ಹುಬ್ಬಳ್ಳಿ: ರೀಲ್ಸ್ ಮಾಡುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಎಲ್ಲದ್ದಕ್ಕೂ ಸ್ಥಾನ ಸಮಯ ಎಂದಿರುತ್ತದೆ. ಈ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ರೋಗಿಗಳ ಮುಂದೆಯೇ ರೀಲ್ಸ್ ಮಾಡಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಈ ವೈದ್ಯ ಮತ್ತು ನರ್ಸ್ ಸಿಬ್ಬಂದಿ ರೀಲ್ಸ್ ಮಾಡಲು ಆಸ್ಪತ್ರೆಯನ್ನೇ ಸ್ಪಾಟ್ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮತ್ತೊಬ್ಬ ಸಿಬ್ಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೀಲ್ಸ್ ಮಾಡಿ ವೈರಲ್ ಆಗಿದ್ದಾರೆ. ನಿನ್ನೆ ತಾನೇ ಆಯುಷ್ ವೈದ್ಯಾಧಿಕಾರಿಯೊಬ್ಬ ರೀಲ್ಸ್ ಮಾಡಲು ಹೋಗಿ ವೈರಲ್ ಆಗಿದ್ದರು. ಇಂದು ಡಾಕ್ಟರ್ ಹಾಗೂ ಸಿಬ್ಬಂದಿ ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ.
ನಿನ್ನೆ ಪತಲಿ ಕಮರಿಯಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದ ಆಯುಷ್ ವೈದ್ಯಾಧಿಕಾರಿ ಸುರೇಶ್ ಕಳಸಣ್ಣವರ್ ವಿಡಿಯೋ ವೈರಲ್ ಆಗಿತ್ತು. ಇಂದು ನರ್ಸ್ ಒಬ್ಬರಿಂದ “ನಂದೇ ಈ ಸ್ವತ್ತು ಬಿಟ್ಟು ಇರಲಾರೆ” ರೀಲ್ಸ್ ಮಾಡಿದ್ದು ಅದೂ ವೈರಲ್ ಆಗಿದೆ.
ರೇಣುಕಾ ಸುಂಕದ ಎಂಬ ನರ್ಸ್ ರೀಲ್ಸ್ ಮಾಡಿ ವೈರಲ್ ಆಗಿದ್ದಾರೆ. ಇವರು ರೋಗಿಗಳ ಮುಂದೆಯೇ ರೀಲ್ಸ್ ಮಾಡಿದ್ದು ವೈದ್ಯ ಹಾಗೂ ನರ್ಸ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ರೀಲ್ಸ್ ಮಾಡಿದ ಇಬ್ಬರೂ ಸಿಬ್ಬಂದಿ ವಿರುದ್ದ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.