More

    ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ

    ತರೀಕೆರೆ: ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.

    ಕರಕುಚ್ಚಿ ಎ.ಕಾಲನಿ ನಿವಾಸಿ ಮೇಘನಾ (21) ಕೊಲೆಯಾದ ದುರ್ದೈವಿ. ಚರಣ್(28) ಕೊಲೆ ಮಾಡಿದವ.
    ಸೋಮವಾರ ಮಧ್ಯಾಹ್ನ 1.30ರ ವೇಳೆಗೆ ಮೇಘನಾ ಬಟ್ಟೆ ತೊಳೆಯಲು ನಾಲೆಗೆ ಹೋಗಿದ್ದರು. ಈ ವೇಳೆ ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಚರಣ್ ಮಚ್ಚಿನಿಂದ ಬರ್ಬರವಾಗಿ ಆಕೆಯ ಕತ್ತು ಸೀಳಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
    ಮನೆ ಮುಂದೆ ಶವವಿಟ್ಟು ಪ್ರತಿಭಟನೆ: ರಕ್ತಸಿಕ್ತವಾಗಿದ್ದ ಮೃತದೇಹವನ್ನು ನಾಲೆ ಬಳಿಯಿಂದ ಹೊತ್ತು ತಂದ ಮೃತಳ ಕುಟುಂಬಸ್ಥರು ಹಂತಕ ಚರಣ್ ಮನೆ ಮುಂದಿಟ್ಟು ಪ್ರತಿಭಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ಬರಬೇಕು. ಪತ್ನಿಯ ನೆತ್ತರು ಹರಿಸಿದ ಪತಿಯನ್ನು ಗ್ರಾಮಕ್ಕೆ ಕರೆತರಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಅಜ್ಞಾತ ಸ್ಥಳದಲ್ಲಿ ಅವಿತುಕೊಂಡಿದ್ದ ಆರೋಪಿ ಚರಣ್‌ನನ್ನು ಲಕ್ಕವಳ್ಳಿ ಪೊಲೀಸರು ಹುಡುಕಾಡಿ ವಶಕ್ಕೆ ಪಡೆದಿದ್ದಾರೆ.
    ಪ್ರತ್ಯೇಕ ಜೀವನ: ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಚರಣ್ ಹಾಗೂ ಮೇಘನಾ ಹೊಂದಾಣಿಕೆಯಿಲ್ಲದ ಕಾರಣ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
    ಕುರಿ ಬಲಿ ಕೊಡಲು ತಂದಿದ್ದ ಮಚ್ಚು: ಕರಕುಚ್ಚಿ ಗ್ರಾಮದಲ್ಲಿ ಮಂಗಳವಾರ ಮುಳಕಟ್ಟಮ್ಮ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದೇವರಿಗೆ ಕುರಿ ಬಲಿ ಕೊಡುವ ಸಲುವಾಗಿ ತಯಾರಿಸಿದ್ದ ಮಚ್ಚಿನಿಂದಲೇ ಆರೋಪಿ ಚರಣ್ ಪತ್ನಿಯ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಜಾತ್ರೆಯ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts