More

    ರಾವೆನ್ ಚಿತ್ರಕ್ಕೆ ಮುಹೂರ್ತ; ವೇದ್ ನಿರ್ದೇಶನದಲ್ಲಿ ದಿಲೀಪ್ ಪೈ, ಸ್ವಪ್ನಾ, ಕುಂಕುಮ್

    ಬೆಂಗಳೂರು: ಕಾಗೆಯೇ ಕೇಂದ್ರವಾಗಿಟ್ಟುಕೊಂಡು ನಿರ್ದೇಶಕ ವೇದ್ ಹೊಸ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ‘ರಾವೆನ್’. ಇದೂ ಕೂಡ ಒಂದು ಜಾತಿಯ ಕಾಗೆಯ ಹೆಸರೇ ಆಗಿದ್ದು, ಹೀಗಾಗಿ ಈ ಶೀರ್ಷಿಕೆ ಇಡಲಾಗಿದೆ ಎಂದು ಹೇಳಿಕೊಳ್ಳುತ್ತದೆ ಚಿತ್ರತಂಡ. ಸೋಮವಾರ (ಸೆ.11) ಚಿತ್ರದ ಹೊಸ ಪೋಸ್ಟರ್ ಅನಾವರಣ ಹಾಗೂ ಮುಹೂರ್ತ ನಡೆಯಿತು.

    ಇದೇ 21ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ಮೈಸೂರು, ಉಡುಪಿಯಲ್ಲಿ ಶೂಟಿಂಗ್ ಮಾಡುವ ಆಲೋಚನೆ ಚಿತ್ರತಂಡದ್ದು. ನಿರ್ದೇಶಕ ವೇದ್, ‘ಎಲ್ಲರೂ ಕಾಗೆಯನ್ನು ನೆಗೆಟಿವ್ ಆಗಿ ನೋಡುತ್ತಾರೆ. ಆದರೆ, ಅದರಲ್ಲೊಂದು ಪಾಸಿಟಿವ್ ಇದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಿದ್ದೇವೆ. ಈ ಕಾಲದ ಟ್ರೆಂಡ್‌ಗೆ ಹೊಂದುವಂಥ ತಂತ್ರಜ್ಞಾನವನ್ನು ಬಳಸಿ ಮಾಡುತ್ತಿರುವ ಸಿನಿಮಾ. ಇಡೀ ಚಿತ್ರದಲ್ಲಿ ಕಾಗೆಯೇ ಮುಖ್ಯ. ಅದರ ಸುತ್ತಲೂ ಉಳಿದ ಪಾತ್ರಗಳನ್ನು ಹೆಣೆಯಲಾಗಿದೆ. ಇದೊಂದು ಹಾರರ್, ಸೈಕಲಾಜಿಕಲ್ ಥ್ರಿಲ್ಲರ್, ಕ್ರೈಂ ಜಾನರ್‌ಗೆ ಸೇರುವ ಚಿತ್ರ’ ಎಂದು ಮಾಹಿತಿ ನೀಡಿದರು. ನಾಯಕ ದಿಲೀಪ್ ಪೈ, ‘ಕಳೆದ ಒಂದು ತಿಂಗಳಿಂದ ಈ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಈ ಸಿನಿಮಾ ಸದ್ಯ ಮೂರ್ನಾಲ್ಕು ಭಾಷೆಗಳಲ್ಲಿ ರಿಲೀಸ್ ಮಾಡುವ ಆಲೋಚನೆಯಿದೆ’ ಎಂದರು.

    ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಕುಂಕುಮ್ ಹಾಗೂ ಸ್ವಪ್ನಾ ಶೆಟ್ಟಿಗಾರ್ ಬಣ್ಣ ಹಚ್ಚಲಿದ್ದಾರೆ. ಇನ್ನು ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ ಹಾಗೂ ಕ್ರಿಸ್ಟರ್ ಜೇಸನ್ ಸಂಗೀತವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts