

ನವದೆಹಲಿ: ಕೃತಕ ಬುದ್ಧಿಮತ್ತೆಯ ಹಾವಳಿ ಎಲ್ಲೆಡೆಯೂ ಹಬ್ಬುತ್ತಿದ್ದು ಕಾನೂನು ಕ್ಷೇತ್ರಕ್ಕೂ ಈಗಾಗಲೇ ಕಾಲಿಟ್ಟಿದೆ. ಚಾಟ್ ಜಿಪಿಟಿನ ಮುಂತಾದ ಬಾಟ್ಗಳು ಕಾನೂನು ಸಲಹೆ ನೀಡುತ್ತಿರುವ ಬಗ್ಗೆ ಈಗಾಗಲೇ ಸುದ್ದಿ ಎಲ್ಲರೂ ಕೇಳಿರಬಹುದು.
ಇದೀಗ ಹೀಗೆ ಕೋರ್ಟ್ನಲ್ಲಿ ವಾದ ಮಾಡಿದ್ದಕ್ಕೆ ಈ ರೋಬೋಟ್ ಮೇಲೆ ಪ್ರಕರಣ ದಾಖಲಾಗಿದೆ. ಅದೂ ಲೈಸೆನ್ಸ್ ಇಲ್ಲದೇ ವಾದ ಮಾಡಿದ್ದಕ್ಕೆ!
'ಡು ನಾಟ್ ಪೇ ಇಂಕ್' ಹೆಸರಿನ ರೋಬೋಟ್, ಗ್ರಾಹಕರಿಗೆ ಸಹಾಯ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದು "ವಿಶ್ವದ ಮೊದಲ ರೋಬೋಟ್ ವಕೀಲ" ಎಂದು ಕರೆದುಕೊಳ್ಳುತ್ತದೆ. ಕಂಪನಿಯು ಪರವಾನಗಿ ಇಲ್ಲದೆ ವಕೀಲಿ ವೃತ್ತಿಯನ್ನು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಈ ರೋಬೋಟ್ ಹೊಸ ಮೊಕದ್ದಮೆಯನ್ನು ಎದುರಿಸುತ್ತಿದೆ. ಅಂದಹಾಗೆ ಈ ಸಮಸ್ಯೆ ಎದುರಾದದ್ದು ಅಮೆರಿಕದಲ್ಲಿ. ಭಾರತದಲ್ಲಿ ಕೋರ್ಟ್ನಲ್ಲಿ ಹೋಗಿ ವಾದ ಮಾಡಲು ಯಾವುದೇ ಪ್ರಮಾಣಪತ್ರದ ಅವಶ್ಯಕತೆ ಇರುವುದಿಲ್ಲ. ಆದರೆ ಅಮೆರಿಕದಲ್ಲಿ ಪರಿಸ್ಥಿತಿ ಹಾಗಿಲ್ಲ.
DoNotPay "ವಾಸ್ತವವಾಗಿ ರೋಬೋಟ್, ವಕೀಲರು ಅಥವಾ ಕಾನೂನು ಸಂಸ್ಥೆಯಲ್ಲ" ಎಂದು ಚಿಕಾಗೋ ಮೂಲದ ಕಾನೂನು ಸಂಸ್ಥೆ ಎಡೆಲ್ಸನ್ ಮಾರ್ಚ್ 3 ರಂದು ಸ್ಯಾನ್ ಫ್ರಾನ್ಸಿಸ್ಕೋ ರಾಜ್ಯ ನ್ಯಾಯಾಲಯದಲ್ಲಿ ಹೇಳಿದ್ದು ಗುರುವಾರ ನ್ಯಾಯಾಲಯದ ಸಾರ್ವಜನಿಕ ವೆಬ್‌ಸೈಟ್‌ಗೆ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್)