ಬೆಂಗಳೂರು: ಇನ್ನೇನು ಬಲಿಯಾಗಬೇಕಿದ್ದ ಜೀವವೊಂದು ಉಳಿದಿದೆ. ಚಿತ್ರತಂಡ ಹಾಗೂ ಅಭಿಮಾನಿಗಳ ಒತ್ತಾಯದಿಂದ ಪ್ರಾಣಿಯೊಂದು ಪ್ರಾಣಾಪಾಯದಿಂದ ಪಾರಾಗಿದೆ. ಹೀಗೆ ಬದುಕುಳಿದ ಪ್ರಾಣಿಯ ಹೆಸರು ‘7 ಸ್ಟಾರ್ ಸುಲ್ತಾನ’.

ನಟ ಡಾಲಿ ಧನಂಜಯ್ ಅವರ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣವಾಗುತ್ತಿರುವ, ನಟ ನಾಗಭೂಷಣ್ ಹಾಗೂ ‘ನೆನಪಿರಲಿ’ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ ‘ಟಗರು ಪಲ್ಯ’ ಚಿತ್ರತಂಡ ಇಂಥದ್ದೊಂದು ಜೀವ ಉಳಿಸಿದ ಕಾರ್ಯಕ್ಕೆ ಸಾಕ್ಷಿಯಾಗಿದೆ.
ಎಲ್ಲವೂ ಪೂರ್ವನಿಗದಿಯಂತೆ ನಡೆದಿದ್ದರೆ ಉಮೇಶ್ ಕೆ. ಕೃಪ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಟಗರು ಪಲ್ಯ’ ಚಿತ್ರದಲ್ಲಿನ ಟಗರು ಕಾಳಗದಲ್ಲಿ ಗೆದ್ದ ‘7 ಸ್ಟಾರ್ ಸುಲ್ತಾನ’ ಈ ಬಕ್ರೀದ್ಗೆ ಬಲಿಯಾಗಿರುತ್ತಿತ್ತು. ಅರ್ಥಾತ್, ಈ ಟಗರನ್ನು ಬಕ್ರೀದ್ ಕುರ್ಬಾನಿಗೆ ಕೊಡಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ಗೃಹಲಕ್ಷ್ಮಿ ವಿಳಂಬ?; ಅದೊಂದೇ ಕಾರಣಕ್ಕೆ ಸ್ವಲ್ಪ ತಡವಾಗುತ್ತಿದೆ ಎಂದ ಹೆಬ್ಬಾಳ್ಕರ್!
ಆದರೆ ಈ ಕುರಿತ ವಿಚಾರ ಬಹಿರಂಗೊಂಡಿದ್ದರಿಂದ ಯಾವುದೇ ಕಾರಣಕ್ಕೂ ‘7 ಸ್ಟಾರ್ ಸುಲ್ತಾನ’ನನ್ನು ಕುರ್ಬಾನಿಗೆ ಕೊಡಬಾರದು ಎಂಬ ಒತ್ತಾಯ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಮಾತ್ರವಲ್ಲ, ‘ಟಗರು ಪಲ್ಯ’ ಚಿತ್ರತಂಡ ಕೂಡ ಈ ಕುರಿತು ಮನವಿ ಮಾಡಿಕೊಂಡಿತ್ತು. ಹೀಗೆ ಚಿತ್ರತಂಡ ಮತ್ತು ಅಭಿಮಾನಿಗಳ ಒತ್ತಾಯದಿಂದಾಗಿ ‘7 ಸ್ಟಾರ್ ಸುಲ್ತಾನ’ನ ಜೀವ ಉಳಿದಿದೆ.
ಇದನ್ನೂ ಓದಿ: ಒಂದೇ ದಿನ ಪ್ರಾಣ ಕಳ್ಕೊಂಡ್ರು ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು; ಎರಡು ತಿಂಗಳಲ್ಲಿ 9 ಪ್ರಕರಣ!
ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಯುನೀಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ ಈ ಟಗರನ್ನು 1,88,500 ರೂ. ಕೊಟ್ಟು ಖರೀದಿಸಿದ್ದರು. ಅದಕ್ಕೂ ಮುನ್ನ ಈ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು, ಅನೇಕ ಬಹುಮಾನಗಳನ್ನೂ ಗೆದ್ದಿದೆ.
ಇದು ಈ ವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ನಗದು ಸೇರಿ ಒಟ್ಟು ಸುಮಾರು 20 ಲಕ್ಷ ರೂ. ಮೌಲ್ಯದ ಬೆಳ್ಳಿ, ಬಂಗಾರ, ಬೈಕ್ ಇತ್ಯಾದಿ ಬಹುಮಾಗಳನ್ನು ಗಳಿಸಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ ‘7 ಸ್ಟಾರ್ ಸುಲ್ತಾನ’ ಎಂದು ಹೆಸರಿಟ್ಟಿದ್ದರು.
ಇದನ್ನೂ ಓದಿ: ತಹಶೀಲ್ದಾರ್ ಮನೇಲಿ ಸಿಕ್ತು ಲೀಟರ್ಗಟ್ಟಲೆ ಮದ್ಯ!; ಲೋಕಾಯುಕ್ತ ದಾಳಿ ವೇಳೆ ಪತ್ತೆ
‘ಟಗರು ಪಲ್ಯ’ ಡಾಲಿ ಪಿಕ್ಚರ್ಸ್ನ ಮೂರನೇ ಸಿನಿಮಾ ಆಗಿದ್ದು, ಮಂಡ್ಯದ ಹಳ್ಳಿಗಳಲ್ಲಿ ನಡೆಯುವ ಆಚರಣೆಯ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಮುತಾಂದವರು ಈ ಚಿತ್ರದಲ್ಲಿ ಅಭಿನಯಿಸಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಎಸ್.ಕೆ.ರಾವ್ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!