More

    ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

    ರಾಜಮಂಡ್ರಿ (ಆಂಧ್ರಪ್ರದೇಶ): ಅತ್ಯಂತ ಅಚ್ಚರಿ ಹಾಗೂ ಪಾಲಕರಿಗೆ ಗಾಬರಿ ಹುಟ್ಟಿಸುವಂಥ ಘಟನೆಯೊಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ. ಅದೇನೆಂದರೆ ಶಾಲೆಯ ಒಳಗೇ ವಿದ್ಯಾರ್ಥಿಯೊಬ್ಬ, ತನ್ನ ಕ್ಲಾಸ್​ಮೇಟ್​ ವಿದ್ಯಾರ್ಥಿನಿಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾನೆ!

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿದ್ದು, ಅದರ ಫೋಟೋ ಇದೀಗ ವೈರಲ್​ ಆಗಿದೆ.

    ಇದನ್ನೂ ಓದಿ: ಡಿವೋರ್ಸ್​ ಕೊಟ್ಟಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ ಬಾಲಕ!

    ತಮ್ಮ ಮಕ್ಕಳು ಈ ರೀತಿ ಮಾಡಿದ್ದಾರೆ ಎಂದು ಪಾಲಕರಿಗೆ ಅರಿವೇ ಇರಲಿಲ್ಲ. ಯಾವಾಗ ಈ ಫೋಟೋ ವೈರಲ್​ ಆಗಿ ಅವರ ಕಣ್ಣಿಗೂ ಬಿತ್ತೋ, ವಿದ್ಯಾರ್ಥಿಗಳ ಪಾಲಕರು ದಂಗಾಗಿಹೋಗಿದ್ದಾರೆ. ವಿವಾಹವು ವಿನೋದಕ್ಕಾಗಿ ನಡೆದಿದೆಯೆ, ಯಾರಿಗಾದರೂ ಚಾಲೆಂಜ್​ ಮಾಡಿರುವುದಕ್ಕೆ ನಡೆದಿದೆಯೇ ಅಥವಾ ನಿಜವಾಗಿಯೂ ಇವರಿಬ್ಬರು ಪ್ರೇಮಿಗಳಾಗಿದ್ದು, ನಿಜವಾಗಿಯೂ ಮದುವೆ ಮಾಡಿಕೊಂಡಿದ್ದಾರೆಯ? ಈ ಫೋಟೋದ ಅಸಲಿಯತ್ತೇನು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಸದ್ಯ ವಿಷಯ ಕಾಲೇಜು ಪ್ರಾಂಶುಪಾಲರಿಗೆ ತಿಳಿದಿದ್ದು, ಇಬ್ಬರನ್ನೂ ಶಾಲೆಯಿಂದ ಹೊರಹಾಕಲಾಗಿದೆ. ಟಿ.ಸಿ ಕೊಟ್ಟು ಕಳುಹಿಸಿರುವುದಾಗಿ ತಿಳಿದುಬಂದಿದೆ.

    ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

    ಡ್ರಗ್ಸ್​ ಪ್ರಕರಣ: ಭಾರ್ತಿ, ಕರಿಷ್ಮಾಗೆ ಬೇಲ್​- ಇಬ್ಬರು ತನಿಖಾಧಿಕಾರಿಗಳು ಸಸ್ಪೆಂಡ್​!

    ಮಥುರಾದಲ್ಲಿ ಶ್ರೀಕೃಷ್ಣ ದೇಗುಲ ನಿರ್ಮಿಸಲು ಮರಗಳು ಕಟ್​- ಯೋಗಿ ಸರ್ಕಾರಕ್ಕೆ ‘ಸುಪ್ರೀಂ’ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts