More

    ಪರಿಸರ, ಯುವ, ಮಹಿಳಾ ಸ್ನೇಹಿ ಮತಗಟ್ಟೆ ರೆಡಿ; ಕ್ಷೇತ್ರದಲ್ಲಿ ಗಮನ ಸಳೆಯುತ್ತಿವೆ ವಿಶೇಷ ಬೂತ್‌ಗಳು

    ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 7ರಂದು ನಡೆಯಲಿರುವ ಮತದಾನಕ್ಕೆ ಕ್ಷೇತ್ರ ವ್ಯಾಪ್ತಿಯ 1,982 ಮತಗಟ್ಟೆಗಳು ಸಿದ್ಧಗೊಂಡಿದ್ದು, ವಿಶೇಷವಾಗಿ ಸಿಂಗಾರಗೊಂಡಿರುವ ಮಹಿಳಾ ಸ್ನೇಹಿ, ಪರಿಸರ ಸ್ನೇಹಿ, ಯುವ ಸ್ನೇಹಿ ಹಾಗೂ ವಿಕಲಚೇತನ ಸ್ನೇಹಿ ಮತಗಟ್ಟೆಗಳು ಮತದಾರರ ಗಮನ ಸೆಳೆಯುತ್ತಿವೆ.
    ಜಿಲ್ಲಾ ಸ್ವೀಪ್ ಸಮಿತಿಯಿಂದ ಹಾವೇರಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದರಂತೆ 40 ಸಖಿ ಮತಗಟ್ಟೆಗಳು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದರಂತೆ ಐದು ಥೀಮ್ ಬೇಸ್ಡ್, ಐದು ಯುವ ಹಾಗೂ ಐದು ವಿಕಲಚೇತನ ಮತಗಟ್ಟೆಗಳನ್ನು ವಿಶೇಷ ವಿನ್ಯಾಸಗೊಳಿಸಲಾಗಿದೆ.
    ಮಹಿಳಾ ಸ್ನೇಹಿ ಗೋಡೆ ಬರಹ, ಅತ್ಯಾಕರ್ಷಕ ಚಿತ್ರ ಕಲೆಗಳು ಮತಗಟ್ಟೆಯನ್ನು ಮಹಿಳಾ ಸ್ನೇಹಿಯಾಗಿಸಿದ್ದು, ತಿಳಿ ಛಾಯೆಯ ಗುಲಾಬಿ ಬಣದಿಂದ ಶೃಂಗಾರಗೊಂಡಿವೆ. ಮಹಿಳಾ ಮತದಾರರನ್ನು ಸೆಳೆಯಲು ಹಾಗೂ ಮಹಿಳೆಯರಿಗೆ ಮತದಾನ ಮಾಡಲು ಮತ್ತು ಅವರಿಗೆ ಮಾರ್ಗದರ್ಶನ ನೀಡಲು ಸರಳವಾಗುವ ರೀತಿಯಲ್ಲಿ ಸಖೀ ಮತಗಟ್ಟೆಗಳನ್ನು ನಿರ್ಮಾಣ ಮಾಡಿದೆ. ಹಾವೇರಿ ಜಿಲ್ಲೆಯಲ್ಲಿ ವಿಶೇಷವಾಗಿ ಮಹಿಳೆಯರ ಮತದಾನ ಶೇಕಡಾ ನೂರರಷ್ಟು ಮಾಡಲು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಗುರಿಯನ್ನು ತಲುಪಲು ಕ್ರಮವಹಿಸಲಾಗಿದೆ.
    ಪರಿಸರ ಸ್ನೇಹಿ ಮತಗಟ್ಟೆಗಳಲ್ಲಿ ಪ್ರಕೃತಿಯ ಮಡಿಲಲ್ಲಿ ಸಂಚರಿದಷ್ಟು ಖುಷಿ ನೀಡುವಂತೆ ಹೂವು, ಹಣ್ಣು, ಅರಣ್ಯ, ಗುಡಿಸಲುಗಳೊಂದಿಗೆ ಪರಿಸರ ಸ್ನೇಹಿ ಮತಗಟ್ಟೆಗಳನ್ನು ಅಲಂಕಾರಗೊಳಿಸಿದ್ದು, ಸಂಭ್ರಮ, ಸಡಗರದ ವಾತಾವರಣ ನಿರ್ಮಾಣ ಮಾಡಲಾಗಿದೆ.ಮತದಾರರರೊಂದಿಗೆ ಸ್ಲೆಲ್ಪಿ ಕ್ಲಿಕಿಸಿಕೊಳ್ಳಲು ಪರಿಸರ ಸ್ನೇಹಿ ಮತಗಟ್ಟೆ ಸಿದ್ಧಗೊಂಡಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
    ನೀರು, ನೆರಳು, ಶೌಚಗೃಹ
    ಬಿಸಿಲಿನ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ, ಶುದ್ಧ ಕುಡಿಯುವ ನೀರು, ನೆರಳು, ರ‌್ಯಾಂಪ್, ಶೌಚಗೃಹ, ಬೂತ್ ಕನ್ನಡಿ, ಸೆಲ್ಫಿ ಸ್ಟ್ಯಾಂಡ್ ಮತ್ತು ಅಗತ್ಯ ಸೇವೆಗಳನ್ನು ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts