

ನವದೆಹಲಿ: ಐಟಿಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಅವರು 2024-25ನೇ ಸಾಲಿಗೆ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್‌ನ ಅಧ್ಯಕ್ಷ ಆರ್. ದಿನೇಶ್ ಅವರಿಂದ ಪುರಿ ಅವರು ಅಧಿಕಾರ ವಹಿಸಿಕೊಂಡರು.
ಎಫ್ಎಂಸಿಜಿ, ಹೋಟೆಲ್‌ಗಳು, ಪೇಪರ್‌ಬೋರ್ಡ್‌ಗಳು ಮತ್ತು ಪ್ಯಾಕೇಜಿಂಗ್, ಕೃಷಿ ವ್ಯಾಪಾರ ಮತ್ತು ಐಟಿ ವ್ಯವಹಾರಗಳನ್ನು ಹೊಂದಿರುವ ಸಂಘಟಿತ ಸಂಸ್ಥೆಯಾಗಿದೆ ಐಟಿಸಿ ಲಿಮಿಟೆಡ್. ಐಟಿಸಿ ಇನ್ಫೋಟೆಕ್ ಇಂಡಿಯಾ ಲಿಮಿಟೆಡ್, ಯುಕೆ ಮತ್ತು ಅಮೆರಿಕದಲ್ಲಿ ಅದರ ಅಂಗಸಂಸ್ಥೆಗಳು ಮತ್ತು ಸೂರ್ಯ ನೇಪಾಳ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದಾರೆ ಪುರಿ.
ಟಾಟಾ ಕೆಮಿಕಲ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್. ಮುಕುಂದನ್ ಅವರು 2024-25 ಸಾಲಿಗೆ ಸಿಐಐ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.