More

    ಇಂದು ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಮುಂದೆ ಹಾಜರ್?!

    ಬೆಂಗಳೂರು: ಪ್ರಶಾಂತ್ ಮಾಡಾಳ್ ಅಧೀನದಲ್ಲಿ ಸುಮಾರು 8 ಕೋಟಿ ರೂ. ಪತ್ತೆಯಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಶೋಧ ಕಾರ್ಯವೂ ಜೋರಾಗಿಯೇ ನಡೆದಿತ್ತು.

    ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು: ಬೆಂಗಳೂರು ವಕೀಲರ ಸಂಘದಿಂದ ಸುಪ್ರೀಂಕೋರ್ಟ್​ ಸಿಜೆಗೆ ಪತ್ರ, ಹೀಗೊಂದು ಮನವಿ

    ಇಂದು ಶಾಸಕ ವಿರೂಪಾಕ್ಷಪ್ಪ ಮಧ್ಯಾಹ್ನ 2 ಗಂಟೆ ಒಳಗಾಗಿ ಲೋಕಾಯುಕ್ತಕ್ಕೆ ಹಾಜರಾಗುವ ಸಾಧ್ಯತೆ ಇದೆ. ಷರತ್ತುಬದ್ಧ ನೀರೀಕ್ಷಣಾ ಜಾಮೀನು ನೀಡಿ ನ್ಯಾಯಲಯ ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಹಾಜರಾಗಲಿದ್ದಾರೆ ಎನ್ನಲಾಗುತ್ತಿದೆ.

    ಮಾಡಾಳ್ ವಿರೂಪಾಕ್ಷಪ್ಪಗೆ ಆದೇಶ ಪ್ರತಿ ಸಿಕ್ಕ 48 ಗಂಟೆಯೊಳಗೆ ಹಾಜರಾಗಲು ಹೇಳಲಾಗಿದ್ದು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಲೇಬೇಕಾಗಿದೆ.

    ನೀರಿಕ್ಷಣಾ ಜಾಮೀನು ಸಿಕ್ಕ ಕೆಲವೇ ಗಂಟೆಯಲ್ಲಿ ಚನ್ನಗಿರಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ದಿಢೀರ್ ಆಗಿ ಪ್ರತ್ಯೇಕ್ಷವಾಗಿದ್ದರು. ಮತ್ತೊಂದೆಡೆ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಒಂದು ನೊಟೀಸ್ ನೀಡಿಸದ್ದಾರೆ. ಈ ಪ್ರಕರಣ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಪ್ರಶ್ನೆಗಳನ್ನು ತಯಾರು ಮಾಡಿಟ್ಟುಕೊಂದ್ದಾರೆ.

    ಇಂದಿನ ವಿಚಾರಣೆ ಹೇಗಿರಲಿದೆ?

    ಇವತ್ತು ವಿರೂಪಾಕ್ಷಪ್ಪಗೆ ಐಓ ಮುಂದೆ ಹಾಜಾರಾಗೋದು ಬಿಟ್ಟು ಬೇರೆ ದಾರಿ ಇಲ್ಲ. ಲೋಕಾಯುಕ್ತ ಕಚೇರಿಗೆ ಬಂದು ಹಾಜರಾಗಬೇಕು ಎಂದೇನು ಇಲ್ಲ. ಐ.ಓ ಎಲ್ಲಿಗೆ ಕರೀತಾರೆ ಅಲ್ಲಿ ಹೋಗಿ ಹಾಜರಾಗಬೇಕು.

    ಇದನ್ನೂ ಓದಿ: ನಾನು ತಲೆಮರೆಸಿಕೊಂಡಿಲ್ಲ, ಮನೆಯಲ್ಲೇ ಇದ್ದೆ; ಮತ್ತೆ ಬಿಜೆಪಿ ಸದಸ್ಯತ್ವ ಪಡೆಯುವೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ

    ಈಗಾಗಲೇ ವಿಚಾರಣೆಗೆ ಹಾಜರಾಗಲು ಮಾಡಾಳ್ ವಿರೂಪಾಕ್ಷಪ್ಪ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಹಣಕ್ಕೆ ಲೆಕ್ಕ ಕೊಡಲು ಸಿದ್ಧರಾಗಿದ್ದಾರೆ. ತಮ್ಮ ವ್ಯವಹಾರ, ಅಡಿಕೆ ವ್ಯಾಪಾರ, ಕೃಷಿ ಆದಾಯ ದಾಖಲೆಗಳ ಸಮೇತ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

    ಇಂದು ಮಾಡಾಳ್ ವಿರೂಪಾಕ್ಷಪ್ಪನಿಂದ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಪಡೆಯಲಿದ್ದು. ಕೆಎಸ್​ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಇವರ ಪಾತ್ರ ಏನಿತ್ತು ಎನ್ನುವುದನ್ನೂ ಕೇಳಲಿದ್ದಾರೆ. ಟೆಂಡರ್​ಗಳಿಗೂ ಅಧ್ಯಕ್ಷರಿಗೂ ನೇರ ಸಂಬಂಧ ಇರುತ್ತಾ..? ಎಂದೆಲ್ಲ ಪ್ರಶ್ನೆಗಳನ್ನು ಕೇಳಲಾಗುತ್ತದೆ.

    ಇದನ್ನೂ ಓದಿ: ಜಾಮೀನು ಸಿಕ್ಕ ಬೆನ್ನಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷ; ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗಿ!

    ಹೀಗೆ ಕೆ.ಎಸ್.ಡಿ.ಎಲ್ ಮತ್ತು ಟೆಂಡರಿಂಗ್ ವಿಚಾರದ ಬಗ್ಗೆ ಇಂದು ವಿಚಾರಣೆ ನಡೆಯಲಿದ್ದು ಮನೆಯಲ್ಲಿ ಸಿಕ್ಕಿರುವ ಹಣ, ಚಿನ್ನಾಭರಣಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಇಂದು ಪ್ರಶ್ನೆ ಕೇಳುವ ಸಾಧ್ಯತೆ ತೀರಾ ಕಮ್ಮಿ ಇದೆ. ಮತ್ತೊಂದು ಸುತ್ತಿನ ವಿಚಾರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಸಲಿ ವಿಚಾರವನ್ನು ಕೆದಕುತ್ತಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts