More

    ಲವ್ ಜಿಹಾದಿಗಳ​ ನಂತರ ಇದೀಗ ವಿವಾಹಿತರಿಗೆ ಮತ್ತೊಂದು ಶಾಕ್​ ನೀಡಿದ ಯೋಗಿ ಸರ್ಕಾರ

    ಲಖನೌ: ಮದುವೆಯ ಹೆಸರಿನಲ್ಲಿ ಮತಾಂತರ ಮಾಡುವ ಪ್ರಕ್ರಿಯೆಯ (ಲವ್​ ಜಿಹಾದ್​) ವಿರುದ್ಧ ಬಹುದೊಡ್ಡ ನಿರ್ಧಾರ ತೆಗೆದುಕೊಂಡು ಕಾನೂನು ಜಾರಿಗೆ ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.

    ವಿವಾಹಕ್ಕೆ ಸಂಬಂಧಿಸಿದಂತೆಯೇ ಇನ್ನೊಂದು ಯೋಜನೆ ಇದಾಗಿದೆ. 44 ವರ್ಷಗಳ ಹಿಂದಿನ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಇದು! 1976ರಲ್ಲಿನ ಈ ಯೋಜನೆಯನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ.

    1976ರಲ್ಲಿ ಜಾರಿಗೆ ತಂದ ಯೋಜನೆಯ ಅನ್ವಯ, ಅಂತರ್​ಧರ್ಮೀಯ ವಿವಾಹವಾದರೆ 50 ಸಾವಿರ ರೂಪಾಯಿಗಳ ಧನಸಹಾಯ ನೀಡಲಾಗುತ್ತಿತ್ತು. ಉತ್ತರ ಪ್ರದೇಶ ರಾಷ್ಟ್ರೀಯ ಏಕೀಕರಣ ಇಲಾಖೆ ಇದನ್ನು ಶುರು ಮಾಡಿತ್ತು. ಅದನ್ನೀಗ ರದ್ದು ಮಾಡಲು ಯೋಗಿ ಸರ್ಕಾರ ಚಿಂತನೆ ನಡೆಸಿದೆ.

    ಇದನ್ನೂ ಓದಿ: ಲವ್​ ಜಿಹಾದ್​- ಪ್ರೇಯಸಿ ‘ಮಿಸ್ಸಿಂಗ್’: ಹೈಕೋರ್ಟ್​ಗೆ​ ಹೋದ ಮುಸ್ಲಿಂ ಯುವಕನಿಗೆ ಸಿಕ್ಕೇ ಬಿಡ್ತು ಜಯ

    ಬೇರೆ ಬೇರೆ ಧರ್ಮದವರು ವಿವಾಹವಾದರೆ ಮದುವೆಯಾದ ಎರಡು ವರ್ಷಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅವರಿಗೆ ಅರ್ಜಿ ಸಲ್ಲಿಸುವ ಮೂಲಕ ಸಹಾಯಧನವನ್ನು ಪಡೆಯಲು ಇದರಲ್ಲಿ ಅವಕಾಶ ಇದೆ. ಇಂಥ ದಂಪತಿಗೆ 50ಸಾವಿರ ರೂಪಾಯಿಗಳ ಸಹಾಯಧನ ನೀಡಲಾಗುತ್ತಿದೆ. ಈ ರೀತಿ ಅರ್ಜಿ ಬಂದರೆ ಅದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ರಾಷ್ಟ್ರೀಯ ಏಕೀಕರಣ ಇಲಾಖೆಗೆ ಕಳುಹಿಸುತ್ತಾರೆ. ನಂತರ ದಂಪತಿಗೆ ಸಹಾಯಧನ ನೀಡಲಾಗುತ್ತದೆ.

    2017ರಲ್ಲಿ ಯೋಗಿ ಸರ್ಕಾರ ಈ ಯೋಜನೆಗೆ ಒಂದು ಉಪನಿಯಮ ಸೇರಿಸಿತ್ತು. ಅದೇನೆಂದರೆ ಈ ರೀತಿ ಅಂತರ್​​ಧರ್ಮಿಯರು ಮದುವೆಯಾದರೆ, ಮತಾಂತರಗೊಳ್ಳಲು ಸಾಧ್ಯವಿಲ್ಲ. ಹೀಗಾದರೆ ಮಾತ್ರ ಅಂಥವರಿಗೆ ಹಣ ನೀಡಲಾಗುವುದು ಎಂದು ತಿದ್ದುಪಡಿ ಮಾಡಲಾಗಿದೆ.

    ಕಳೆದ ವರ್ಷ 11 ದಂಪತಿ ಈ ಸಹಾಯಧನ ಪಡೆದಿದ್ದು, ನಾಲ್ಕು ಅರ್ಜಿಗಳು ಬಾಕಿ ಇವೆ. ಈ ವರ್ಷ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಇದೀಗ ಈ ಯೋಜನೆಯ ರದ್ದತಿಗೆ ಚಿಂತನೆ ನಡೆಸಲಾಗಿದೆ.

    ಅರ್ಚಕರು ಅರೆಬೆತ್ತಲೆಯಲ್ಲಿರ್ತಾರೆ- ಭಕ್ತರಿಗೇಕೆ ಸಂಪ್ರದಾಯದ ಉಡುಗೆ ಎಂದು ಪ್ರಶ್ನಿಸಿದ ಹೋರಾಟಗಾರ್ತಿ!

    ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

    ಮಹಿಳೆ ಮತ್ತು ಐವರು ಮಕ್ಕಳ ಮೇಲೆ ‘ದೆವ್ವ’ದ ಹಲ್ಲೆ- ನಾಲ್ವರ ಸಾವು!

    ರಾಯಚೂರು ಯುವತಿಯ ಖತರ್ನಾಕ್​ ಪ್ಲ್ಯಾನ್​ : ಲವರ್ ​ ಜತೆಸೇರಿ ಭಾವಿಪತಿಯನ್ನೇ ಮುಗಿಸಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts