More

    ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲಿಯೇ ಮೃದು ತ್ವಚೆ ಪಡೆಯಲು ಇಲ್ಲಿದೆ ಸಲಹೆಗಳು..

    ಬೆಂಗಳೂರು: ಹುಡುಗಿಯರು ಸೌಂದರ್ಯಕ್ಕೆ ವಿಶೇಷ ಗಮನ ನೀಡುತ್ತಾರೆ. ಪ್ರತಿಯೊಬ್ಬರೂ ಹೊಳೆಯುವ, ನಯವಾದ ತ್ವಚೆಯ ಕನಸು ಕಾಣುತ್ತಾರೆ. ಹೊಳೆಯುವ ಸೌಂದರ್ಯಕ್ಕಾಗಿ ಫೇಶಿಯಲ್ ಮತ್ತು ಸ್ಪಾ ಮಾಡಲು ಅನೇಕ ಜನರು ವಾರಕ್ಕೊಮ್ಮೆ ಪಾರ್ಲರ್‌ಗೆ ಹೋಗುತ್ತಾರೆ. ಆದರೆ ನಾವು ಇಂದು ನಿಮಗೆ ಮನೆಯಲ್ಲೇ ಹೇಗೆ ಬ್ಯೂಟಿ ಕೇರ್​​ ಮಾಡಿಕೊಳ್ಳಬಹುದು ಎಂದುನ್ನು ತಿಳಿಸುತ್ತೇವೆ.

    1) ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಮೇಳೆ ಲೇಪಿಸಿ. 20 ನಿಮಿಷಗಳ ಕಾಲ ಅನ್ವಯಿಸಿ. ನಂತರ ತಣ್ಣಿರಿನಿಂದ ಮುಖ ತೊಳೆಯಿರಿ.

     2)  ಅಲೋವೆರಾ ಜೆಲ್​ನ್ನು ಮುಖಕಕ್ಕೆ ಹಚ್ಚಿ ಮಸಾಜ್ ಮಾಡಿ. ಅಲೋವೆರಾ ಜೆಲ್ ಅನ್ನು ದಿನಕ್ಕೆ ಎರಡು ಬಾರಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಮ್ಮ ಮುಖದ ಚರ್ಮ ಹೊಳೆಯುವುದರ ಜತೆ ಮೃದುವಾಗುತ್ತದೆ.

     3) ಹಾಲಿನಿಂದ ಮುಖವನ್ನು ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ  ಮೃದು ಚರ್ಮ ನಿಮ್ಮದಾಗುತ್ತದೆ.

    4) ಮೊಸರಿನಲ್ಲಿ ಸೌತೆಕಾಯಿ ಚೂರುಗಳನ್ನು ಹಾಕಿ. ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಗೆ ಕೂಲಿಂಗ್ ಎಫೆಕ್ಟ್ ನೀಡುತ್ತದೆ. ಇದು ಚರ್ಮವನ್ನು ತೇವಾಂಶದಿಂದ ಕೂಡಿರಿಸುತ್ತದೆ. ಈಗ ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಗೆ ತಾಜಾತನ ಮರಳಿ ಬರುತ್ತದೆ. ಅಲ್ಲದೆ, ಇದರಲ್ಲಿರುವ ಮಾಯಿಶ್ಚರೈಸಿಂಗ್ ಏಜೆಂಟ್ ಚರ್ಮವನ್ನು ಮೃದುಗೊಳಿಸುತ್ತದೆ.

    5) ಆಲಿವ್ ಎಣ್ಣೆಯ ಅಥವಾ ತೆಂಗಿನ ಎಣ್ಣೆಯನ್ನು ಮುಖಕ್ಕೆ  ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಇದು ಚರ್ಮದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೀವು ವಾರದಲ್ಲಿ 2 ದಿನ ಈ ಸ್ಕ್ರಬ್ ಅನ್ನು ಬಳಸಬಹುದು.

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts