More

    H3N2 ವೈರಸ್​ಗೆ ರಾಜ್ಯದಲ್ಲಿ ಮೊದಲ ಬಾರಿಗೆ ಓರ್ವ ವಿಧಿವಶ…

    ಬೆಂಗಳೂರು: ದೇಶಾದ್ಯಂತ ಜ್ವರ, ಚಳಿ, ಗಂಟಲಿನ ಸಮಸ್ಯೆಯಿಂದ ಅನೇಕರು ಬಳಲುತ್ತಿರುವುದು ವರದಿಯಾಗಿತ್ತು. ಇದೀಗ ಜ್ವರ, ಚಳಿ, ಗಂಟಲಿನ ಸಮಸ್ಯೆಯಿಂದ ಬಳಲುತ್ತಾ ಇದ್ದ ವ್ಯಕ್ತಿ H3N2 ವೈರಸ್​ಗೆ ಸಾವಿಗೀಡಾದ ಘಟನೆ ರಾಜ್ಯದಲ್ಲಿ ನಡೆದಿದ್ದು ಇದು ಮೊದಲನೇ ಪ್ರಕರಣವಾಗಿದೆ.

    H3N2 ವೈರಸ್​ಗೆ ಬಲಿಯಾದ ವ್ಯಕ್ತಿ 85 ವರ್ಷದ ವೃದ್ಧರಾಗಿದ್ದು ಇವರ ಮೃತ್ಯು ರಾಜ್ಯದಲ್ಲಿ ಮೊದಲನೆಯ ಪ್ರಕರಣವಾಗಿದೆ. ಈಗಾಗಲೇ ಕೊವಿಡ್​ನಿಂದ ಜನರು ಗಾಬರಿಗೊಂಡಿದ್ದು ಅದರ ಭಯ ಮರೆಯುವ ಮುನ್ನವೇ ರಾಜ್ಯದಲ್ಲಿ ಇನ್​ಫ್ಲುಯೆಂಜಾ ವೈರಸ್​ನ ಉಪತಳಿಯಾದ ಈ H3N2 ಆತಂಕ ಹೆಚ್ಚಿಸಿದೆ.

    ಈಗಾಗಲೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ H3N2 ವೈರಸ್ ಉಪಟಳ ಹೆಚ್ಚಾಗುತ್ತಿದ್ದು ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಸನದಲ್ಲಿ ಆರು ಮಂದಿಗೆ H3N2 ವೈರಸ್ ಇರುವುದು ಪತ್ತೆಯಾಗಿದೆ.

    ಈ ಹಿನ್ನೆಲೆಯಲ್ಲಿ ಈಗಾಗಲೇ ಬೇರೆ ಗಂಭೀರ ರೋಗಗಳಿಂದ ಬಳಲುತ್ತಿರುವ ಜನರು ಮತ್ತು 60 ವರ್ಷ ಮೇಲ್ಪಾಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ರೋಗ ಲಕ್ಷಣ ಸಾಮಾನ್ಯ ಜ್ವರದಂತೆಯೇ ಕಂಡುಬಂದರೂ ರೋಗ ನೊರ್ಧಾರ ಆಗದೇ ಅದರ ಗಂಭೀರತೆ ತಿಳಿಯುವುದಿಲ್ಲ. ಹೀಗಾಗಿ ಯಾರೂ ಸೆಲ್ಪ್ ಟ್ರಿಟ್ಮೆಂಟ್ ತೆಗೆದುಕೊಳ್ಳದೇ ವೈದ್ಯರನ್ನು ಭೇಟಿ ಮಾಡಲು ಆಯುಕ್ತರಿಂದ ಜನರಿಗೆ ಕರೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts