More

  ಯುವ ನಾಯಕನಿಂದ ಶಾಕ್ ಆದ ಚಿರಂಜೀವಿ.. ಅದೇ ಸಮಯದಲ್ಲಿ ಮೆಗಾಸ್ಟಾರ್ ಗೆ ಮೋಸ ಮಾಡಿದ್ದಾನಾ?

  ಹೈದರಾಬಾದ್​: ತೆಲುಗು ಚಿತ್ರರಂಗದಲ್ಲಿ ನಾಲ್ಕು ದಶಕಗಳಿಂದ ಹವಾ ಸೃಷ್ಟಿಸುತ್ತಿರುವ ಮೆಗಾಸ್ಟಾರ್​ ಚಿರಂಜೀವಿ ‘ವಿಶ್ವಂಭರ’ ಕ್ರೇಜಿ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

  ಇದನ್ನೂ ಓದಿ: ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್.. ಲೋಕಸಭಾ ಚುನಾವಣೆ ಬಳಿಕ ರೀಚಾರ್ಜ್ ಬೆಲೆ ಶೇ.25 ದುಬಾರಿ!

  ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಚಿರಂಜೀವಿ ಜೊತೆಗೆ ತ್ರಿಷಾ ಮತ್ತು ಉಳಿದ ಪಾತ್ರವರ್ಗದವರೊಂದಿಗೆ ವಿವಿಧೆಡೆ ಚಿತ್ರೀಕರಿಸಲಾಗಿದೆ. ಒಟ್ಟಾರೆ ಹೇಳುವುದಾದರೆ ಈ ಸಿನಿಮಾ ಶೇ.30ರಷ್ಟು ಚಿತ್ರೀಕರಣ ಮುಗಿದಿದೆ. ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ‘ವಿಶ್ವಂಭರ’ ಚಿತ್ರ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ತೆರೆಕಾಣಲಿದೆ.

  ಈ ಹಿನ್ನಲೆಯಲ್ಲಿ ಹಲವು ಭಾಷೆಗಳ ನಟರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಟಾಲಿವುಡ್ ನ ಯುವ ನಾಯಕನೊಬ್ಬ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾನೆ. ಆತ ಬೇರಾರು ಅಲ್ಲ, ವಿಶಿಷ್ಟ ನಟ ಎಂದೇ ಗುರುತಿಸಿಕೊಂಡಿರುವ ನವೀನ್ ಚಂದ್ರ.

  ‘ವಿಶ್ವಂಭರ’ದಲ್ಲಿ ಚಿರಂಜೀವಿಗೆ ಮೂವರು ಸಹೋದರಿಯರು ಇರಲಿದ್ದಾರೆ. ಅವರಲ್ಲಿ ಒಬ್ಬಾಕೆಗೆ ಪತಿಯಾಗಿ ಈ ಯುವ ನಾಯಕ ನಟಿಸುತ್ತಿದ್ದಾರೆ. ಅಂದರೆ ಮೆಗಾಸ್ಟಾರ್ ಗೆ ಸೋದರ ಮಾವನಂ ಪಾತ್ರದಲ್ಲಿ ಕಾಣಿಸಲಿದ್ದಾರೆ.

  ಇತ್ತೀಚಿನ ಮಾಹಿತಿಯ ಪ್ರಕಾರ, ಈ ಚಿತ್ರದಲ್ಲಿ ನವೀನ್ ಚಂದ್ರ ಚಿರಂಜೀವಿಗೆ ಮೋಸ ಮಾಡಲಿದ್ದಾರೆ. ಈ ದೃಶ್ಯ ಕಥೆಗೆ ತಿರುವು ನೀಡಲಿದೆ ಎಂದು ತಿಳಿದುಬಂದಿದೆ.

  ಅವರ ಪಾತ್ರ ತುಂಬಾ ಹೈಲೈಟ್ ಆಗಲಿದೆ ಎಂದು ಹೇಳಬಹುದು. ಇದರೊಂದಿಗೆ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಿದೆ. ‘ವಿಶ್ವಂಭರ’ ಸಿನಿಮಾ ಯುವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ಸುರಭಿ ಮತ್ತು ಇಶಾ ಚಾವ್ಲಾ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೀರವಾಣಿ ಸಂಗೀತ ನಿರ್ದೇಶನವಿದೆ. ಬರುವ ಸಂಕ್ರಾಂತಿಯ ಉಡುಗೊರೆಯಾಗಿ ಜ.10 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ.

  ಮಕ್ಕಳಿಗಾಗಿ ಗರ್ಭಧರಿಸುವ ಅಗತ್ಯವಿಲ್ಲ ಎಂದ ಹೀರೋಯಿನ್​ ಉಲ್ಟಾ ಹೊಡೆದಿದ್ದೇಕೆ? ನಾಯಕಿಯ ಪೋಸ್ಟ್ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts