More

    ಮಧ್ಯರಾತ್ರಿ ಹೆಣ್ಮಕ್ಕಳ ಹಾಸ್ಟೆಲ್​ಗೆ ನುಗ್ಗಿದ ಕೀಚಕ ಚಾಕು ತೋರಿಸಿ ಕಿರುಕುಳ ಕೊಟ್ಟ!

    ಲುಧಿಯಾನಾ: ಇಲ್ಲೊಬ್ಬ ಕೀಚಕ ಹೆಣ್ಮಕ್ಕಳ ಹಾಸ್ಟೆಲ್​ಗೆ ನುಗ್ಗಿ ಚಾಕು ಹಿಡಿದು ಬೆದರಿಸಿ ಕಿರುಕುಳ ನೀಡಿದ್ದಾನೆ. ಈ ಘಟನೆ ನಡೆದದ್ದು ಪಂಜಾಬ್​ನ ಲುಧಿಯಾನಾ ನಗರದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಲ್ಲಿ. ಅಲ್ಲಿ ಯುವಕನೊಬ್ಬ ನುಗ್ಗಿರುವ ವಿಡಿಯೋ ವೈರಲ್ ಆಗಿದೆ.

    ಗುರುವಾರ ರಾತ್ರಿ ಬಾಲಕಿಯರ ಹಾಸ್ಟೆಲ್‌ಗೆ ಪ್ರವೇಶಿಸಲು ಕಟ್ಟಡದ ಗೋಡೆಗಳನ್ನು ಹತ್ತುತ್ತಿದ್ದ ಹುಡುಗರ ಗುಂಪಿನಲ್ಲಿ ಈತನೂ ಸೇರಿದ್ದ ಎನ್ನಲಾಗಿದೆ.

    ಹಾಸ್ಟೆಲ್‌ನೊಳಗೆ ಈತ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಬೆದರಿಸಿ ಹಿಡಿದು ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಒಳನುಗ್ಗಿದವರಿಂದ ಆತಂಕಗೊಂಡ ಹುಡುಗಿಯರು ಸಹಾಯಕ್ಕಾಗಿ ಚೀರಾಡಿದ್ದಾರೆ. ಹಾಸ್ಟೆಲ್​ನ ಸೆಕ್ಯುರಿಟಿ ಗಾರ್ಡ್‌ಗಳು ಬರುತ್ತಿರುವುದನ್ನು ನೋಡಿದ ಈ ಪಡ್ಡೆ ಹುಡುಗರ ಗುಂಪು ಕಟ್ಟಡದಿಂದ ಪರಾರಿಯಾಗಿದೆ.

    ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಿಸಿಟಿವಿ ಕ್ಯಾಮೆರಾಗಳ ರೆಕಾರ್ಡ್‌ಗಳಲ್ಲಿ ಗೋಡೆಗಳನ್ನು ಅಳೆಯುವ ವ್ಯಕ್ತಿ ಸುಮಾರು 7 ರಿಂದ 8 ನಿಮಿಷಗಳ ಕಾಲ ಹಾಸ್ಟೆಲ್ ಕಟ್ಟಡದಲ್ಲಿ ಕಳೆದಿರುವುದು ಕಂಡು ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಹುಡುಗರು ಅದೇ ದಂತ ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂದು ಹುಡುಗಿಯರು ಹೇಳಿದ್ದಾರೆ.

    ಪೊಲೀಸ್ ತನಿಖೆ ನಡೆಯುತ್ತಿರುವಾಗಲೇ ಕಾಲೇಜಿನಿಂದ ಉತ್ತಮ ಭದ್ರತಾ ಕ್ರಮಗಳಿಗೆ ಆಗ್ರಹಿಸಿ ಹುಡುಗಿಯರು ಪ್ರತಿಭಟನೆ ನಡೆಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts