More

    ನಿನ್ನೆ ‘ಮೀಟ್​ ಮಾಡಣ ಇಲ್ಲ ಡೇಟ್ ಮಾಡಣ’, ಇಂದು ‘ನೋಡುತ.. ಸುಮ್ಮನೇ..’; ಮತ್ತೆ ಟಾಪ್​ಗೆ ಹೋದ ರಚಿತಾ ರಾಮ್​

    ಬೆಂಗಳೂರು: ನಿನ್ನೆ ಎಲ್ಲ ‘ಮೀಟ್ ಮಾಡಣ ಇಲ್ಲ ಡೇಟ್ ಮಾಡಣ’ ಎಂದು ತರಹೇವಾರಿ ರೂಪದಲ್ಲಿ ಹೆಜ್ಜೆ ಹಾಕಿದ್ದ ಡಿಂಪಲ್ ಕ್ವೀನ್​ ನಟಿ ರಚಿತಾ ರಾಮ್ ಇಂದು ‘ನೋಡುತ.. ಸುಮ್ಮನೆ..’ ಟಾಪ್​ಗೆ ಹೋಗಿದ್ದಾರೆ. ಅರ್ಥಾತ್, ನಿನ್ನೆ ‘ಏಕ್​ ಲವ್ ಯಾ’ ಸಿನಿಮಾದಲ್ಲಿ ರಚಿತಾ ಹೆಜ್ಜೆ ಹಾಕಿರುವ ‘ಮೀಟ್ ಮಾಡಣ ಎಲ್ಲ ಡೇಟ್ ಮಾಡಣ’ ಹಾಡು ಬಿಡುಗಡೆ ಆಗಿದ್ದರೆ ಇಂದು ಅವರದೇ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾದ ‘ನೋಡುತ ನನ್ನನೇ.. ಕೂತಿರು ಸುಮ್ಮನೇ..’ ಸಾಂಗ್ ರಿಲೀಸ್ ಆಗಿದೆ.

    ಇದನ್ನೂ ಓದಿ: ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?

    ವಿಶೇಷವೆಂದರೆ ರಕ್ಷಿತಾ ಪ್ರೇಮ್ ನಿರ್ಮಾಣ, ಪ್ರೇಮ್​ ನಿರ್ದೇಶನ ಹಾಗೂ ರಾಣಾ ಅಭಿನಯದ ‘ಏಕ್​ ಲವ್​ ಯಾ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ರಚಿತಾ ರಾಮ್​ ನಿನ್ನೆ ಬಿಡುಗಡೆಯಾದ ಐದನೇ ಸಾಂಗ್​ ‘ಮೀಟ್ ಮಾಡಣ ಇಲ್ಲ ಡೇಟ್ ಮಾಡಣ’ದಲ್ಲಿ ವಿಭಿನ್ನ ಗೆಟಪ್​ಗಳಲ್ಲಿ ಕಾಣಸಿಕೊಂಡಿದ್ದಾರೆ.

    ಇದನ್ನೂ ಓದಿ: ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಪ್ರೇಮ್​; ರಚಿತಾ ಕೈಯಲ್ಲಿ ಬಾಟಲಿ, ರಕ್ಷಿತಾ ಸ್ಟೆಪ್ಸು; ಮತ್ತೆ ಕಿಚ್ಚು ಹೊತ್ತಿಸಲಿದ್ದಾರಾ ರಚ್ಚು?

    ಅದರಲ್ಲೂ ‘ಏಕ್​ ಲವ್ ಯಾ’ ಸಿನಿಮಾದ ಮೂರನೇ ಹಾಡು ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ.. ಸಾಂಗ್​ನಲ್ಲೂ ರಚಿತಾ ರಾಮ್​ ಕಾಣಿಸಿಕೊಂಡಿದ್ದು, ಒಂದು ತಿಂಗಳ ಹಿಂದೆ ಬಿಡುಗಡೆ ಆಗಿದ್ದು, ಸುಮಾರು ಒಂದು ವಾರ ಯೂಟ್ಯೂಬ್​ ಮ್ಯೂಸಿಕ್​ನ ಟಾಪ್​ ಟ್ರೆಂಡಿಂಗ್​ನಲ್ಲಿತ್ತು. ಈ ಗೀತೆಗೆ ನಿರ್ದೇಶಕ ಪ್ರೇಮ್​ ಸಾಹಿತ್ಯ, ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಇದ್ದು, ಮಂಗ್ಲಿ ಹಾಗೂ ಕೈಲಾಶ್​ ಖೇರ್ ಹಾಡಿದ್ದರು. ಈ ಗೀತೆ ಈಗಾಗಲೇ 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.

    ಇದನ್ನೂ ಓದಿ: ಮತ್ತೆ ದೇವರ ಮೊರೆ ಹೋದ ‘ಏಕ್​ಲವ್​ಯಾ’; ಬಿಡುಗಡೆ ಆಯ್ತು ‘ಒಂದು ಊರಲಿ.. ಕೊನೇ ಬೀದಿಲಿ…’

    ಇದೀಗ ನಿನ್ನೆ ಬಿಡುಗಡೆ ಆಗಿರುವ ‘ಮೀಟ್ ಮಾಡಣ ಇಲ್ಲ ಡೇಟ್ ಮಾಡಣ’ ಕೂಡ ಯೂಟ್ಯೂಬ್​ ಮ್ಯೂಸಿಕ್​ನ ಟ್ರೆಂಡಿಂಗ್​ನಲ್ಲಿದ್ದು, ಟಾಪ್​-3 ಸ್ಥಾನದಲ್ಲಿದ್ದು, ಒಂದೇ ದಿನದಲ್ಲಿ 15 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

    ಇದನ್ನೂ ಓದಿ: ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಇನ್ನು ಗುರುದೇಶಪಾಂಡೆ ನಿರ್ಮಾಣ, ಎಸ್​. ಶಂಕರ್​ ರಾಜ್ ನಿರ್ದೇಶನದಲ್ಲಿ ನಟ ಅಜೇಯ್​ ರಾವ್​ಗೆ ರಚಿತಾ ಜೋಡಿಯಾಗಿ ಅಭಿನಯಿಸಿರುವ ‘ಲವ್ ಯೂ ರಚ್ಚು’ ಸಿನಿಮಾದ ‘ನೋಡುತ ನನ್ನನೇ.. ಕೂತಿರು ಸುಮ್ಮನೇ..’ ಸಾಂಗ್ ಇಂದು ಬಿಡುಗಡೆ ಆಗಿದೆ. ಇದಕ್ಕೆ ಆರ್. ಪುನೀತ್ ಆರ್ಯ ಸಾಹಿತ್ಯ, ಕದ್ರಿ ಮಣಿಕಾಂತ್ ಸಂಗೀತವಿದ್ದು, ಅನುರಾಧಾ ಭಟ್​ ಗಾಯನವಿದೆ.

    ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

    ಸಾರ್ವಜನಿಕರೇ ಹುಷಾರು.. ಈಗಾಗಲೇ ಜಗತ್ತಿನಲ್ಲಾಗಿದೆ ಕರೊನಾ ನಾಲ್ಕನೇ ಅಲೆ ಶುರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts