More

    ಮಥುರಾದಲ್ಲಿ ಶ್ರೀಕೃಷ್ಣ ದೇಗುಲ ನಿರ್ಮಿಸಲು ಮರಗಳು ಕಟ್​- ಯೋಗಿ ಸರ್ಕಾರಕ್ಕೆ ‘ಸುಪ್ರೀಂ’ ಹೇಳಿದ್ದೇನು?

    ನವದೆಹಲಿ: ಉತ್ತರ ಪ್ರದೇಶದ ಮಥುರಾ ಶ್ರೀಕೃಷ್ಣ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಣೆ ಮಾಡುವ ಸಂಬಂಧ ಮೂರು ಸಾವಿರ ಮರಗಳನ್ನು ಕತ್ತರಿಸಲು ಮುಂದಾಗಿದ್ದ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯುಂಟಾಗಿದೆ.

    ದೇಗುಲ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳನ್ನು ಕಡಿಯುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದಿರುವ ಕೋರ್ಟ್​, ಮರಗಳಿಗೆ ಹಾನಿಯಾಗದಂತೆ ರಸ್ತೆಯನ್ನು ನಿರ್ಮಾಣ ಮಾಡಬಹುದು ಎಂದು ಹೇಳಿದೆ. ಮರಗಳು ಇರುವ ಕಡೆಗಳಲ್ಲಿ ತಿರುವು ಮುರುವಾಗಿ (ಜಿಗ್​ ಜಾಗ್​) ರಸ್ತೆಗಳನ್ನು ನಿರ್ಮಿಸುವುದರಿಂದ ಮರಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದಿದೆ.

    ಮರಗಳನ್ನು ಕತ್ತರಿಸುವ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಸರ್ಕಾರ ಸುಪ್ರೀಂಕೋರ್ಟ್​ ಮೊರೆ ಹೋಗಿತ್ತು.

    ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ಪೀಠ, ಮರಗಳನ್ನು ಕತ್ತರಿಸಲು ಅವಕಾಶ ನೀಡುವುದಿಲ್ಲ ಎಂದಿದೆ.

    ಇದನ್ನೂ ಓದಿ: ಸಿಎಂ ಯೋಗಿ- ನಟ ಅಕ್ಷಯ್​ ಕುಮಾರ್ ಭೇಟಿ: ಶುರುವಾಯ್ತು ಗುಸುಗುಸು

    ಇವುಗಳ ಬದಲು ಹೊಸ ಗಿಡಗಳನ್ನು ಬೇರೆ ಜಾಗದಲ್ಲಿ ನೆಡುವುದಾಗಿ ಸರ್ಕಾರ ಹೇಳಿದರೂ ಅದನ್ನು ಕೋರ್ಟ್​ ಅನುಮತಿ ನೀಡಲಿಲ್ಲ. ಹೊಸ ಗಿಡ ನೆಟ್ಟರೂ ಅವು ನೂರಾರು ವರ್ಷದ ಹಳೆಯ ಗಿಡಗಳಂತೆ ಆಮ್ಲಜನಕ ಬಿಡುಗಡೆ ಮಾಡುವುದಿಲ್ಲ ಎಂದು ಕೋರ್ಟ್​ ಹೇಳಿದೆ.

    ಮಥುರಾ ಜಿಲ್ಲೆಯ ಕೃಷ್ಣ ದೇವಾಲಯಕ್ಕೆ ಸಾಗುವ 25 ಕಿ.ಮೀ. ಉದ್ದ ರಸ್ತೆಯನ್ನು ವಿಸ್ತರಣೆಗೊಳಿಸಲು 2,940 ಮರಗಳನ್ನು ಕಡಿಯುವುದಕ್ಕೆ ಅನುಮತಿ ಕೋರಲಾಗಿತ್ತು.

    ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

    ಎಸ್​ಸಿ ಎಸ್​ಟಿ ಜಮೀನು ಗುಳುಂ- ಇನ್ನೊಂದೇ ತಿಂಗಳಲ್ಲಿ ಎಚ್​ಡಿಕೆ ಹಗರಣ ಅಂತ್ಯ ಕಾಣಿಸುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts