ಮುಂಬೈ: ಇತ್ತೀಚೆಗಷ್ಟೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕಡೆಯ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ, ಸ್ಟೇಡಿಯಂ ತುಂಬ ತನ್ನನ್ನು ಹಾಗೂ ತಂಡವನ್ನು ಸಪೋರ್ಟ್ ಮಾಡಲು ಆಗಮಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂತಸಪಡಿಸಿದರು. ಆದರೆ, ಈ ಮಧ್ಯೆ ಫ್ರಾಂಚೈಸಿ ಬಗ್ಗೆ ಇರುವ ಅಸಮಾಧಾನ ಮಾತ್ರ ರೋಹಿತ್ ಕಣ್ಣಿನಲ್ಲಿ ಇಂದಿಗೂ ಹಾಗೆಯೇ ಉಳಿದಿರುವುದು ಇತ್ತೀಚಿನ ದಿನಗಳಲ್ಲಿ ಕೆಲವು ಬೆಳವಣಿಗೆಯಿಂದ ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ: ರೂ. 400 ಕೋಟಿ ಕಂಪನಿ ರೂಪಿಸಿದ ಮಾವು ಮಾರಾಟಗಾರನ ಮಗ: ಭಾರತದ ಐಸ್ ಕ್ರೀಮ್ ಮ್ಯಾನ್ ಕಾಮತ್ ಈಗ ನೆನಪು ಮಾತ್ರ
ಕಡೆಯ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ನ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕೆಕೆಆರ್ ತಂಡದ ಸದಸ್ಯರೊಂದಿಗೆ ಮೈದಾನದಲ್ಲಿ ಮಾತನಾಡುವಾಗ ಹಿಂದಿನಿಂದ ಬಂದ ಕ್ಯಾಮರಾಮನ್ ಅವರ ಖಾಸಗಿ ಮಾತುಕತೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದರಿಂದ ಸಿಡಿಮಿಡಿಗೊಂಡ ರೋಹಿತ್, ತಕ್ಷಣವೇ ಆತನಿಗೆ ಕೈಮುಗಿದು ಮೈಕ್ ಆಫ್ ಮಾಡುವಂತೆ ಮನವಿ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಅದೇ ರೀತಿ ಮತ್ತೊಂದು ಘಟನೆ ನಡೆದಿದೆ.
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಫ್ರಾಂಚೈಸಿಯೊಂದಿಗೆ ರೋಹಿತ್ ಶರ್ಮಾಗೆ ಉತ್ತಮ ಸಂಬಂಧವಿಲ್ಲ ಎಂಬ ವಿಷಯ ಸದ್ಯ ಬಟಾಬಯಲಾಗಿದೆ. ಅಂದಿನಿಂದಲೂ ರೋಹಿತ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಸಾಧ್ಯತೆಗಳು ಹೆಚ್ಚಿವೆ ಎಂದೇ ಹೇಳಲಾಗುತ್ತಿದೆ. ಇನ್ನು ಈ ಮಧ್ಯೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರೊಂದಿಗಿನ ರೋಹಿತ್ ಸಂಭಾಷಣೆ ತುಣುಕನ್ನು ಸ್ಟಾರ್ ಸ್ಪೋರ್ಟ್ಸ್ ರೆಕಾರ್ಡ್ ಮಾಡಿ, ಸೋರಿಕೆ ಮಾಡಿದೆ!
ಇದನ್ನೂ ಓದಿ: ಸಿಐಐ ಅಧ್ಯಕ್ಷರಾಗಿ ಐಟಿಸಿಯ ಸಂಜೀವ್ ಪುರಿ ಅಧಿಕಾರ ಸ್ವೀಕಾರ
ಈ ವಿಷಯಕ್ಕೆ ಸಿಡಿದೆದ್ದ ರೋಹಿತ್ ಶರ್ಮಾ, ತಮ್ಮ ಖಾಸಗಿ ಸಮಯವನ್ನು ಗೌರವಿಸದೆ, ಈ ರೀತಿ ಉಲ್ಲಂಘನೆ ಎಷ್ಟು ಸರಿ? ಎಂದು ಆರೋಪಿಸಿ ಪ್ರಸಾರ ವಾಹಿನಿಯ ವಿರುದ್ಧ ಕಡೆಗೂ ಧ್ವನಿ ಎತ್ತಿದ್ದಾರೆ. ತಮ್ಮ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಮುಖಕ್ಕೆ ಹೊಡೆದಂತೆ ತಮ್ಮ ಅಸಮಾಧಾನವನ್ನು ಹೊರಹಾಕಿರುವ ರೋಹಿತ್, “ಕ್ರಿಕೆಟಿಗರ ಜೀವನವು ಎಷ್ಟು ಹಿಂಸಾತ್ಮಕವಾಗುತ್ತಿದೆ ಎಂದರೆ ಕ್ಯಾಮೆರಾಗಳು ಈಗ ನಾವು ನಮ್ಮ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಪಂದ್ಯದ ಪ್ರ್ಯಾಕ್ಟಿಸ್ ಅಥವಾ ದಿನಗಳಲ್ಲಿ ಗೌಪ್ಯವಾಗಿ ನಡೆಸುವ ಪ್ರತಿಯೊಂದು ವಿಷಯವನ್ನು ಮತ್ತು ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಿವೆ” ಎಂದಿದ್ದಾರೆ.
https://x.com/ImRo45/status/1792136215015424426?ref_src=twsrc%5Etfw%7Ctwcamp%5Etweetembed%7Ctwterm%5E1792136215015424426%7Ctwgr%5E080d16593026e7434ad5cc004cdd18841d822b5a%7Ctwcon%5Es1_&ref_url=https%3A%2F%2Fcrictoday.com%2Fcricket%2Fdaily-cricket-news%2Frohit-sharma-breaks-silence-on-his-leaked-video-accuses-broadcasting-channel-of-privacy-breach%2F
“ನನ್ನ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಕೇಳುವ ಮುನ್ನ ಅವರು ಈ ಸೂಕ್ಷ್ಮ ವಿಷಯವನ್ನು ಅರಿತುಕೊಳ್ಳಬೇಕಿತ್ತು. ಅದರ ಬದಲಿಗೆ ನಮ್ಮ ಖಾಸಗಿ ಸಂಭಾಷಣೆಯನ್ನು ಪ್ರಸಾರ ಮಾಡುವ ಮೂಲಕ ಗೌಪ್ಯತೆಯ ಉಲ್ಲಂಘನೆ ಮಾಡಿದೆ. ಆಸಕ್ತಿಕರ ಮತ್ತು ಕುತೂಹಲಕಾರಿ ವಿಷಯ ಮತ್ತು ಹೆಚ್ಚಿನ ಲೈಕ್ ಪಡೆಯುವುದರ ಹಿಂದೆ ಬಿದ್ದಿರುವ ಕಾರಣ ಹೀಗೆಲ್ಲಾ ಆಗುತ್ತಿದೆ. ಇದರಿಂದ ನಮ್ಮ (ಕ್ರಿಕೆಟಿಗರು) ಮತ್ತು ಅಭಿಮಾನಿಗಳ ನಡುವಿನ ನಂಬಿಕೆಯನ್ನು ಮುರಿಯುತ್ತಿದ್ದೀರಿ” ಎಂದು ತಮ್ಮ ಅಸಮಾಧಾನವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್ ಪಶ್ಚಾತಾಪ