More

  ಪ್ರಕೃತಿ ಮೇಲೆ ದೌರ್ಜನ್ಯ ಸಲ್ಲ

  ಸೊರಬ: ಮನುಕುಲದ ಉಳಿವಿಗಾಗಿ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹಿರಿಯ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯಾಯ ಹೇಳಿದರು.

  ಪಟ್ಟಣ ಸಮೀಪದ ಬಿಳಾಗಿಯ ಸಾಲು ಮರದ ತಿಮ್ಮಕ್ಕ ಉದ್ಯಾನದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
  ಅರಣ್ಯ ನಾಶದಿಂದ ಜೀವಜಲಕ್ಕೆ ಪರದಾಡುವಂತಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲೆ ದೌರ್ಜನ್ಯ ನಡೆಸಿದ ಪರಿಣಾಮ ಅಸಮತೋಲನ ಉಂಟಾಗಿದೆ. ಮರ, ಗಿಡ, ಬಳ್ಳಿಗಳನ್ನು ಬೆಳೆಸುವ ಮೂಲಕ ಪೂರಕ ವಾತಾವರಣ ಸೃಷ್ಟಿಸಿದರೆ ಮಾತ್ರ ಸಮೃದ್ಧ ಅರಣ್ಯ ಕಾಣಬಹುದು ಎಂದು ತಿಳಿಸಿದರು.
  ಹೆಚ್ಚುವರಿ ನ್ಯಾಯಾಧೀಶೆ ಶಾರದಾ ಕೊಪ್ಪದ್ ಮಾತನಾಡಿ, ಪೂರ್ವಜರು ಬಿಟ್ಟು ಹೋಗಿರುವ ಅರಣ್ಯ ರಕ್ಷಣೆಯ ಪರಂಪರೆಯನ್ನು ನಾವು ಸಹ ರಕ್ಷಣೆ ಮಾಡುವ ದಿಸೆಯಲ್ಲಿ ಚಿಂತನೆ ಮಾಡಬೇಕು ಎಂದರು.
  ಹಿರಿಯ ವಕೀಲ ಎಂ.ನಾಗಪ್ಪ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ವೈ ಅಶೋಕ, ಸರ್ಕಾರಿ ಆಸ್ಪತ್ರೆ ಆಡಳಿತಧಿಕಾರಿ ಪ್ರಭು ಸಾಹುಕಾರ್, ಸೊರಬ ವಲಯ ಅರಣ್ಯಾಧಿಕಾರಿ ಜಾವೆದ್ ಬಾಷಾ ಅಂಗಡಿ, ಆನವಟ್ಟಿ ವಲಯ ಅರಣ್ಯಾಧಿಕಾರಿ ಎಲ್.ಪರಶುರಾಮ್, ಯೋಗರಾಜ್, ಉದ್ರಿ ಆಯುಷ್ಮಾನ್ ಆಯುರ್ವೇದ ಆರೋಗ್ಯ ವೈದ್ಯಾಧಿಕಾರಿ ಡಾ. ಮಹೇಶ, ವೃತ್ತ ನಿರೀಕ್ಷಕ ರಮೇಶ್ ರಾವ್, ಪಿಎಸ್‌ಐ ಎಚ್.ಎನ್.ನಾಗರಾಜ್, ಅಂಬೇಡ್ಕರ್ ಪ್ರೌಢಶಾಲಾ ಮುಖ್ಯಶಿಕ್ಷಕ ಮುರುಗೇಶ್ ಇತರರಿದ್ದರು.

  See also  ಕಾಡಿನಲ್ಲಿದ್ದ ಹಸುಗಳನ್ನು ನಿರ್ನಾಮ ಮಾಡಲು ಹೆಲಿಕಾಪ್ಟರ್​ನಲ್ಲಿ ಶಾರ್ಪ್​ ಶೂಟರ್​​ಗಳನ್ನು ಕಳಿಸಿದರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts