ಬಸ್ಸೊಳಗೆ ತೂರಿಬಂದ ಪೈಪ್​​- ಶಿಶು ಎತ್ತಿಕೊಂಡಿದ್ದ ಯುವತಿಯ ರುಂಡವೇ ಕಟ್ಟಾಯ್ತು!

gaspipe
Published on

ಪಾಲಿ (ರಾಜಸ್ಥಾನ): ಅತ್ಯಂತ ಭಯಾನಕ ಎನ್ನುವಂಥ ಅಪಘಾತವೊಂದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಗ್ಯಾಸ್ ಪೈಪ್‍ಲೈನ್ ಬಸ್‍ನೊಳಗೆ ನುಗ್ಗಿದ ಪರಿಣಾಮವಾಗಿ ಬಸ್ಸಿನಲ್ಲಿ ಕುಳಿತಿದ್ದ ಯುವತಿಯ ರುಂಡ ಕಟ್ಟಾಗಿರುವ ಭೀಕರ ಅಪಘಾತವಿದು.

ಸುಮೇರಪುರ ಸಾಂಡೇರಾವ್ ಬಳಿಕ ರಾಷ್ಟ್ರೀಯ ಹೆದ್ದಾರಿ 162ರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರುಂಡ ಕಟ್ಟಾಗಿ ಹೋದ ಮಹಿಳೆಯನ್ನು ನೈನಾ ದೇವಿ ಎಂದು ಗುರುತಿಸಲಾಗಿದೆ. ಸಂದರ್ಭದಲ್ಲಿ ಆಕೆ ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡಿದ್ದರು. ಮಗುವಿಗೆ ಯಾವುದೇ ಹಾನಿಯಾಗಿಲ್ಲ. ಬದಲಾಗಿದೆ ಮಹಿಳೆ ಸೇರಿದಂತೆ ಇನ್ನೋರ್ವ ಪ್ರಯಾಣಿಕರು ಮೃತಪಟ್ಟಿದ್ದಾರೆ. ಇವರನ್ನು ಭಂವರ್ ಲಾಲ್ ಪ್ರಜಾಪತ್ ಎಂದು ಗುರುತಿಸಲಾಗಿದೆ.

ಬಸ್ ಮಾರಾವಾಢ ಜಂಕ್ಷನ್ ನಿಂದ ಪುಣೆಯತ್ತ ಹೊರಟಿತ್ತು. ಸಾಂಡೇರಾವ್ ಬಳಿ ಹೆದ್ದಾರಿ ಪಕ್ಕದಲ್ಲಿಯೇ ಕೆಲ ದಿನಗಳಿಂದ ಗ್ಯಾಸ್ ಪೈಪ್‍ಲೈನ್ ಅಳವಡಿಕೆಯ ಕೆಲಸ ನಡೆಯುತ್ತಿತ್ತು.

ಮಂಗಳವಾರ ಸಹ ಹೆದ್ದಾರಿ ಪಕ್ಕದಲ್ಲಿಯೇ ಗ್ಯಾಸ್ ಪೈಪ್‍ಗಳನ್ನು ಅಳವಡಿಸಲಾಗುತ್ತಿತ್ತು. ಪೈಪ್‍ಲೈನ್ ಎತ್ತಿದ್ದ ಕ್ರೇನ್ ವಾಹನ ಅದನ್ನ ನಿಧಾನವಾಗಿ ತೋಡಿರುವ ಗುಂಡಿಯಲ್ಲಿ ಇರಿಸಬೇಕಿತ್ತು. ಪೈಪ್ ಎತ್ತಿದಾಗ ಕ್ರೇನ್ ಅತಿಯಾದ ಭಾರದಿಂದ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಪೈಪ್ ನೇರವಾಗಿ ಪಕ್ಕದಲ್ಲಿ ಹೋಗ್ತಿದ್ದ ಬಸ್ ನೊಳಗೆ ಒಂದು ಕಡೆಯಿಂದ ನುಗ್ಗಿ ಹೊರ ಬಂದಿದೆ ಎನ್ನಲಾಗಿದೆ.

ಬಸ್ ಸ್ಲೀಪರ್ ಕೋಚ್ ಆಗಿದ್ದರಿಂದ ಹೆಚ್ಚಿನ ಪ್ರಾಣಾಪಾಯ ಸಂಭವಿಸಿಲ್ಲ. ಮಲಗಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕುಳಿತವರಿಗೆ ಗಂಭೀರವಾಗಿ ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಂಡೇರಾವ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ಯಾಸ್ ಪೈಪ್ ನುಗುತ್ತಿದ್ದಂತೆ ಎಚ್ಚೆತ್ತ ಚಾಲಕ ದಿಢೀರ್ ಬ್ರೇಕ್ ಹಾಕಿದ್ದರಿಂದ ಹೆಚ್ಚಿನ ಸಾವು ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net