More

    ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?

    ಬೆಂಗಳೂರು: ‘ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ?’
    – ಹೀಗಂತ ಒಂದೇ ಗುಕ್ಕಿನಲ್ಲಿ ಓದಿದರೆ ಒಂದು ಕುತೂಹಲಕಾರಿ ಪ್ರಶ್ನೆ ಆಗುವುದೇನೋ ನಿಜ. ಆದರೆ ಇದನ್ನು ಸ್ವಲ್ಪ ಬಿಡಿಸಿ ನೋಡಿದರೆ ಇದರಲ್ಲೇ ನಾಲ್ಕು ಹಾಡುಗಳಿವೆ. ಹೌದು.. ಇವತ್ತು ಸ್ಯಾಂಡಲ್​ವುಡ್​ನಲ್ಲಿ ಒಂದು ರೀತಿಯಲ್ಲಿ ಸಂಗೀತ ಸಂಭ್ರಮ ಎಂದರೂ ತಪ್ಪೇನಲ್ಲ. ಏಕೆಂದರೆ ಇವತ್ತೊಂದೇ ದಿನ ಒಟ್ಟು ನಾಲ್ಕು ಸಿನಿಮಾಗಳ ಹಾಡುಗಳು ಬಿಡುಗಡೆ ಆಗಿವೆ.

    ಲಹರಿ ನಿರ್ಮಾಣ, ವಿಜಯಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್ ಕುಮಾರ್​-ಕಶ್ಮೀರ ಪರ್ದೇಶಿ ಅಭಿನಯಿಸಿರುವ ‘ರೈಡರ್’ ಸಿನಿಮಾದ ‘ಮೆಲ್ಲನೆ..’ ಹಾಡು ಇಂದು ಬಿಡುಗಡೆ ಆಗಿದೆ. ಕವಿರಾಜ್ ಸಾಹಿತ್ಯದ ಈ ಗೀತೆಗೆ ಅರ್ಜುನ್ ಸಂಗೀತ ಸಂಯೋಜಿಸಿದ್ದು, ಸಂಚಿತ್​ ಹೆಗಡೆ ಗಾಯನವಿದೆ.

    ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?
    ರೈಡರ್​

    ರಕ್ಷಾ ವಿಜಯಕುಮಾರ್ ನಿರ್ಮಾಣ, ಭರತ್ ನಾವುಂದ ನಿರ್ದೇಶನದಲ್ಲಿ ಮನುರಂಜನ್ ರವಿಚಂದ್ರನ್​-ಕಯಾದು ಲೋಹರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಮುಗಿಲ್​ ಪೇಟೆ’ ಚಿತ್ರದ ‘ದೂರ ಹೋಗೋ ಮುನ್ನ’ ಗೀತೆ ಕೂಡ ಇಂದೇ ಬಿಡುಗಡೆ ಆಗಿದೆ. ಪ್ರಮೋದ್ ಮರವಂತೆ ಸಾಹಿತ್ಯ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆಯ ಈ ಗೀತೆಯನ್ನು ವಾಸುಕಿ ವೈಭವ್ ಹಾಡಿದ್ದಾರೆ.

    ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?

    ಕೆ.ಕೆ.ಅಶ್ರಫ್ ನಿರ್ಮಾಣ, ಎಚ್​.ಬಿ. ಸಿದ್ದು ನಿರ್ದೇಶದನಲ್ಲಿ ನಿರಂಜನ್ ಸುಧೀಂದ್ರ- ರಾಧ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ನಮ್ಮ​ ಹುಡುಗರು’ ಸಿನಿಮಾದ ‘ಖುಷಿಯಲಿ ನಶೆಯಲಿ’ ಹಾಡು ಇಂದು ಬಿಡುಗಡೆ ಆಗಿದೆ. ಗೌಸ್ ಪೀರ್ ಸಾಹಿತ್ಯ, ಅಭಿಮಾನ್ ರಾಯ್ ಸಂಗೀತ ಈ ಗೀತೆಯನ್ನು ರಾಜೇಶ್ ಕೃಷ್ಣನ್ ಹಾಡಿದ್ದಾರೆ.

    ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?
    ನಮ್ಮ ಹುಡುಗರು

    ರಕ್ಷಿತಾ ನಿರ್ಮಾಣ, ಪ್ರೇಮ್ ನಿರ್ದೇಶನದಲ್ಲಿ ರಾಣಾ, ರಚಿತಾ ರಾಮ್​ ಹಾಗೂ ರೀಷ್ಮಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಏಕ್​​ಲವ್​ಯಾ’ ಸಿನಿಮಾ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ’ ಗೀತೆಯೂ ಇವತ್ತೇ ಬಿಡುಗಡೆ ಆಗಿದೆ. ಪ್ರೇಮ್​ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತದ ಈ ಗೀತೆಯನ್ನು ಮಂಗ್ಲಿ ಮತ್ತು ಕೈಲಾಶ್​​ ಖೇರ್ ಹಾಡಿದ್ದಾರೆ.

    ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts