ತಹಶೀಲ್ದಾರ್​ ಮನೇಲಿ ಸಿಕ್ತು ಲೀಟರ್​​ಗಟ್ಟಲೆ ಮದ್ಯ!; ಲೋಕಾಯುಕ್ತ ದಾಳಿ ವೇಳೆ ಪತ್ತೆ

Cash F
ತಹಶೀಲ್ದಾರ್ ಅಜಿತ್​ಕುಮಾರ್ ಮತ್ತು ಮನೆಯಲ್ಲಿ ಸಿಕ್ಕ ನಗದು.
Published on

ಬೆಂಗಳೂರು: ಸಂಪಾದನೆಗೂ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ರಾಜ್ಯಾದ್ಯಂತ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರರೊಬ್ಬರ ಮನೆಯಲ್ಲಿ ಲೀಟರ್​​ಗಟ್ಟಲೆ ಮದ್ಯ ಪತ್ತೆಯಾಗಿದೆ.

ಬೆಂಗಳೂರು ಪೂರ್ವ ತಾಲೂಕು, ಕೆ.ಆರ್​.ಪುರ ತಹಶೀಲ್ದಾರ್ ಎಸ್​. ಅಜಿತ್​ಕುಮಾರ್​ ರೈ ಮನೆಯಲ್ಲಿ ಈ ಭಾರಿ ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿದೆ. ಅಜಿತ್ ಮನೆಯಲ್ಲಿ ವಿದೇಶಿ ಬ್ರ್ಯಾಂಡ್​ನ 16.2 ಲೀ. ಆಲ್ಕೋಹಾಲ್ ಪತ್ತೆಯಾಗಿದ್ದು, ಅದರ ಮೌಲ್ಯ 1.45 ಲಕ್ಷ ರೂ. ಎಂದು ಅಬಕಾರಿ ಅಧಿಕಾರಿಗಳು ಅಂದಾಜಿಸಿದ್ದು, ಅದನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಅಜಿತ್​ಕುಮಾರ್​ ಮನೆಯಲ್ಲಿ 40 ಲಕ್ಷ ರೂ. ನಗದು ಮಾತ್ರವಲ್ಲದೆ, 1.9 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿವೆ. ಅಜಿತ್ ಮನೆಯಲ್ಲಿ ಐಷಾರಾಮಿ ಕಾರುಗಳೂ ಪತ್ತೆಯಾಗಿದ್ದು, ಎರಡೂವರೆ ಕೋಟಿ ರೂ. ಮೌಲ್ಯದ ಇನ್ನೊಂದು ಕಾರ್ ಖರೀದಿ ಕುರಿತ ಬಿಲ್ ಕೂಡ ಸಿಕ್ಕಿದ್ದು, ಆ ಕಾರ್ ಇನ್ನಷ್ಟೇ ಪತ್ತೆಯಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net