More

    ವಕೀಲರಂತೆ ಪತ್ರ ಬರೆದು 90 ಲಕ್ಷ ರೂ. ಉಳಿಸಿದ ಚಾಟ್​ ಜಿಪಿಟಿ!

    ನವದೆಹಲಿ: ಓಪನ್​ ಎಐ ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಎಐ ಚಾಲಿತ ಚಾಟ್‌ಬಾಟ್ ಚಾಟ್​ ಜಿಪಿಟಿಯನ್ನು ಪ್ರಾರಂಭಿಸಿತ್ತು. ಇದೀಗ ಚಾಟ್​ ಜಿಪಿಟಿ ಕಾನೂನು ಸಲಹೆ ಕೂಡ ನೀಡುತ್ತಿದೆ. ಈಗಾಗಲೇ ಚಾಟ್​ ಜಿಪಿಟಿ ಬಳಸಿ ಡೆವಲಪರ್‌ಗಳು ಮತ್ತು ಬಳಕೆದಾರರು ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ. ಮಾರ್ಕೆಟಿಂಗ್ ವೃತ್ತಿಪರರಿಗೆ ಕರಡು ತಂತ್ರಗಳನ್ನು ರೂಪಿಸಲು ಸಹಾಯ ಮಾಡುವುದರಿಂದ ಹಿಡಿದು ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಸಹಾಯ ಮಾಡುವವರೆಗೆ, ಚಾಟ್​ ಜಿಪಿಟಿ ಸಾಮೂಹಿಕವಾಗಿ ಎಲ್ಲರಿಗೂ ಸಹಾಯ ಮಾಡುತ್ತಿದೆ.

    ಇದನ್ನೂ ಓದಿ: ಕೃತಕ ಮಾತು, ಮತ್ತೆ ಬುದ್ಧಿ!?: ಚಾಟ್ ಜಿಪಿಟಿ ಜತೆ ಚಿಟ್-ಚಾಟ್

    ಈಗ, ಕೆನಡಾದ ಪ್ರೋಗ್ರಾಮರ್ ಗ್ರೆಗ್ ಇಸೆನ್‌ಬರ್ಗ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತನಗೆ ಪಾವತಿ ಮಾಡಲು ನಿರಾಕರಿಸಿದ ಬಹು-ಶತಕೋಟಿ ಉದ್ದಿಮೆ ಹೊಂದಿರುವ ಕ್ಲೈಂಟ್ ವಿರುದ್ಧ ಹೋರಾಡಲು, ಅವರು ಚಾಟ್​ ಜಿಪಿಟಿ ಸಹಾಯ ತೆಗೆದುಕೊಂಡರು. ‘ಮಾಡಿದ ಕೆಲಸಕ್ಕಾಗಿ ನಿಮಗೆ ಪಾವತಿಸದೇ ಇದ್ದ ಬಹು-ಶತಕೋಟಿ ಉದ್ದಿಮೆ ಹೊಂದಿರುವ ಕ್ಲೈಂಟ್ ಅನ್ನು ಕಲ್ಪಿಸಿಕೊಳ್ಳಿ. ಹೆಚ್ಚಿನ ಜನರು ವಕೀಲರ ಕಡೆಗೆ ಮುಖ ಮಾಡುತ್ತಾರೆ. ನಾನು ಚಾಟ್​ ಜಿಪಿಟಿ ಕಡೆಗೆ ತಿರುಗಿದೆ’ ಎಂದು ಇಸೆನ್‌ಬರ್ಗ್‌ ಹೇಳಿದ್ದಾರೆ.

    ಅವರ ಟ್ವೀಟ್​ ಪ್ರಕಾರ, 2022ರಲ್ಲಿ, ಇಸೆನ್‌ಬರ್ಗ್ ಮತ್ತು ಅವರ ಗುಂಪು ಜನಪ್ರಿಯ ಬ್ರಾಂಡ್‌ಗೆ ಕೆಲವು ಡಿಸೈನ್​ ಸೇವೆಗಳನ್ನು ನೀಡಿತು. ಆ ಬ್ರ್ಯಾಂಡ್ ಇಸೆನ್‌ಬರ್ಗ್ ನೀಡಿದ ಕೊಡುಗೆಯಿಂದ ಪ್ರಭಾವಿತವಾಗಿ ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುತ್ತಲೇ ಇತ್ತು. ಆದರೆ, ಕಡೆಗೆ ಹಣ ಪಾವತಿ ಮಾಡಲು ನಿರಾಕರಿಸಿದರು.

    ವಿನ್ಯಾಸ ಮತ್ತು ಎಂಜಿನಿಯರಿಂಗ್‌ನಲ್ಲಿ ಲಕ್ಷಾಂತರ ಆದಾಯವನ್ನು ಗಳಿಸುವ ನೂರಾರು ಯೋಜನೆಗಳನ್ನು ತನ್ನ ವಿನ್ಯಾಸ ಸಂಸ್ಥೆ ಪೂರ್ಣಗೊಳಿಸಿದೆ ಎಂದು ಟೆಕ್ಕಿ ಹೇಳಿದ್ದಾರೆ. ಪಾವತಿಯ ಬಗ್ಗೆ ಏಜೆನ್ಸಿಯನ್ನು ಕೇಳಿದಾಗ ಈತನನ್ನು ತಾನು ಎಂದಿಗೂ ನೋಡಿಲ್ಲ ಎಂದು ಆ ಬದಿಯಿಂದ ಉತ್ತರ ಬಂದಿದೆ.ಇದರಿಂದಾಗಿ ತಂಡದ ನೈತಿಕ ಸ್ಥೈರ್ಯವನ್ನು ಕುಗ್ಗಿತ್ತು ಎಂದು ಐಸೆನ್‌ಬರ್ಗ್ ಹೇಳಿದ್ದಾರೆ.

    ಅದೃಷ್ಟವಿಲ್ಲದೆ, ಏಜೆನ್ಸಿಯ ಹಣ ಪಾವತಿಸಲು ಕಠಿಣ ಶಬ್ದಗಳಲ್ಲಿ ಕೇಳುವ ಬಗ್ಗೆ ಆಲೋಚಿಸಲಾಯಿತು. ಆದರೂ, ಕಿವುಡು ಕಿವಿಯಲ್ಲಿ ಮತ್ತೊಂದು ಕಹಳೆ ಊದುವ ಬದಲು ಅಥವಾ ದುಬಾರಿ ವಕೀಲರ ಪಡೆಯನ್ನು ಹೈರ್​ ಮಾಡುವ ಬದಲು ಐಸೆನ್‌ಬರ್ಗ್ ಮಿಲಿಯನ್ ಡಾಲರ್ ಕಲ್ಪನೆಯನ್ನು ಜಾರಿಗೆ ತಂದರು. ಚಾಟ್​ ಜಿಪಿಟಿ ಬಳಸಿ ಆ ಕಂಪನಿಯ ಗಮನ ಸೆಳೆಯಲು ಹೆಚ್ಚು ಭಯಾನಕ ಇಮೇಲ್ ಅನ್ನು ರಚಿಸಿದರೆ ಏನು? ಅವರು ಭಾವಿಸಿದರು. ಚಾಟ್​ ಜಿಪಿಟಿಗೆ ಯಾವ ಫೀಸು ಕೂಡ ನೀಡಬೇಕಾಗಿಲ್ಲ.

    ಇದನ್ನೂ ಓದಿ: ಗೂಗಲ್​ಗೆ ಟಕ್ಕರ್​ ಕೊಡಲಿದೆಯಾ ಚಾಟ್ ​ಜಿಪಿಟಿ?!

    ಹೀಗೆ ಚಾಟ್​ ಜಿಪಿಟಿ ತಯಾರಿಸಿದ ಮೇಲ್​ ಅನ್ನು ಕಳಿಸಿದ ಕೆಲವೇ ಕ್ಷಣಗಳಲ್ಲಿ ಉತ್ತರ ಬಂದಿದ್ದು ತಕ್ಷಣವೇ ಬಾಕಿ ಹಣವನ್ನು ಪಾವತಿಸುವ ಬಗ್ಗೆ ಮಾತನಾಡಿದ್ದರು. ಹೀಗೆ ಚಾಟ್​ ಜಿಪಿಟಿ ಸಹಾಯದಿಂದ ಸಮಯ, ಹಣ ಹಾಗೂ ಪರಿಶ್ರಮವನ್ನು ಈ ಪ್ರೋಗ್ರಾಮರ್​ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ವಿವರವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ವಿಚಾರವನ್ನು ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts