ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಮಾಸ್ ಮಹಾರಾಜ, ನಟ ರವಿತೇಜ ಅಭಿನಯದ ಬಹುನಿರೀಕ್ಷಿತ ‘ಈಗಲ್’ ಸಿನಿಮಾದ ಬಗ್ಗೆ ಚಿತ್ರತಂಡದಿಂದ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಇದೀಗ ಚಿತ್ರದ ಬಿಡುಗಡೆ ದಿನಾಂಕ ಎಂದು? ಎಂಬುದರ ಮಾಹಿತಿ ಅಧಿಕೃತವಾಗಿ ಘೋಷಣೆಯಾಗಿದೆ.
ಇದನ್ನೂ ಓದಿ: ಐಸಿಸಿ ತೀರ್ಮಾನದಂತೆ ಕಾಲುವೆಗೆ ನೀರು ಹರಿಸಿ; ಡಿಸಿ ಟಿ.ಭೂಬಾಲನ್‌ಗೆ ಎಕೆಆರ್‌ಎಸ್ ಮನವಿ
ಸದ್ಯ ಪೋಸ್ಟರ್ ಮೂಲಕವೇ ಟಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿದ್ದ ‘ಈಗಲ್’ ಚಿತ್ರವು ಜನವರಿ, 13 2024 ರಂದು ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಕುರಿತಂತೆ ಚಿತ್ರ ತಯಾರಕರು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲಿಯೇ ಮೃದು ತ್ವಚೆ ಪಡೆಯಲು ಇಲ್ಲಿದೆ ಸಲಹೆಗಳು..
ಆ್ಯಕ್ಷನ್-ಥ್ರಿಲ್ಲರ್ ಜಾನರ್ ಒಳಗೊಂಡ ಈಗಲ್ ಸಿನಿಮಾದ ಕಿರು ಗ್ಲಿಂಪ್ಸ್ ವಿಡಿಯೋ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಚಿತ್ರದಲ್ಲಿ ರವಿತೇಜ ಮತ್ತು ಅನುಪಮಾ ಪರಮೇಶ್ವರನ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕಾವ್ಯಾ ಥಾಪರ್, ನವದೀಪ್, ಶ್ರೀನಿವಾಸ್ ಅವಸರಾಳ, ಮಧುಬಾಲಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).
ISRO; ಬಾಹ್ಯಾಕಾಶ ಕ್ಷೇತ್ರದಲ್ಲಿ ವೈಫಲ್ಯವಾದರೆ ದಂಡ ವಿಧಿಸುವುದಿಲ್ಲ: ಎಸ್. ಸೋಮನಾಥ್