ಒಂದೇ ದಿನ ಪ್ರಾಣ ಕಳ್ಕೊಂಡ್ರು ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು; ಎರಡು ತಿಂಗಳಲ್ಲಿ 9 ಪ್ರಕರಣ!

Crime
Published on

ನವದೆಹಲಿ: ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಮಾತ್ರವಲ್ಲ, ಎರಡು ತಿಂಗಳಲ್ಲಿ ಇಂಥ 9 ಪ್ರಕರಣಗಳು ನಡೆದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜಸ್ಥಾನದ ಕೋಟಾದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಹುಲ್ ವೈಷ್ಣವ್ ಹಾಗೂ ಆದಿತ್ಯ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿಗಳು.

ಮೆಹುಲ್ ವೈಷ್ಣವ್ (18) ನೀಟ್ ಪರೀಕ್ಷೆಗೆ ಸಜ್ಜಾಗುತ್ತಿದ್ದು, ಮಂಗಳವಾರ ಬೆಳಗ್ಗೆ ಉದಯಪುರದ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದ. ಉದಯಪುರ ಜಿಲ್ಲೆಯ ಸಲುಂಬಾರ್​ ಎಂಬಲ್ಲಿನ ಈತ ಕೋಚಿಂಗ್ ಇನ್​ಸ್ಟಿಟ್ಯೂಟ್​ವೊಂದರಲ್ಲಿ 2 ತಿಂಗಳಿಂದ ನೀಟ್ ಅಧ್ಯಯನದಲ್ಲಿ ತೊಡಗಿದ್ದ. ಈತ ಹಾಸ್ಟೆಲ್​ನಲ್ಲಿ ಏಕಾಂಗಿಯಾಗಿದ್ದ ಈ ಆತ್ಮಹತ್ಯೆ ಮಾಡಿಕೊಂಡಿದ್ದ.

ವೈದ್ಯಕೀಯ ಪರೀಕ್ಷೆಗೆ ತಯಾರಿಯಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಆದಿತ್ಯ ಎಂಬಾತ ಕೂಡ ಕೋಟಾದಲ್ಲಿ ನೇಣು ಹಾಕಿಕೊಂಡಿದ್ದಾನೆ. ಈತನೂ ಕೋಚಿಂಗ್​ಗಾಗಿ ಎರಡು ತಿಂಗಳ ಹಿಂದೆ ಬಂದಿದ್ದ. ಕೋಟಾದಲ್ಲಿ ಕಳೆದ ಎರಡು ತಿಂಗಳಲ್ಲಿ ಇಂಥ 9 ಆತ್ಮಹತ್ಯೆಗಳಾಗಿವೆ. ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net