More

  ಆತನಿಗೋಸ್ಕರ 2,400 ಕಿ.ಮೀ ಪ್ರಯಾಣಿಸಿದ ಯುವತಿಗೆ ಕಾದಿತ್ತು ಭಾರೀ ಶಾಕ್! ನುಚ್ಚುನೂರಾಯಿತು ಮನದ ಪ್ರೀತಿ

  ಪ್ರೀತಿಗಾಗಿ, ಪ್ರೀತಿಗೋಸ್ಕರ ಪ್ರೇಮಿಗಳು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಅದರಲ್ಲೂ ಪ್ರಸ್ತುತ 6ಜಿ ಕಾಲಘಟ್ಟದಲ್ಲಿರುವ ಇಂದಿನ ಯುವಜನತೆ ಬಗ್ಗೆ ಕೇಳಬೇಕಾ? ಪ್ರೀತಿ ಬೆಳೆಸಲು, ಮುಂದುವರಿಸಲು ಮತ್ತು ಅಂತ್ಯಗೊಳಿಸಲು ಮೊಬೈಲ್ ಒಂದೇ ಒಂದು ಸಾಕು. ಎಲ್ಲವೂ ಕೇವಲ ಅಂಗೈ ಗಾತ್ರದ ಸ್ಮಾರ್ಟ್​ಫೋನ್​ನಲ್ಲಿಯೇ ಮುಗಿದು ಹೋಗುತ್ತದೆ. ಈ ಹಿಂದಿನಿಂದಲೂ ಪ್ರೀತಿ ಕುರುಡು, ಪ್ರೇಮ ಕುರುಡು ಎಂಬ ಮಾತುಗಳನ್ನು ನಾವು-ನೀವೆಲ್ಲಾ ಕೇಳಿದ್ದೇವೆ. ಆದ್ರೆ, ಪ್ರೀತಿ ಇಷ್ಟೊಂದು ಕುರುಡು ಎಂಬುದು ಈ ಯುವತಿಯ ಅಳಲು ನೋಡಿದ ಮೇಲೆ ಸ್ಪಷ್ಟವಾಯಿತು.

  ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ನಾನಿಲ್ಲವೆಂದು ಪೊಲೀಸರಿಗೆ ಚಳ್ಳೆಹಣ್ಣು ನಟಿ ಹೇಮಾ! ಈಕೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು..

  ಆನ್​​ಲೈನ್​ನಲ್ಲಿ ಶುರುವಾಗುವ ಪ್ರೀತಿ ಹೆಚ್ಚು ಹಾರ್ಟ್​ ಬ್ರೇಕ್​ನಲ್ಲೇ ಅಂತ್ಯಗೊಳ್ಳುತ್ತಿದೆ. ಮುಖ ಪರಿಚಯವಿಲ್ಲದ ವ್ಯಕ್ತಿಗಳೊಂದಿಗೆ ಸ್ನೇಹ ಬೆಳಸಿ, ನೇರವಾಗಿ ಭೇಟಿಯಾಗದೆ, ಅವರು ಕಳುಹಿಸುವ ತಾತ್ಕಾಲಿಕ ಖುಷಿಪಡಿಸುವ ಸಂದೇಶಗಳನ್ನು ನೋಡುತ ಪ್ರೀತಿಯಲ್ಲಿ ಮುಳುಗುವವರ ಸಂಖ್ಯೆ ವ್ಯಾಪಕವಾಗಿ ಹೆಚ್ಚಿದ್ದು, ಕಡೆಗೆ ಒಂದು ದಿನ ಅವರ ಕರಾಳ ಮುಖ ಬಟಾಬಯಲಾದಾಗ, ದುರಂತ್ಯ ಅಂತ್ಯ ನೋಡಲು ಬಯಸುತ್ತಾರೆ ಅಥವಾ ಪ್ರೇಮ ಸಂಬಂಧವನ್ನು ಹೊಸಕಿ ಹಾಕಿ, ಮುಂದೆ ಸಾಗುತ್ತಾರೆ. ಇದೇ ರೀತಿಯಲ್ಲಿ ಇಲ್ಲೊಬ್ಬಳು ಯುವತಿ ತನ್ನ ಪ್ರಿಯಕರನಿಗೋಸ್ಕರ 2,400 ಕಿ.ಮೀ ಪ್ರಯಾಣಿಸಿ ಭಾರೀ ಆಘಾತಕ್ಕೊಳಗಾಗಿದ್ದಾಳೆ.

  ಇಂಡಿಯಾನ ಮೂಲದ ಯುವತಿ ಜಾಸ್ಮಿನ್​, ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ಜಮಾಲ್​ ಎಂಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದರು. ಇಬ್ಬರ ಮಧ್ಯೆ ಉತ್ತಮ ಬಾಂಧವ್ಯ ಸಹ ಮೂಡಿತ್ತು. ಇದೇ ಖುಷಿಯಲ್ಲಿ ಜಮಾಲ್​, ನಿನ್ನನ್ನು ನೋಡಬೇಕು, ನಾವಿಬ್ಬರು ಪರಸ್ಪರ ಭೇಟಿಯಾಗೋಣ ಟೆಕ್ಸಸ್​ಗೆ ಬಾ. ಇಲ್ಲಿಯೇ ಸಿಗ್ತೀನಿ ಎಂದು ಹೇಳಿದ್ದಾನೆ. ಇದರಿಂದ ಉತ್ಸಾಹಕ್ಕೊಳಗಾದ ಜಾಸ್ಮಿನ್, ತನ್ನ ಪ್ರಿಯರಕನನ್ನು ನೋಡಲು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು 2,400 ಕಿ.ಮೀ ದೂರ ಪ್ರಯಾಣಿಸಿದ್ದಾಳೆ.

  ಇದನ್ನೂ ಓದಿ: ಬೆಂಗಳೂರಿಗೆ ಪಾರ್ಟಿಗೆ ಬಂದು ಡಸ್ಟ್‌ಬಿನ್ ಕವರ್‌ನಲ್ಲಿ ಮುಖ ಮುಚ್ಚಿಕೊಂಡು ಹೊರಗೆ ಹೋದ್ರು

  ಇನ್ನೇನು ಏರ್​ಪೋರ್ಟ್​ಗೆ ಬರುತ್ತಿದ್ದೇನೆ ಎನ್ನುವಷ್ಟರಲ್ಲೇ ಆತ ತನ್ನ ಫೋನ್​ನಲ್ಲಿ ಜಾಸ್ಮಿನ್ ನಂಬರ್ ಅನ್ನು ಎಲ್ಲಾ ಕಡೆಯಿಂದಲೂ ಬ್ಲಾಕ್ ಮಾಡಿದ್ದಾನೆ. ಇದು ಯುವತಿ ಏರ್​ಪೋರ್ಟ್​ಗೆ ಬಂದಾಗ ಸ್ಪಷ್ಟವಾಗಿದೆ. ಇದಕ್ಕೂ ಮುನ್ನ ಆಕೆಗೆ ಕಡೆಯ ಮಸೇಜ್ ಕಳುಹಿಸಿದ ಜಮಾಲ್, ನಿನಗೋಸ್ಕರ ಇನ್ನೂ ಹೆಚ್ಚು ಸಮಯ ಕಾಯಲು ಆಗುವುದಿಲ್ಲ ಎಂದು ಹೇಳಿ, ಬ್ಲಾಕ್ ಮಾಡಿದ್ದಾನೆ. ಇದರಿಂದ ಭಾರೀ ಆಘಾತಕ್ಕೊಳಗಾದ ಯುವತಿ, ಸ್ಥಳೀಯ ಮಾಧ್ಯಮಗಳ ಮುಂದೆ ಘಟನೆ ನೆನೆದು ಕಣ್ಣೀರಿಟ್ಟಿದ್ದಾಳೆ,(ಏಜೆನ್ಸೀಸ್).

  ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

  ಲೀಗ್​ನಿಂದ ಹೊರಬಿದ್ದ MI​ಗೆ ನೀತಾ ಅಂಬಾನಿ ಕ್ಲಾಸ್​; ರೋಹಿತ್​, ಹಾರ್ದಿಕ್​ಗೆ ವಿಶೇಷ ಕಿವಿಮಾತು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts