More

    ಅಧ್ಯಾಪಕ ವೃತ್ತಿಗಿಲ್ಲ ನಿವೃತ್ತಿ: ಬೇಲಿಮಠದ ಶಿವರುದ್ರ ಸ್ವಾಮೀಜಿ

    ಬೆಂಗಳೂರು: ಸಮಾಜದಲ್ಲಿ ಗುರುವಿನ ಸ್ಥಾನವನ್ನು ಹೊಂದಿರುವ ಅಧ್ಯಾಪಕ ವೃತ್ತಿಗೆ ಎಂದಿಗೂ ನಿವೃತ್ತಿ ಎಂಬುದು ಇರದು. ಬದಲಾಗಿ ಅವರು ಸದಾ ಕಾಲ ಪ್ರವೃತ್ತರಾಗಿರುತ್ತಾರೆ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ತಿಳಿಸಿದರು.

    ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗುರುವಾರ ರಂಗೋತ್ರಿ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಶೀಲಾದೇವಿ ಎಸ್ ಮಳೀಮಠಗೆ ಜಂಗಮಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

    ಅರವತ್ತರ ಅರಿವು ಅನ್ನುವಂತಹದ್ದು ಎಲ್ಲರ ಬಾಳಿನಲ್ಲಿ ಪ್ರೇರಕ ಶಕ್ತಿಯಾಗಿ ಹರಡುವ ಅವಕಾಶ. ಅದು ವಿಶ್ರಾಂತಿ ಬದಲು ವಿಜೃಂಭಣೆಯ ಸಮಯ. ಅದುವರೆಗೂ ಗಳಿಸಿದ ಸಾಧನಾ ಶಕ್ತಿಯನ್ನು ಎಲ್ಲರಿಗೂ ಹಂಚಿ ಸುಗಂಧ ಬೀರುವ ಸುಸಮಯ. ಹಾಗಾಗಿ ಅಧ್ಯಾಪಕರು ನಿವೃತ್ತರಾಗದೆ ತಮ್ಮ ಶಿಷ್ಯಂದಿರಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ ಎಂದರು.

    ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಪ್ರಾಧ್ಯಾಪಕಿ, ವಿಮರ್ಶಕಿ, ಸಾಹಿತ್ಯ ಕೃಷಿ ಹೀಗೆ ಹತ್ತುಹಲವು ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದ ಶ್ರೇಯಕ್ಕೆ ಶೀಲಾದೇವಿ ಮಳೀಮಠ ಪಾತ್ರರಾಗಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಿ.ಅಶ್ವತ್ಥನಾರಾಯಣ, ಪ್ರಶಸ್ತಿ ಪುರಸ್ಕೃತೆ ಶೀಲಾದೇವಿ ಎಸ್ ಮಳಿಮಠ, ರಂಗೋತ್ರಿ ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಕೆ.ಎಚ್.ಕುಮಾರ್ ಹಾಜರಿದ್ದರು.

    ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್, ‘ಸಮಾಜದಲ್ಲಿ ಇಂದು ದೇವರು ಮತ್ತು ಧರ್ಮದ ಹೆಸರಿನಲ್ಲಿ ವ್ಯಾಪಾರ ನಡೆಯುತ್ತಿದೆ. ಸರ್ಕಾರಗಳು ಎಲ್ಲವನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿವೆ. ಇದೆಲ್ಲವನ್ನು ಗಮನಿಸಿ ಪ್ರತಿಕ್ರಿಯಿಸಿದಾಗ ಮಾತ್ರ ನಾವು ನಿಜವಾದ ನಾಗರಿಕರಾಗುತ್ತೇವೆ’ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts