ಸಣ್ಣ ಷೇರು ದೊಡ್ಡ ಲಾಭ: ಸ್ಟಾಕ್​ ಬೆಲೆ ರೂ 1.58 ಮಾತ್ರ; ನೀಡಿದ ಲಾಭ ಭರ್ಜರಿ 3400%

stock-3
Published on

ಮುಂಬೈ: ಐಟಿ ವಲಯಕ್ಕೆ ಸಂಬಂಧಿಸಿದ ಕಂಪನಿಯು ಕಳೆದ ಕೆಲವು ವರ್ಷಗಳಲ್ಲಿ ತನ್ನ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಈ ಕಂಪನಿ ಹೆಸರು ಒನ್ ಪಾಯಿಂಟ್ ಒನ್ ಸೊಲ್ಯೂಷನ್ಸ್ ಲಿಮಿಟೆಡ್ (One Point One SolutionsLtd). ಕಳೆದ 4 ವರ್ಷಗಳಲ್ಲಿ ಈ ಷೇರು 3,400 ಪ್ರತಿಶತದಷ್ಟು ಹೆಚ್ಚಳವಾಗಿದೆ. ಕಂಪನಿಯ ಷೇರುಗಳ ಬೆಲೆ ನವೆಂಬರ್ 29, 2019 ರಂದು ರೂ 1.58 ರಷ್ಟಿತ್ತು, ಈಗ ರೂ 55 ಕ್ಕೆ ಏರಿದೆ. ಶನಿವಾರ, ಮೇ 18 ರಂದು ವಿಶೇಷ ವಹಿವಾಟಿನ ಸಮಯದಲ್ಲಿ, ಕಂಪನಿಯ ಷೇರುಗಳ ಬೆಲೆ 2% ರಷ್ಟು ಏರಿಕೆಯೊಂದಿಗೆ 58.65 ರೂ. ಆಗಿದೆ.

ಕಳೆದ ಒಂದು ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆ 7% ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ 40% ಹೆಚ್ಚಾಗಿದೆ. ಮತ್ತೊಂದೆಡೆ, ಒಂದು ವರ್ಷದಲ್ಲಿ 160% ರಷ್ಟು ಏರಿಕೆ ಕಂಡಿವೆ. ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 70 ರೂ. ಹಾಗೂ ಕನಿಷ್ಠ ಬೆಲೆ 20.35 ರೂ. ಇದೆ. ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ 1,252.70 ಕೋಟಿ ರೂ. ಇದೆ.

ಈ ಸ್ಮಾಲ್-ಕ್ಯಾಪ್ ಕಂಪನಿಯು 2023-24 ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ, ಈ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ 6.6 ಕೋಟಿ ರೂ.ಗಳಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು 2.95 ಕೋಟಿ ರೂ. ಇತ್ತು. ಈ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ವಾರ್ಷಿಕವಾಗಿ ಶೇ. 105ರಷ್ಟು ಏರಿಕೆ ಕಂಡಿದೆ. 2023–24ರ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ನಿವ್ವಳ ಲಾಭವು 22.37 ಕೋಟಿ ರೂ.ಗಳಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 8.76 ಕೋಟಿ ರೂ. ಇತ್ತು. ಈ ಅವಧಿಯಲ್ಲಿ ನಿವ್ವಳ ಲಾಭವು 155% ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net