More

  ಮಕ್ಕಳಿಗಾಗಿ ಗರ್ಭಧರಿಸುವ ಅಗತ್ಯವಿಲ್ಲ ಎಂದ ಹೀರೋಯಿನ್​ ಉಲ್ಟಾ ಹೊಡೆದಿದ್ದೇಕೆ? ನಾಯಕಿಯ ಪೋಸ್ಟ್ ವೈರಲ್​

  ಹೈದರಾಬಾದ್​: ಮಕ್ಕಳಿಗಾಗಿ ಗರ್ಭ ಧರಿಸುವ ಅಗತ್ಯವಿಲ್ಲ, ಮಕ್ಕಳು ಪಡೆಯಬೇಕೆನ್ನುವವರು ಎಗ್ ಫ್ರೀಜಿಂಗ್ ತಂತ್ರಜ್ಞಾನದ ಮೊರೆ ಹೋಗುತ್ತಾರೆ ಎಂದು ಹೇಳುತ್ತಾ, ತಾನೇ ಎಗ್​ಪ್ರೀಜಿಂಗ್​ ಮಾಡಿಸಿಕೊಂಡು ತನ್ನ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದ ಹೀರೋಯಿನ್​ ಈಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್​ ಆಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾಳೆ. ನೆಗೆಟಿವ್ ಟ್ರೋಲ್ ಮಾಡಿದವರಿಗೆ ಸಖತ್ ಕೌಂಟರ್ ಕೊಟ್ಟಿದ್ದಾಳೆ.

  ಇದನ್ನೂ ಓದಿ: ಸೌತ್​ಕ್ವೀನ್​ಗೆ ಬಾಗಿಲು ತೆರೆಯದ ಬಾಲಿವುಡ್​! ಆ ಇಬ್ಬರು ನಾಯಕಿಯರಿಗೆ ಭರ್ಜರಿ ಆಫರ್..

  ಟಾಲಿವುಡ್ ಬ್ಯೂಟಿ ಮೆಹ್ರೀನ್ ಫಿರ್ಜಾದಾ ಎಗ್ ಫ್ರೀಜಿಂಗ್ ಮಾಡಿಸಿಕೊಂಡಿದ್ದು ಗೊತ್ತೇ ಇದೆ. ಆಕೆ ತನ್ನ ಗರ್ಭಾಶಯದಿಂದ ಅಂಡಾಣುಗಳನ್ನು ತೆಗೆದು ಸಂಗ್ರಹಿಸಿಟ್ಟುಕೊಂಡಿದ್ದಾಳೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಆಕೆ ಮಾಹಿತಿ ನೀಡಿದ್ದಳು. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಈ ಚೆಲುವೆಯ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಲು ಆರಂಭಿಸಿದರು. ಅದರಲ್ಲೂ, ಮೆಹ್ರೀನ್ ಮದುವೆಯಾಗದೆ ತಾಯಿಯಾಗುತ್ತಾಳೆ ಎಂದು ಹಲವರು ಸಾಮಾಜಿಕ ಮಾಧ್ಯಮ ಮತ್ತು ಇತರೆ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಈ ಸುದ್ದಿಗೆ ನಾಯಕಿ ಪ್ರತಿಕ್ರಿಯಿಸಿದ್ದು, ತನ್ನ ಬಗ್ಗೆ ಇದೇ ರೀತಿ ಸುದ್ದಿ ಬರೆಯುತ್ತಿರುವ ಮಾಧ್ಯಮಗಳಿಗೆ ಸಖತ್ ಎಚ್ಚರಿಕೆ ನೀಡಿದ್ದಾಳೆ.

  ಈ ಸಂಬಂಧ ಮೆಹ್ರೀನ್ ಫಿರ್ಜಾದಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಾಕಿದ್ದಾಳೆ. ಅದರಲ್ಲಿ, ನಿಮ್ಮ ಸ್ವಾರ್ಥಕ್ಕಾಗಿ ಏನನ್ನೂ ಬರೆಯಬಾರದು. ಪತ್ರಕರ್ತರಿಗೆ ಸ್ವಲ್ಪ ಜವಾಬ್ದಾರಿ ಇರಬೇಕು. ಆದಾಗ್ಯೂ, ಮೊಟ್ಟೆಯ ಘನೀಕರಣದ ಬಗ್ಗೆ ಇನ್ನಷ್ಟು ತಿಳಿಯಿರಿ. ಏಕೆಂದರೆ.. ಈಗ ಮಕ್ಕಳು ಬೇಡ ಎಂದುಕೊಳ್ಳುವ ಪಾಲಕರು ಎಲ್ಲ ರೀತಿಯಲ್ಲೂ ತಯಾರಿ ನಡೆಸಿ ಮಕ್ಕಳನ್ನು ಪಡೆಯಲು ಎಗ್ ಫ್ರೀಜಿಂಗ್ ಫಾಲೋ ಮಾಡುತ್ತಾರೆ. ಅದನ್ನು ತಿಳಿಯದೆ ಹಾಗೆ ಬರೆಯುವುದು ಸರಿಯಲ್ಲ. ಇನ್ನು ಮುಂದೆ ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಪೋಸ್ಟ್ ನಲ್ಲಿ ಎಚ್ಚರಿಸಿದ್ದಾರೆ.

  ಸದ್ಯ ಮೆಹ್ರೀನ್ ಪೋಸ್ಟ್ ವೈರಲ್ ಆಗಿದೆ. ಜೊತೆಗೆ ನಾಯಕಿ ಮೆಹ್ರೀನ್ ತಮ್ಮ ಮೇಲೆ ಬರುತ್ತಿರುವ ನೆಗೆಟಿವ್ ಟ್ರೋಲ್‌ಗಳಿಗೆ ಕಮೆಂಟ್‌ಗಳ ರೂಪದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

  ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್.. ಲೋಕಸಭಾ ಚುನಾವಣೆ ಬಳಿಕ ರೀಚಾರ್ಜ್ ಬೆಲೆ ಶೇ.25 ದುಬಾರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts