More

  RCB vs CSK ಪಂದ್ಯದ 3000 ರೂ. ಟಿಕೆಟ್​ ದುಬಾರಿ ಬೆಲೆಗೆ ಮಾರಾಟ! ಪಂದ್ಯ ಸೋತರೆ ಮಾತ್ರ…

  ಬೆಂಗಳೂರು: ಐಪಿಎಲ್ 17ನೇ ಆವೃತ್ತಿ ಅಂತ್ಯಕ್ಕೆ ಇನ್ನೇನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿರುವುದು ಕೇವಲ ಇಂದು (ಮೇ.18) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಮಾತ್ರ. ಈ ಪಂದ್ಯ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಕೆರಳಿಸಿದ್ದು, ಯಾರು ಪ್ಲೇಆಫ್​ಗೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ ಎಂಬುದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಆರ್​ಸಿಬಿ ಮತ್ತು ಸಿಎಸ್​ಕೆಯ ಮಾಡು ಇಲ್ಲವೇ ಮಡಿ ಪಂದ್ಯದ ಟಿಕೆಟ್​ ದರ ದುಬಾರಿ ಬೆಲೆಗೆ ಮಾರಾಟವಾಗಿದ್ದು, ಕ್ರಿಕೆಟ್ ಫ್ಯಾನ್ಸ್​ ಕಂಗಾಲಾಗಿದ್ದಾರೆ.

  ಇದನ್ನೂ ಓದಿ: ಸ್ವಾಯತ್ತ ಸಂಸ್ಥೆಯಾಗಿ ಬಿಐಇಟಿ ಕಾಲೇಜು   ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ್ ಮಾಹಿತಿ

  ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನು ರಾಜಸ್ಥಾನ ರಾಯಲ್ಸ್​, ಕೊಲ್ಕತ್ತಾ ನೈಟ್ ರೈಡರ್ಸ್​, ಸನ್​ರೈಸರ್ಸ್​ ಹೈದರಾಬಾದ್​ ಭದ್ರಪಡಿಸಿಕೊಂಡಿದೆ. ಈಗ ಉಳಿದಿರುವುದು ನಾಲ್ಕನೇ ಸ್ಥಾನ ಮಾತ್ರ. ಸದ್ಯ ಈ ಜಾಗವನ್ನು ಯಾರು ತುಂಬಲಿದ್ದಾರೆ ಎಂಬುದು ಇಂದಿನ ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯದಲ್ಲಿ ನಿಖರವಾಗಿ ತಿಳಿಯುತ್ತದೆ. ಸದ್ಯ ಪ್ಲೇಆಫ್‌ ಪ್ರವೇಶಿಸಲು ಚೆನ್ನೈ ಪಡೆ ತುದಿಗಾಲಿನಲ್ಲಿ ನಿಂತಿದೆ. ಆದರೆ, ಫಾಫ್ ಪಡೆಗೆ ಮಾತ್ರ ಕೆಲವು ಕಷ್ಟಕರ ಹಂತಗಳನ್ನು ಬೇಧಿಸಿಕೊಂಡು ಹೋಗುವ ಕಠಿಣ ಪರಿಸ್ಥಿತಿಗಳಿವೆ.

  ಹವಾಮಾನ ಇಲಾಖೆಯ ಪ್ರಕಾರ, ಇಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ. ಅದು ಕೂಡ ಸಂಜೆಯ ನಂತರವೇ ಎಂಬ ಸಂಗತಿ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ. ಒಂದೆಡೆ ಮಳೆ ಸುರಿದರೆ ಸಿಎಸ್​ಕೆಗೆ ಯಾವ ರೀತಿಯಲ್ಲೂ ತೊಂದರೆಯಿಲ್ಲ. ಆದರೆ, ಆರ್​ಸಿಬಿಗೆ ಮಾತ್ರ ಇದು ಶಾಪವಾಗಿ ಮಾರ್ಪಡುವುದು ಖಚಿತ. ಇನ್ನೂ ಈ ಗೊಂದಲದಲ್ಲಿರುವ ಅಪಾರ ಸಂಖ್ಯೆಯ ಆರ್​ಸಿಬಿ ಫ್ಯಾನ್ಸ್​ಗಳು, ಮಳೆ ಬರಲಿ, ಹೋಗಲಿ ನಮಗೆ ಮ್ಯಾಚ್ ನೋಡುವುದು ಮುಖ್ಯ, ಗೆಲುವು ಅತೀ ಮುಖ್ಯ ಎಂದು ದುಬಾರಿ ಬೆಲೆಯ ಟಿಕೆಟ್ ಖರೀದಿಸಿದ್ದಾರೆ.

  ಇದನ್ನೂ ಓದಿ: ನನ್ನನ್ನು ಬಿಟ್ಟುಬಿಡಿ… ಕ್ಯಾಮರಾಮನ್​ಗೆ ಕೈಮುಗಿದು ಮನವಿ ಮಾಡಿದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ

  ವರದಿಗಳ ಪ್ರಕಾರ, 3000 ರೂ. ದರವಿದ್ದ ಟಿಕೆಟ್​ಗಳು 20,000 ರೂ.ಗೆ ಮಾರಾಟವಾಗಿದ್ದು, ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಬೇಸರ ತಂದೊಡ್ಡಿದೆ. ಈಗಾಗಲೇ ಟಿಕೆಟ್​ಗಳು ಆನ್​ಲೈನ್​​ನಲ್ಲಿ ಮಾರಾಟವಾಗಿದ್ದು, ಬ್ಲ್ಯಾಕ್​ನಲ್ಲಿ ಟಿಕೆಟ್​ಗಳನ್ನು ದುಬಾರಿ ಬೆಲೆಗೆ ವ್ಯಾಪಾರವಾಗಿದೆ ಎಂದು ಹೇಳಲಾಗಿದೆ. ಈ ವಿಷಯದಲ್ಲಿ ಆಡಳಿತ ಮಂಡಳಿಯೂ ಕೈಜೋಡಿಸಿದೆ ಎಂದು ಆರ್​ಸಿಬಿ ಅಭಿಮಾನಿಗಳು ಆರೋಪಿಸಿದ್ದಾರೆ,(ಏಜೆನ್ಸೀಸ್).

  ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು

  ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts