More

    ಇಲ್ಲಿ ಹೋಳಿ ಆಚರಿಸುವುದೇ ಕಲ್ಲು ತೂರಾಟ ಮಾಡಿ! 30 ಜನರಿಗೆ ಗಾಯ…

    ರಾಜಸ್ಥಾನ: ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ಬುಧವಾರ ‘ಪತ್ತರ್‌ ಮರ್‌ ಹೋಲಿ’ ಆಡುತ್ತಿದ್ದಾಗ ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ. ‘ಪತ್ತರ್ ಕಿ ಹೋಲಿ’ ಎಂದರೆ ಈ ಭಾಗದಲ್ಲಿ ಹಬ್ಬವನ್ನು ಆಚರಿಸುವ ಸಾಂಪ್ರದಾಯಿಕ ವಿಧಾನವಾಗಿದೆ.

    ವಿಚಿತ್ರ ನಂಬಿಕೆ:
    ಹೋಳಿ ಆಡುವಾಗ ರಕ್ತ ಚೆಲ್ಲಿದರೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ವರ್ಷಪೂರ್ತಿ ಜನರು ನೆಮ್ಮದಿಯಿಂದ ಇರಬಹುದು ಎಂಬುದು ಗ್ರಾಮದ ಜನರ ನಂಬಿಕೆ. ದೇಶದಾದ್ಯಂತ ಜನರು ಇಂದು ಬಣ್ಣಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಇವರು ಮಾತ್ರ ಕಲ್ಲು ಹೊಡೆದು ಆಚರಿಸುತ್ತಾರೆ.

    ಬುಧವಾರ, ಡುಂಗರ್‌ಪುರದ ಭಿಲುಡಾ ಗ್ರಾಮದಲ್ಲಿ ನೂರಾರು ಜನರು ಜಮಾಯಿಸಿ ಕಲ್ಲುಗಳನ್ನು ಬಳಸಿ ಹೋಳಿ ಆಡಲು ಪ್ರಾರಂಭಿಸಿದರು. ಕಲ್ಲುಗಳನ್ನು ತೆಗೆದುಕೊಂಡು ಪರಸ್ಪರ ಹೊಡೆದ ಎರಡು ಗುಂಪುಗಳು ಊರಿನ ನೆಮ್ಮದಿಗಾಗಿ ಹೋಳಿ ಆಡಿದ್ದಾರೆ.
    ಈ ಘಟನೆಯಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಭಿಲುಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೇಕರ ತಲೆ, ಕೈ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts