More

  ಬಾರೋ ಬಾರೋ, ಬಾಟಲ್ ತಾರೋ ; ಮ್ಯಾಟ್ನಿಯಲ್ಲಿ ಸತೀಶ್ ಮತ್ತು ಗೆಳೆಯರ ಹಾಡು, ಹಂಗಾಮ

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ಕೆಲವು ದಿನಗಳ ಹಿಂದಷ್ಟೆ ‘ಮ್ಯಾಟ್ನಿ’ಯಲ್ಲಿ ಸತೀಶ್ ನೀನಾಸಂ ‘ಸಂಜೆ ಮೇಲೆ ಫೋನು ಮಾಡ್ಲ ನಿಂಗೆ’ ಎಂದು ನಾಯಕಿ ರಚಿತಾ ರಾಮ್ ಜತೆ ಹಾಡಿ ಕುಣಿದಿದ್ದರು. ಇದೀಗ ಅದೇ ಚಿತ್ರದ ಮತ್ತೊಂದು ಹಾಡಿನಲ್ಲಿ ಗೆಳೆಯರ ಗ್ಯಾಂಗ್ ಜತೆ ಪಾರ್ಟಿ ಮಾಡಿದ್ದಾರೆ. ಕಳೆದ ಗುರುವಾರದಿಂದ (ಸೆ. 7) ಭಾನುವಾರದವರೆಗೆ (ಸೆ. 10) ಪಬ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಈ ಹಾಡಿನ ಶೂಟಿಂಗ್ ಪೂರ್ಣಗೊಳ್ಳುವ ಮೂಲಕ ಚಿತ್ರದ ಚಿತ್ರೀಕರಣ ಕೂಡ ಕಂಪ್ಲೀಟ್ ಆಗಿದೆ.

  ಇದನ್ನೂ ಓದಿ : ರಾವೆನ್ ಚಿತ್ರಕ್ಕೆ ಮುಹೂರ್ತ; ವೇದ್ ನಿರ್ದೇಶನದಲ್ಲಿ ದಿಲೀಪ್ ಪೈ, ಸ್ವಪ್ನಾ, ಕುಂಕುಮ್

  ಬಾರೋ ಬಾರೋ, ಬಾಟಲ್ ತಾರೋ ; ಮ್ಯಾಟ್ನಿಯಲ್ಲಿ ಸತೀಶ್ ಮತ್ತು ಗೆಳೆಯರ ಹಾಡು, ಹಂಗಾಮ

  ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದಲ್ಲಿ, ಸಂತೋಷ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಸಾಂಗ್ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ಪಾರ್ಟಿ ಸಾಂಗ್‌ನಲ್ಲಿ ಕುಣಿದು ಕುಪ್ಪಳಿಸಿದ ಖುಷಿಯಲ್ಲಿ ನಾಯಕ ಸತೀಶ್ ನೀನಾಸಂ, ‘‘ಬಾರೋ ಬಾರೋ ಬಾರೋ, ಬರುವಾಗ ಬಾಟಲ್ ತಾರೋ…’ ಎಂದು ಸಾಗುವ ಪಾರ್ಟಿ ಸಾಂಗ್ ಇದು. ಪಬ್‌ನಲ್ಲಿ ಚಿತ್ರೀಕರಣ ಮಾಡಿದೆವು. ನನಗೆ ಮೊದಲ ಪಾರ್ಟಿ ಸಾಂಗ್ ಅನುಭವ. ಡಾನ್ಸರ್‌ಗಳು, ಜೂನಿಯರ್ ಆರ್ಟಿಸ್ಟ್‌ಗಳು, ಚಿತ್ರತಂಡದವರೆಲ್ಲರು ಸೇರಿ 200 ಜನ ಇದ್ದೆವು. ಡಾನ್ಸರ್‌ಗಳ ಎನರ್ಜಿ ಚೆನ್ನಾಗಿತ್ತು. ಕೆಲಸ ಮಾಡಿದ್ದೇ ಗೊತ್ತಾಗಲಿಲ್ಲ. ಹಾಡು ಕೂಡ ತುಂಬ ಚೆನ್ನಾಗಿ ಮೂಡಿ ಬಂದಿದೆ. ಕೇಳುವವರಿಗೆ, ರೀಲ್ಸ್ ಮಾಡುವವರಿಗೆ, ಪಾರ್ಟಿಗಳು, ಪಬ್‌ಗಳಲ್ಲಿ, ಗೆಳೆಯರ ಜತೆ ಇರುವಾಗ ಎಲ್ಲರೂ ಕೇಳುವಂತಹ ಸಾಂಗ್. ಒಳ್ಳೆ ಎನರ್ಜಿ ಕೊಡುವ ಹಾಡು’ ಎಂದು ಮಾಹಿತಿ ನೀಡುತ್ತಾರೆ.

  ಬಾರೋ ಬಾರೋ, ಬಾಟಲ್ ತಾರೋ ; ಮ್ಯಾಟ್ನಿಯಲ್ಲಿ ಸತೀಶ್ ಮತ್ತು ಗೆಳೆಯರ ಹಾಡು, ಹಂಗಾಮ

  ಇದನ್ನೂ ಓದಿ : ಛೂ ಮಂತರ್ ಹಾಡು ರಿಲೀಸ್; ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ರವಿಚಂದ್ರನ್

  ಈ ಹಾಡಿನಲ್ಲಿ ಸತೀಶ್ ಜತೆ ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಪೂರ್ಣಚಂದ್ರ ಮೈಸೂರು, ಯುವನಟ ದಿಗಂತ್ ಕೂಡ ಕುಣಿದು ಸಂಭ್ರಮಿಸಿದ್ದಾರೆ. ಮನೋಹರ್ ಕಾಂಪಲ್ಲಿ ನಿರ್ದೇಶಿಸುತ್ತಿರುವ ಚಿತ್ರವಿದು. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸೆನ್ಸಾರ್‌ಗೆ ಹೋಗುವ ನಿರೀಕ್ಷೆ ಇದೆ.

  ಬಾರೋ ಬಾರೋ, ಬಾಟಲ್ ತಾರೋ ; ಮ್ಯಾಟ್ನಿಯಲ್ಲಿ ಸತೀಶ್ ಮತ್ತು ಗೆಳೆಯರ ಹಾಡು, ಹಂಗಾಮ

  ‘ನಾನಿಲ್ಲಿ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಶ್ರೀಮಂಥ ಮನೆತನದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಆತನ ಗೆಳೆತನ, ಪ್ರೀತಿಯ ಸುತ್ತ ನಡೆಯುವ ಕಥೆ. ಮನೋಹರ್ ತುಂಬ ಪ್ಲ್ಯಾನ್ ಮಾಡಿ ನೀಟಾಗಿ ಸಿನಿಮಾ ಮಾಡಿದ್ದಾರೆ. ಹಾಡುಗಳಂತೆಯೇ ಚಿತ್ರ ಕೂಡ ಅದ್ದೂರಿಯಾಗಿ ಮೂಡಿಬಂದಿದೆ. ರಚಿತಾ ರಾಮ್ ಸೇರಿ ಪ್ರತಿಯೊಬ್ಬರೂ ಚೆನ್ನಾಗಿ ನಟಿಸಿದ್ದಾರೆ.’

  • ಸತೀಶ್ ನೀನಾಸಂ, ನಾಯಕ
  ಬಾರೋ ಬಾರೋ, ಬಾಟಲ್ ತಾರೋ ; ಮ್ಯಾಟ್ನಿಯಲ್ಲಿ ಸತೀಶ್ ಮತ್ತು ಗೆಳೆಯರ ಹಾಡು, ಹಂಗಾಮ

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts