

ವಾಷಿಂಗ್ಟನ್: ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಇನ್ನೇನು ಮುಗಿಯುತ್ತ ಬಂದಿದೆ. ಅಧಿಕಾರದಲ್ಲಿ ಇರುವಾಗ ಸದಾ ಒಂದಿಲ್ಲೊಂದು ವಿವಾದ ಅವರ ಸುತ್ತಲೂ ಸುತ್ತುತ್ತಲೇ ಇತ್ತು. ಇದೀಗ ಅಧ್ಯಕ್ಷೀಯ ಚುನಾವಣೆ ನಂತರವೂ ವಿವಾದ ಸೃಷ್ಟಿಸಿ ಅವರು ತಣ್ಣಗಾಗಿದ್ದರೂ, ಜನರು ಮಾತ್ರ ಅವರನ್ನು ಬಿಡುತ್ತಿಲ್ಲ.
https://twitter.com/AsimKhanTweets/status/1302513596518236160
ಟ್ರಂಪ್ ನನ್ನ ಅಪ್ಪ, ನಾನು ಅವರನ್ನು ಭೇಟಿಯಾಬೇಕು ಎಂದು ಬೂರ್ಖಾ ಧರಿಸಿದ ಪಾಕಿಸ್ತಾನದ ಮಹಿಳೆಯೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ವಿಡಿಯೋ ಈಗ ಮತ್ತೊಮ್ಮೆ ಸುದ್ದಿ ಮಾಡಿದೆ. ಹಿಂದೊಮ್ಮೆ ಈ ವಿಡಿಯೋ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಮತ್ತೆ ಅದು ವೈರಲ್ ಆಗುತ್ತಿದೆ.
ನನ್ನ ತಂದೆಯಾದ ಟ್ರಂಪ್ ನನ್ನ ತಾಯಿ ಬಳಿ ಮಗಳನ್ನ ನೋಡಿಕೊಳ್ಳೋದಿಲ್ಲ ಎಂದು ಹೇಳಿದ್ದರು. ಅಲ್ಲದೇ ಈ ವಿಚಾರಕ್ಕಾಗಿ ನನ್ನ ತಾಯಿ ಹಾಗೂ ಟ್ರಂಪ್ ನಡುವೆ ಹಲವು ಭಾರಿ ಜಗಳ ಆಗಿದೆ ಎಂದು ಹೇಳಿದ್ದಾಳೆ. ಈ ವ್ಯಕ್ತಿ ಇಲ್ಲಿದ್ದು ಏನು ಮಾಡುತ್ತಿದ್ದಾರೆ? ಅಲ್ಲಿ ನಮ್ಮ ಕುಟುಂಬದವರು ಇವರನ್ನು ಕಾಯತ್ತಲಿದ್ದಾರೆ ಎಂದು ಯುವತಿ ಹೇಳಿದ್ದಾಳೆ.
ಇದು ನಿಜವಾಗಿಯೂ 2018ರ ಡಿಸೆಂಬರ್ನಲ್ಲಿ ಸುದ್ದಿ ಮಾಡಿದ್ದ ವಿಡಿಯೋ. ಈಗ ಮತ್ತೆ ಡೊನಾಲ್ಡ್ ಟ್ರಂಪ್ ಅವರನ್ನು ಛೇಡಿಸಲು ಮತ್ತೆ ಹರಿಬಿಡಲಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್ ಜ್ಯೂನಿಯರ್, ಬ್ಯಾರೋನ್ ಟ್ರಂಪ್, ಎರಿಕ್ ಟ್ರಂಪ್ ಹಾಗೂ ಟಿಫಾನಿ ಟ್ರಂಪ್ ಎಂಬವರು ಡೊನಾಲ್ಡ್ ಟ್ರಂಪ್ ಮಕ್ಕಳಾಗಿದ್ದಾರೆ.