More

    ವೃಷಾ ಸಿನಿ ಕನಸು; ಉತ್ತರ ಕರ್ನಾಟಕ ಹುಡುಗಿಯ ಸ್ಯಾಂಡಲ್‌ವುಡ್ ‘ಲವ್’

    ಬೆಂಗಳೂರು: ಚಿಕ್ಕವಯಸ್ಸಿನಿಂದಲೂ ನಾಟಕ, ನೃತ್ಯದಲ್ಲಿ ಭಾಗವಹಿಸುತ್ತಾ, ಎಂಬಿಎ ಓದು ಮುಗಿಸಿ ಬೆಳ್ಳಿ ಪರದೆಯ ಮೇಲೆ ಮಿಂಚಬೇಕು ಎಂಬ ಕನಸು ಹೊತ್ತಿರುವ ನಟಿ ವೃಷಾ ಪಾಟೀಲ್. ಮಹೇಶ್ ನಿರ್ದೇಶನದ ‘ಲವ್’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ವೃಷಾ ವಿಜಯವಾಣಿ ಜತೆ ಮಾತನಾಡಿದ್ದಾರೆ.

    ಸಿನಿಮಾ ಕನಸು:
    ಎಳೆಯ ವಯಸ್ಸಿನಿಂದಲೇ ನಾಟಕ, ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ವೃಷಾ,‘ನಮ್ಮ ಕಡೆ ಸಿನಿಮಾ ಎಂದರೆ ಜನರಿಗೆ ಸಿಕ್ಕಾಪಟ್ಟೆ ಹುಚ್ಚು. ಆದರೆ, ಚಿತ್ರರಂಗಕ್ಕೆ ಹೋಗುವುದು ಬೇಡ ಅನ್ನುವ ಭಾವವಿದೆ. ಓದು, ಕೆಲಸ, ಮದುವೆ ಎಂಬ ಮನೋಭಾವವಿದೆ. ಆದರೆ, ನನಗೆ ಸಿನಿಮಾ ಮಾಡಲೇಬೇಕು ಎಂಬ ಹಠವಿತ್ತು. ಕೆಲವು ಕಿರುಚಿತ್ರಗಳನ್ನು ಮಾಡಿ, ಬೆಸ್ಟ್ ನಟಿ ಅವಾರ್ಡ್ ಕೂಡ ಪಡೆದೆ. ನಂತರ ಒಂದು ಸಿನಿಮಾ ಮಾಡಿದೆ. ಆದರೆ, ಅದಿನ್ನೂ ರಿಲೀಸ್ ಆಗಿಲ್ಲ. ಈಗ ‘ಲವ್’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಖುಷಿಯಾಗುತ್ತಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

    ವೃಷಾ ಸಿನಿ ಕನಸು; ಉತ್ತರ ಕರ್ನಾಟಕ ಹುಡುಗಿಯ ಸ್ಯಾಂಡಲ್‌ವುಡ್ ‘ಲವ್’

    ಮೊದಲ ಸಿನಿಮಾದ ಖುಷಿ:
    ‘ಲವ್’ ಸಿನಿಮಾಗೆ ಆಯ್ಕೆ ಆಗಿದ್ದರ ಬಗ್ಗೆ ವೃಷಾ, ‘ಚಿತ್ರರಂಗಕ್ಕೆ ಬರುವುದು ಸುಲಭ, ಇನ್‌ಲ್ುಯನ್ಸ್ ಇದ್ದರೆ ಸುಲಭಕ್ಕೆ ಅವಕಾಶಗಳು ಸಿಗಬಹುದು ಎಂದುಕೊಂಡಿದ್ದೆ. ಆದರೆ, ಅಷ್ಟು ಸುಲಭವಿಲ್ಲ ಎನ್ನುವುದು ನಂತರ ಗೊತ್ತಾಯಿತು. ಆದರೆ, ಲಾಕ್‌ಡೌನ್‌ನಲ್ಲಿ ಮಹೇಶ್ ಅವರು ಕರೆ ಮಾಡಿ ‘ಲವ್’ ಸಿನಿಮಾದ ಕಥೆ ಹೇಳಿದರು. ಈ ಕಥೆ ಇಷ್ಟವಾಗಿ, ಒಳ್ಳೆಯ ಅವಕಾಶ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. ನಂತರ ಆಡಿಷನ್ ಹಾಗೂ ಮೂರು ದಿನದ ವರ್ಕ್‌ಶಾಪ್ ಬಳಿಕ ನಾನು ಪಾತ್ರಕ್ಕೆ ಆಯ್ಕೆಯಾದೆ’ ಎನ್ನುತ್ತಾರೆ ವೃಷಾ.

    ವೃಷಾ ಸಿನಿ ಕನಸು; ಉತ್ತರ ಕರ್ನಾಟಕ ಹುಡುಗಿಯ ಸ್ಯಾಂಡಲ್‌ವುಡ್ ‘ಲವ್’

    ವಿಭಿನ್ನ ಲವ್ ಸ್ಟೋರಿ:
    ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವೃಷಾ,‘ನಾನಿಲ್ಲಿ ಜೋಯಾ ಎಂಬ ಪಾತ್ರ ಮಾಡುತ್ತಿದ್ದೇನೆ. ಕಟ್ಟುಪಾಡುಗಳಿರುವ ಮನೆಯಲ್ಲಿ ಬೆಳೆದ ಮುಗ್ಧ ಹುಡುಗಿ. ಆಕೆಗೆ ನಾಯಕನ ಮೇಲೆ ಪ್ರೀತಿ ಹುಟ್ಟಿ ತಾನೇ ಅವನ ಹಿಂದೆ ಹೋಗುತ್ತಾಳೆ. ಇದೊಂದು ಸುಂದರ ಪ್ರೇಮಕಥೆ. ಕುಂದಾಪುರದಲ್ಲಿ ಚಿತ್ರೀಕರಣದ ವೇಳೆ ನಾನೊಬ್ಬಳೇ ಹುಡುಗಿ ಇದ್ದಿದ್ದು. ಅಲ್ಲಿ ಸಮೀಪದಲ್ಲಿದ್ದ ಮನೆಯವರನ್ನು ಪರಿಚಯ ಮಾಡಿಕೊಂಡು ಊಟ, ತಿಂಡಿ ಎಲ್ಲದಕ್ಕೂ ಅವರ ಮನೆಗೆ ಹೋಗುತ್ತಿದ್ದೆ. ಚಿತ್ರದ ನಾಯಕ ಪ್ರಜಯ್ ಮತ್ತು ನಾನೂ ಇಬ್ಬರೂ ಸಂಕೋಚ ಸ್ವಭಾದವರು. ಹೀಗಾಗಿ ರೊಮ್ಯಾಂಟಿಕ್ ಸನ್ನಿವೇಶಗಳನ್ನು ಶೂಟ್ ಮಾಡುವಾಗ ಇಬ್ಬರಿಗೂ ಸ್ವಲ್ಪ ಕಷ್ಟ ಆಗುತ್ತಿತ್ತು’ ಎನ್ನುತ್ತಾರೆ.

    ವೃಷಾ ಸಿನಿ ಕನಸು; ಉತ್ತರ ಕರ್ನಾಟಕ ಹುಡುಗಿಯ ಸ್ಯಾಂಡಲ್‌ವುಡ್ ‘ಲವ್’

    ಮಹೇಶ್, ನಿರ್ದೇಶಕ
    ಸಿನಿಮಾದಲ್ಲೂ ಹೊಸತನ ಬೇಕು. ಹಿಂದೆ ಹಾರರ್ ಮಾಡಿದ್ದೆ. ಈಗ ಲವ್. ಮುಂದೆ ಲವ್ ಮತ್ತು ಆ್ಯಕ್ಷನ್ ಪ್ರಯತ್ನಿಸುತ್ತೇನೆ. ಸದ್ಯ ಟೀಸರ್ ಮತ್ತು ಟ್ರೇಲರ್‌ನ್ನು ಜನರು ಮೆಚ್ಚಿಕೊಂಡಿದ್ದಾರೆ. ನೈಜಘಟನೆಯನ್ನು ಎಳೆಯಾಗಿ ಇಟ್ಟುಕೊಂಡು ಮಾಡಿರುವ ಸಿನಿಮಾ ‘ಲವ್’. ಪ್ರೀತಿಸುವವರನ್ನು ದ್ವೇಷಿಸುವುದು ತಂದೆ, ತಾಯಿಯರಿಗೆ ಅನಿವಾರ್ಯವೇ? ಎಂಬ ವಿಷಯ ಇದರ ಕೇಂದ್ರ. ಇದೇ ಅ.6ಕ್ಕೆ ಚಿತ್ರ ರಿಲೀಸ್ ಆಗಲಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts