

ಬೆಂಗಳೂರು: ಅಂದುಕೊಂಡ ಸಮಯಕ್ಕಿಂತ ತಡವಾಗಬಹುದು ಎಂದು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕೊನೆಗೂ ಜುಲೈ 1ರಂದೇ ಅನ್ನಭಾಗ್ಯ ಯೋಜನೆ ಜಾರಿಗೆ ಬರಲಿದೆ ಎಂಬುದು ಕೆಲವು ಬದಲಾವಣೆಯೊಂದಿಗೆ ಇಂದು ಮತ್ತೊಮ್ಮೆ ಘೋಷಣೆಯಾಗಿದೆ.
ಇದೀಗ ಗೃಹಲಕ್ಷ್ಮಿ ಯೋಜನೆ ವಿಳಂಬವಾಗುವ ಲಕ್ಷಣ ಗೋಚರಿಸಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಮಾಹಿತಿ ಬಹಿರಂಗಪಡಿಸಿದ್ದಾರೆ. ಯೋಜನೆ ಸಂಬಂಧ ಇಂದು ಸಂಪುಟದಲ್ಲಿ ಚರ್ಚೆಯಾಗಿದೆ. ತಾತ್ಕಾಲಿಕವಾಗಿ ನಾನೂ ಅದೇ ದಿನಾಂಕ ಹೇಳಬಲ್ಲೆ ಎಂದು ಅವರು ಹೇಳಿದ್ದಾರೆ.
ಅರ್ಜಿಗೆ ಸಿಎಂ ಅನುಮೋದನೆ ನೀಡಿದ್ದಾರೆ. ಗೃಹಜ್ಯೋತಿ ಯೋಜನೆ ಅನುಷ್ಠಾನ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ. ಆದರೆ ನಾವು ಎಷ್ಟೇ ಅಪ್ಲಿಕೇಷನ್ ಮಾಡಿದರೂ ಸರ್ವರ್ ಒಂದೇ ಅಲ್ವಾ? ಅದೊಂದೇ ಕಾರಣಕ್ಕೆ ಗೃಹಲಕ್ಷ್ಮಿ ಸ್ವಲ್ಪ ತಡವಾಗಿದೆ. ಜು. 3ರಂದು ನಾವು ಮತ್ತೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಆಗಸ್ಟ್ನಲ್ಲಿ ಮಹಿಳೆಯರ ಖಾತೆಗೆ ಹಣ ಹಾಕುವುದಂತೂ ನಿಜ ಎಂದು ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.