧಾನ ಉಂಟಾಗಿದ್ದು, ಒಕ್ಕಲಿಗರ ಆಕ್ರೋಶವನ್ನು ಶಮನಗೊಳಿಸುವುದರ ಜೊತೆಗೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಸವಾಲು ಕೂಡ ಸಿದ್ದರಾಮಯ್ಯ ಅವರ ಮುಂದಿದೆ.

    ಸಚಿವ ಸಂಪುಟ ರಚನೆ ಕಸರತ್ತು

    ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹೊಸ ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನವಾದ ನ್ಯಾಯ ಒದಗಿಸಬೇಕಾದ ಸವಾಲು ಕೂಡ ಸಿದ್ದರಾಮಯ್ಯ ಅವರ ಮುಂದಿದೆ. ಈಗಾಗಲೇ ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ. ಹಿರಿಯರು ಹಾಗೂ ಮಹಿಳೆಯರನ್ನು ಗಣನೆಗೆ ತೆಗೆದುಕೊಂಡು ಯಾರೊಬ್ಬರು ಅಸಮಾಧಾನಗೊಳ್ಳದಂತೆ ಸಚಿವ ಸಂಪುಟ ರಚನೆ ಮಾಡಬೇಕಾದ ಸವಾಲು ಇದೆ.

    ಇದನ್ನೂ ಓದಿ: ಡಿಕೆಶಿ ಮನವೊಲಿಕೆ ಹಿಂದಿದೆ ಸೋನಿಯಾ ಗಾಂಧಿ ಪಾತ್ರ: ಆ ಒಂದು ಕರೆಗೆ ಕರಗಿದ ಕನಕಪುರದ ಬಂಡೆ

    ಕೇಂದ್ರದ ಜತೆ ಉತ್ತಮ ಬಾಂದವ್ಯ

    ಇದೆಲ್ಲದರ ನಡುವೆ ಕೇಂದ್ರ ಸರ್ಕಾರದ ಜತೆ ಉತ್ತಮ ಸಂಬಂಧ ಇಟ್ಟುಕೊಂಡು ರಾಜ್ಯಕ್ಕೆ ಬರಬೇಕಾದ ಪಾಲನ್ನು ಪಡೆಯಬೇಕಾದ ಬಹುದೊಡ್ಡ ಸವಾಲು ಕೂಡ ಸಿದ್ದರಾಮಯ್ಯ ಅವರ ಮುಂದಿದೆ. ಈ ಎಲ್ಲ ಸವಾಲುಗಳನ್ನು ಸಿಎಂ ಆಗಿ ಸಿದ್ದರಾಮಯ್ಯ ಅವರು ಯಾವ ರೀತಿಯಲ್ಲಿ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಇದೀಗ ಜನರಲ್ಲಿ ಮನೆ ಮಾಡಿದೆ.

    ಮೇ 20ರ ಶನಿವಾರದಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ. ಶಿವಕುಮಾರ್​ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಗರದ ಕಂಠೀರವ ಸ್ಟೇಡಿಯಂಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

    ಜೆಡಿಎಸ್​ ಪಕ್ಷಕ್ಕೆ ಹಿನ್ನಡೆ, ನಿಖಿಲ್​ ಸೋಲು, ಡಿಕೆಶಿ ಡಿಸಿಎಂ ಬಗ್ಗೆ ಮಾಜಿ ಸಿಎಂ ಎಚ್​ಡಿಕೆ ಹೇಳಿದ್ದಿಷ್ಟು…

    ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿವೆ: ಸಿದ್ದರಾಮಯ್ಯ

    ಡಿಕೆಶಿ ಮನವೊಲಿಕೆ ಹಿಂದಿದೆ ಸೋನಿಯಾ ಗಾಂಧಿ ಪಾತ್ರ: ಆ ಒಂದು ಕರೆಗೆ ಕರಗಿದ ಕನಕಪುರದ ಬಂಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts