ಮಗನಿಗೆ ಈಜು ಕಲಿಸಲು ಹೋಗಿ, ಪ್ರಾಣ ಕಳೆದುಕೊಂಡ ತಂದೆ

999
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೋನಪಲ್ಲಿಯಲ್ಲಿ ಮಗನಿಗೆ ಈಜು ಕಲಿಸಲು ಹೋಗಿ, ತಂದೆ ಪ್ರಾಣ ಕಳೆದುಕೊಂಡಿದ್ದಾರೆ.

ಗ್ರಾಮದ ಅಂಗಡಿ ಬಾಬು (45 ವರ್ಷ) ಮೃತ. ಸುಡು ಬಿಸಲಿನ ನಡುವೆ ಮಧ್ಯಾಹ್ನ ಕೆ.ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಕೃಷಿ ಹೊಂಡದಲ್ಲಿ ಮಗ ತೇಜು (10) ಗೆ ಈಜು ಕಲಿಸಲು ಅಂಗಡಿ ಬಾಬು ಹೋಗಿದ್ದರು. ಇದೇ ವೇಳೆ ಅವಘಡ ಸಂಭವಿಸಿದೆ. ಕೆಂಚರ‍್ಲಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಮಗನ ಎದುರೇ ಸಾವು

ಮಗ ತೇಜುಗೆ ಈಜಲು ವಾಹನದ ಟಯರ್‌ನ ಟೂಬ್ ಕಟ್ಟಿ ನೀರಿಗೆ ಇಳಿಸಿದ ಬಳಿಕ ಅಂಗಡಿ ಬಾಬು ಕೃಷಿ ಹೊಂಡಕ್ಕೆ ಧುಮುಕಿದ್ದಾರೆ. ಇದೇ ವೇಳೆ ಸುಸ್ತಾಗಿ ಈಜಲು ಪರದಾಡಿದ್ದು ಮೇಲಕ್ಕೆ ಹತ್ತುವ ಸಂದರ್ಭದಲ್ಲಿ ಹಲವು ಬಾರಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದು ನೀರಿನಲ್ಲಿ ಮುಳುಗಿದ್ದಾರೆ. ಇದರಿಂದ ಬಾಲಕ ಕಿರುಚುಕೊಳ್ಳುತ್ತಿದ್ದಂತೆ ಪಕ್ಕದ ಜಮೀನಿಲ್ಲಿದ್ದವರು ಓಡಿ ಬಂದು, ನೀರಿನಲ್ಲಿ ಬಿದ್ದಿದ್ದವರನ್ನು ಮೇಲಕ್ಕೆತ್ತಿದ್ದಾರೆ. ಆದರೆ, ಜೀವ ಉಳಿದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net