More

    ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಲೆಯೊಂದರಲ್ಲಿ ರಾತ್ರಿಯಿಡೀ ಇದ್ದಕ್ಕಿದ್ದಂತೆಯೇ ಬಡಿದುಕೊಂಡ ಬಾಗಿಲಿನಿಂದ ಸುತ್ತಲಿನ ಜನ ಭಯಭೀತರಾಗಿ ಕಂಗೆಟ್ಟುಹೋದ ಘಟನೆ ನಡೆದಿದೆ.

    ಕಾರವಾರ ನಗರದ ಬಾಡದಲ್ಲಿರುವ ಶಿವಾಜಿ ಶಾಲೆ ಎಲ್ಲಾ ಶಾಲೆಗಳಂತೆಯೇ ಇನ್ನೂ ತೆರೆದಿಲ್ಲ. ಅದಕ್ಕೆ ಲಾಕ್​ ಹಾಕಲಾಗಿತ್ತು. ಆದರೆ ಏಕಾಏಕಿ ಬಾಗಿಲು ಬಡಿದುಕೊಂಡ ಶಬ್ದವಾಗಿದೆ. ಅದನ್ನು ಅದೇ ಮಾರ್ಗವಾಗಿ ಹೋಗುತ್ತಿದ್ದವರು ನೋಡಿದ್ದಾರೆ. ಎಲ್ಲೆಡೆ ಕತ್ತಲು ಕವಿದಿದ್ದಾಗ ಈ ಶಬ್ದ ಕೇಳಿಬಂದಿದೆ.

    ಆದರೂ ಧೈರ್ಯ ಮಾಡಿ ಒಂದಿಬ್ಬರು ಮೊದಲು ಬಾಗಿಲ ಬಳಿ ಹೋಗಿ ಯಾರಿದ್ದೀರಿ? ಯಾರಿದು ಎಂದೆಲ್ಲಾ ಕೇಳಿದ್ದಾರೆ. ಹೊರಗಿನಿಂದ ಶಬ್ದ ಕೇಳುತ್ತಿದ್ದಂತೆಯೇ ಒಳಗಿನಿಂದ ಒಂದು ರೀತಿಯ ವಿಚಿತ್ರ ಶಬ್ದ ಕೇಳಿದೆ, ಆದರೆ ಬಾಗಿಲು ಬಡಿಯುವುದು ಮಾತ್ರ ಮುಂದುವರೆದಿದೆ. ಅದು ಮನುಷ್ಯರ ರೀತಿಯ ಶಬ್ದವೂ ಆಗಿರಲಿಲ್ಲ, ಅಥವಾ ಬಾಗಿಲು ಬಡಿಯುವುದು ಮನುಷ್ಯರಂತೆಯೂ ಇರಲಿಲ್ಲ.

    ಇದರಿಂದ ಅಲ್ಲಿಗೆ ಹೋದವರು ಬೆಚ್ಚಿಬಿದ್ದಿದ್ದಾರೆ. ಆಮೇಲೆ ಸಮೀಪದ ಜನರನ್ನು ಕರೆದುಕೊಂಡು ಬಂದಿದ್ದಾರೆ. ಎಷ್ಟೇ ಕೇಳಿದರೂ, ಶಬ್ದ ಸ್ವಲ್ಪ ಹೊತ್ತು ನಿಂತಂತೆ ಆಗಿ ಮತ್ತೆ ಕೇಳಿಸುತ್ತಿದೆ. ಯಾರನ್ನಾದರೂ ಇಲ್ಲಿ ಕೂಡಿ ಹಾಕಿರಬಹುದು, ಅವರ ಕೈ ಕಾಲು ಕಟ್ಟಿರಬಹುದು, ಆದ್ದರಿಂದ ಮಾತನಾಡಲು ಆಗುತ್ತಿಲ್ಲ ಎಂದು ಅಲ್ಲಿಯೇ ಇರುವ ಕಿಟಕಿಯಿಂದ ಇಣುಕಿ ನೋಡಿದರೆ ಕತ್ತಲು ಬಿಟ್ಟರೆ ಮನುಷ್ಯರು ಅಲ್ಲಿ ಇರುವುದು ಕಾಣಿಸಲಿಲ್ಲ.

    ಆದರೆ ಬಾಗಿಲು ಬಡಿಯುವುದು ಮಾತ್ರ ನಿಂತಿಲ್ಲ. ಇದರಿಂದ ಬೆದರಿದ ಊರಿನವರು ಕೂಡಲೇ ಪೊಲೀಸರಿಗೆ ಫೋನಾಯಿಸಿದ್ದಾರೆ. ಪೊಲೀಸರು ಸಹ ಬಂದು ನೋಡಿದಾಗಲೂ ಒಳಗಿಂದ ಯಾವುದೇ ಧ್ವನಿ ಬಾರದಿದ್ದಾಗ ಅವರಿಗೂ ಸ್ವಲ್ಪ ಆತಂಕವಾಗಿದೆ. ನಂತರ ಶಾಲೆಗೆ ಬೀಗ ತೆಗೆದಿದ್ದಾರೆ.

    ನೀವೂ ನೋಡಿ ಈ ವಿಡಿಯೋ- ಈ ಲಿಂಕ್​ ಕ್ಲಿಕ್ಕಿಸಿ…

    https://www.facebook.com/VVani4U/videos/388418645709287/

    ಒಳಗಡೆ ಏನಾಗಿದೆ ಎಂದು ಪೊಲೀಸರಾದಿಯಾಗಿ ಎಲ್ಲರೂ ಗಾಬರಿಯಿಂದ ನೋಡುತ್ತಿದ್ದಾಗಲೇ ಬಾಗಿಲು ತೆರೆಯುತ್ತಿದ್ದಂತೆಯೇ ಎಲ್ಲರೂ ಸುಸ್ತಾಗಿ ಹೋದರು, ಜೋರಾಗಿ ನಗತೊಡಗಿದರು. ಏಕೆಂದರೆ ಒಳಗಿನಿಂದ ನಾಯಿಯೊಂದು ಬಾಗಿಲು ತೆರೆಯುತ್ತಿದ್ದಂತೆಯೇ ಹೊರಕ್ಕೆ ಬಂದಿದೆ!

    ಒಳಗಡೆ ಏನಿರಬಹುದು ಎಂದು ಅದರ ವಿಡಿಯೋ ಮಾಡಲಾಗುತ್ತಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೋಡುಗರಿಗೂ ಮೊದಲು ಆತಂಕವಾದರೂ ನಂತರ ಎಲ್ಲರೂ ನಗುವಂತಾಗಿದೆ.

    ಬಸ್ಸೊಳಗೆ ತೂರಿಬಂದ ಪೈಪ್​​- ಶಿಶು ಎತ್ತಿಕೊಂಡಿದ್ದ ಯುವತಿಯ ರುಂಡವೇ ಕಟ್ಟಾಯ್ತು!

    ಅರ್ಚಕರು ಅರೆಬೆತ್ತಲೆಯಲ್ಲಿರ್ತಾರೆ- ಭಕ್ತರಿಗೇಕೆ ಸಂಪ್ರದಾಯದ ಉಡುಗೆ ಎಂದು ಪ್ರಶ್ನಿಸಿದ ಹೋರಾಟಗಾರ್ತಿ!

    ಲವ್ ಜಿಹಾದಿಗಳ​ ನಂತರ ಇದೀಗ ವಿವಾಹಿತರಿಗೆ ಮತ್ತೊಂದು ಶಾಕ್​ ನೀಡಿದ ಯೋಗಿ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts