ಗಂಗಾವತಿ : ನೇಹಾ ಹಿರೇಮಠ ಕೊಲೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನೇಹಾಹಿರೇಮಠ ಭಾವಚಿತ್ರದ ಮುಂದೆ ದೀಪಪ್ರಜ್ವಂಲನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಕಾರ್ಯ ಕರ್ತರು, ಹತ್ಯೆಗೈದ ಯಾಜ್‌ನನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದರು.
ಕೇಸರಹಟ್ಟಿ ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾಲಿ ಪಾಟೀಲ್ ಮಾತನಾಡಿ, ವಿದ್ಯಾರ್ಥಿನಿಯನ್ನು ಕೊಂದಿರುವುದು ಖಂಡನೀಯವಾಗಿದ್ದು, ರಾಜ್ಯ ಸರ್ಕಾರ ಕಾನೂನಾತ್ಮಕ ರೀತಿಯಲ್ಲಿ ಕ್ರಮ ಕೈಗೊಂಡಿದೆ. ಹತ್ಯೆಗೈದವನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ನಗರಸಭೆ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ಜಿಪಂ ಮಾಜಿ ಸದಸ್ಯ ಅಮರೇಶಗೋನಾಳ್, ನಗರಸಭೆ ಸದಸ್ಯ ಕಾಸಿಂಸಾಬ್ ಗದ್ವಾಲ್, ಗ್ರಾಪಂ ಸದಸ್ಯ ಡಾ.ಕೆ.ವಿ.ಬಾಬು, ಪ್ರಮುಖರಾದ ಜುಬೇರ್, ನೀಲಕಂಠಪ್ಪ ಹೊಸಳ್ಳಿ, ಆನಂದ ಹಾಸಲ್ಕರ್, ರಫೀಕ್ ಸಂಪಂಗಿ, ಪದ್ಮಾವತಿ, ಶೇಖ್ ನಬೀಸಾಬ್, ರವಿಸಿಂಗ್, ಮಂಜುನಾಥ ದೇವರಮನಿ, ಹುಸೇನ್ ಪೀರಾ, ಭೀಮೇಶ, ಗುಂಜಳ್ಳಿ ರಾಚಪ್ಪ, ಮಾರೇಶ, ಹಮೀದ್ ಮುಲ್ಲಾ, ಹೊನ್ನೂರ್ ಅಲಿ, ಸುರೇಶ, ಪ್ರಜ್ವಲ್ ಇತರರಿದ್ದರು.
ಗಂಗಾವತಿ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೀಪ ಪ್ರಜ್ವಲನ ಮೂಲಕ ಪ್ರತಿಭಟನೆ ನಡೆಸಿದರು. ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾಲಿ ಪಾಟೀಲ್ ಇತರರಿದ್ದರು.