More

    ಡಿವೋರ್ಸ್​ ಕೊಟ್ಟಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ ಬಾಲಕ!

    ನವದೆಹಲಿ: ದೆಹಲಿಯಲ್ಲಿ ನಡೆದ ಭಯಾನಕ ಘಟನೆಯೊಂದರಲ್ಲಿ 17 ವರ್ಷದ ಮಗ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಇದಕ್ಕೆ ಕಾರಣ, ಆಕೆ ತಂದೆಗೆ ವಿಚ್ಛೇದನ ನೀಡಿಲ್ಲ ಎಂದು. ಇದೀಗ ಈ ಮಗನನ್ನು ಪೊಲೀಸರು ಬಂಧಿಸಿದ್ದು, ಬಾಲಕನಾಗಿರುವ ಕಾರಣ ರಿಮಾಂಡ್​ ಹೋಂಗೆ ಕಳುಹಿಸಿದ್ದಾರೆ.

    ಆಗಿದ್ದೇನೆಂದರೆ ಈ ಬಾಲಕನ ತಂದೆ-ತಾಯಿ ನಡುವೆ ವಿರಸ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಬೇರೆ ಬೇರೆಯಾಗಿದ್ದರು. ಆದರೆ ವಿಚ್ಛೇದನ ಪಡೆದಿರಲಿಲ್ಲ. ಈ ಬಾಲಕ ತನ್ನ ತಂದೆಯ ಜತೆ ವಾಸವಾಗಿದ್ದನು. ತಾಯಿಯ ಗುಣ ಆತನಿಗೆ ಮೊದಲಿನಿಂದಲೂ ಹಿಡಿಸುತ್ತಿರಲಿಲ್ಲ. ತಂದೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಆತ ತಾಯಿಯ ಬಳಿಗೂ ಆಗಾಗ್ಗೆ ಹೋಗಿ ಬರುತ್ತಿದ್ದ.

    ಈ ಮಧ್ಯೆಯೇ ತಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ವಿಚ್ಛೇದನ ನೀಡಲು ತಾಯಿ ಸಿದ್ಧರಿರಲಿಲ್ಲ. ಆದ್ದರಿಂದ ಕೇಸ್​ ಕೋರ್ಟ್​ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಅಮ್ಮ ವಿಚ್ಛೇದನಕ್ಕೆ ರೆಡಿ ಇಲ್ಲವೆಂದು ಬಾಲಕನಿಗೆ ಆಕೆಯ ಬಗ್ಗೆ ಇನ್ನಷ್ಟು ಕೋಪವಿತ್ತು. ಸಾಲದು ಎಂಬುದಕ್ಕೆ ಈ ವಿಷಯ ಆತನ ಸ್ನೇಹಿತರಿಗೂ ತಿಳಿದು ಮಾತನಾಡಿಕೊಳ್ಳತೊಡಗಿದರು. ಈತನನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದರು. ತಂದೆ ಒಪ್ಪಿದರೂ ತಾಯಿ ಒಪ್ಪಲಿಲ್ಲ ಎಂದು ಹೇಳಿ ನಗುತ್ತಿದ್ದರು. ಇದರಿಂದ ಬಾಲಕ ಮತ್ತಷ್ಟು ಜರ್ಜರಿತನಾಗಿದ್ದ.

    ಇದನ್ನೂ ಓದಿ: 28 ವರ್ಷ ಮಗನನ್ನು ಕೋಣೆಯಲ್ಲಿ ಕೂಡಿಹಾಕಿದ ತಾಯಿ! ಇಲ್ಲೊಂದು ಭಯಾನಕ ಘಟನೆ…

    ಅದೊಂದು ದಿನ ತನ್ನ ಅಕ್ಕನ ಬಳಿ ಮಾತನಾಡುವಾಗ ಬಾಲಕ, ಒಂದು ವೇಳೆ ಅಮ್ಮ ಏನಾದರೂ ಡಿವೋರ್ಸ್​ ಕೊಡದಿದ್ದರೆ ಮನೆಯವರ ಎದುರಿಗೇ ಆಕೆಯನ್ನು ಕೊಲೆ ಮಾಡುವುದಾಗಿಯೂ ಹೇಳಿದ್ದ. ಆದರೆ ಅವರ್ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

    ನವೆಂಬರ್ 30ರಂದು ಬಾಲಕ ತಾಯಿ ಇದ್ದಲ್ಲಿಗೆ ಬಂದಿದ್ದಾನೆ. ಆಕೆ ಊಟ ನೀಡಿದ್ದಾಳೆ. ಅದಾಗಲೇ ಅವನ ಜಾಕೆಟ್​ನಲ್ಲಿದ್ದ ಚಾಕುವನ್ನು ತಾಯಿ ನೋಡಿದ್ದಾಳೆ. ಚಾಕು ಏಕೆ ತಂದಿರುವೆ ಎಂದು ಕೇಳಿದಾಗ ಅದು ತನ್ನ ಸ್ನೇಹಿತನದ್ದು ಎಂದು ಹೇಳಿದ್ದಾನೆ ಬಾಲಕ. ಆಗಲೂ ಮನೆಯವರಿಗೆ ಆತನ ಬಗ್ಗೆ ಎಳ್ಳಷ್ಟೂ ಸಂದೇಹ ಬರಲಿಲ್ಲ.

    ಇದಾದ ಮೇಲೆ ರಾತ್ರಿಯಾಗಿರುವ ಕಾರಣ, ಅಪ್ಪನ ಬಳಿ ಬಿಟ್ಟುಬಾ ಎಂದು ಅಮ್ಮನ ಜತೆ ಹೋದ ಬಾಲಕ. ಮಧ್ಯರಾತ್ರಿ ಕಳೆದರೂ ಬರದಿದ್ದಾಗ ಎಲ್ಲೆಡೆ ಹುಡುಕಾಟ ನಡೆಸಲಾಗಿದೆ. ನಂತರ ಮನೆಯ ಸಮೀಪ ಇಟ್ಟಿಗೆಗಳ ರಾಶಿಯಲ್ಲಿ ಮಹಿಳೆಯ ಶವ ಸಿಕ್ಕಿದೆ.

    ಆಗ ಮಗಳಿಗೆ ಸಂದೇಹ ಬಂದು ತಮ್ಮನಿಗೆ ಕರೆ ಮಾಡಿದ್ದಾಳೆ. ಫೋನ್​ ಸ್ವಿಚ್​ ಆಫ್​ ಆಗಿದೆ. ಪೊಲೀಸರಿಗೆ ಅವಳು ಹೇಳಿಕೆ ನೀಡಿದ್ದಾಳೆ. ಪೊಲೀಸರು ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಒಪ್ಪಿಕೊಂಡಿದ್ದು, ವಿಷಯ ತಿಳಿಸಿದ್ದಾನೆ. ಸದ್ಯ ಆತನ ವಿರುದ್ಧ ಕೇಸ್​ ದಾಖಲಿಸಿಕೊಳ್ಳಲಾಗಿದ್ದು, ರಿಮಾಂಡ್​ ಹೋಂಗೆ ಕಳುಹಿಸಲಾಗಿದೆ.

    ಬಸ್ಸೊಳಗೆ ತೂರಿಬಂದ ಪೈಪ್​​- ಶಿಶು ಎತ್ತಿಕೊಂಡಿದ್ದ ಯುವತಿಯ ರುಂಡವೇ ಕಟ್ಟಾಯ್ತು!

    ಅರ್ಚಕರು ಅರೆಬೆತ್ತಲೆಯಲ್ಲಿರ್ತಾರೆ- ಭಕ್ತರಿಗೇಕೆ ಸಂಪ್ರದಾಯದ ಉಡುಗೆ ಎಂದು ಪ್ರಶ್ನಿಸಿದ ಹೋರಾಟಗಾರ್ತಿ!

    ಎಸ್​ಸಿ ಎಸ್​ಟಿ ಜಮೀನು ಗುಳುಂ- ಇನ್ನೊಂದೇ ತಿಂಗಳಲ್ಲಿ ಎಚ್​ಡಿಕೆ ಹಗರಣ ಅಂತ್ಯ ಕಾಣಿಸುವೆ!

    ಕಂಗನಾ ವಿರುದ್ಧ ಅಜ್ಜಿ ಕಿಡಿಕಿಡಿ- ಟ್ವೀಟ್​ ಡಿಲೀಟ್​ ಬಳಿಕವೂ ನಟಿಗೆ ಸಿಗಲಿಲ್ಲ ‘ಮುಕ್ತಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts