ಸಿನಿಮಾ

ಘಟಾನುಘಟಿ ನಾಯಕರ ನಿವೃತ್ತಿ: ಬಡವಾಯ್ತು ರಾಜಕೀಯ ಶಕ್ತಿಕೇಂದ್ರವಾಗಿದ್ದ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ನ ಘಟಾನುಘಟಿ ನಾಯಕರೇ ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದು, ಇಡೀ ರಾಜ್ಯದ ರಾಜಕೀಯ ಶಕ್ತಿಕೇಂದ್ರಗಳಲ್ಲಿ ಒಂದಾಗಿದ್ದ ಶಿವಮೊಗ್ಗ ಇದೀಗ ಅನಾಥವಾಗಿದೆ.

ಮಾಸ್ ಲೀಡರ್​ಗಳ ಕೊರತೆ

ನಾಲ್ಕು ಜನ ಸಿಎಂ ಕೊಟ್ಟ ಜಿಲ್ಲೆಯಲ್ಲಿ ಇದೀಗ ಮಾಸ್ ಲೀಡರ್​ಗಳ ಕೊರತೆ ಇದೆ. ಶಿವಮೊಗ್ಗ ಜಿಲ್ಲೆಯಿಂದಲೇ ಕಡಿದಾಳ್ ಮಂಜಪ್ಪ, ಜೆ.ಎಚ್.ಪಟೇಲ್, ಬಂಗಾರಪ್ಪ ಹಾಗೂ ಬಿ.ಎಸ್​. ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಹೋರಾಟಗಳ ಮೂಲಕವೇ ಶಾಂತವೇರಿ ಗೋಪಾಲಗೌಡ ಹಾಗೂ ಕಾಗೋಡು ತಿಮ್ಮಪ್ಪ ಅವರು ಜಿಲ್ಲೆಗೆ ಹೆಸರು ತಂದಿದ್ದರು. ಬಂಗಾರಪ್ಪ ಅವರು ಸೋಲಿಲ್ಲದ ಸರದಾರನಾಗಿ ರಾಜ್ಯ ರಾಜಕೀಯ ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದರು. ಹೋರಾಟದಿಂದಲೇ ರಾಜಕೀಯದ ಉತ್ತುಂಗಕ್ಕೆ ಏರಿ, ಪ್ರಶ್ನಾತೀತ ನಾಯಕರಾಗಿ ಬೆಳೆದಿರುವ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆರೆಯಲು ಯಡಿಯೂರಪ್ಪ ಅವರು ಕಾರಣರಾದರು.

ಇದನ್ನೂ ಓದಿ: ಬರೆಯುವ ಮುನ್ನ ಸಂಪೂರ್ಣ ತಿಳಿದುಕೊಳ್ಳಿ: ಬಾಲಯ್ಯ ಸಿನಿಮಾ ಬಗ್ಗೆ ವದಂತಿ, ತಮನ್ನಾ ಬೇಸರ

ಜಿಲ್ಲೆಯ ರಾಜಕೀಯ ಕತ್ತಲೆಗೆ ಸರಿದಿದೆ

ಇದೀಗ ದಶಕಗಳ ರಾಜಕೀಯ ಬದುಕಿಗೆ ಯಡಿಯೂರಪ್ಪ, ಈಶ್ವರಪ್ಪ ಹಾಗೂ ಕಾಗೋಡು ತಿಮ್ಮಪ್ಪ ನಿವೃತ್ತಿ ಹೇಳಿದ್ದಾರೆ. ಈ ಬಾರಿಯ ಚುನಾವಣಾ ಕಣದಿಂದಲೂ ಎಲ್ಲ ನಾಯಕರು ಹಿಂದೆ ಸರಿದರು. ವಿಧಾನಸೌಧದಲ್ಲಿ ಇರಬೇಕಾದ ನಾಯಕರ ನಿವೃತ್ತಿಯಿಂದ ಜಿಲ್ಲೆಯ ರಾಜಕೀಯ ಕತ್ತಲೆಗೆ ಸರಿದಿದೆ ಎಂದು ಭಾಸವಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಮಾಸ್ ಲೀಡರ್​ಗಳ ಕೊರತೆ ಕಾಡುತ್ತಿದೆ.

ಗುರುತಿಸಿಕೊಂಡಿಲ್ಲ

ಸರ್ಕಾರ ರಚಿಸುತ್ತಿದ್ದವರ ಜಿಲ್ಲೆಗೆ ಕ್ಯಾಬಿನೆಸ್​ನಲ್ಲೂ ಸ್ಥಾನ ದೊರಕುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಜಿಲ್ಲೆಯ ನಾಯಕರು ವಿಫಲವಾಗಿದ್ದಾರೆ. ಮೊದಲ ಹಂತದ ನಾಯಕರಾಗಿ ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್ ಹಾಗೂ ಬೇಳೂರು ಗೋಪಾಲಕೃಷ್ಣ ಗುರುತಿಸಿಕೊಂಡಿಲ್ಲ.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಪಟ್ಟು, ಸಚಿವ ಸಂಪುಟಕ್ಕೆ ಆಯ್ಕೆ ಕಗ್ಗಂಟು: ತಡರಾತ್ರಿಯಾದರೂ ಮೂಡದ ಒಮ್ಮತ

ಮಾಸ್ ಲೀಡರ್​ಗಳ ನಿರೀಕ್ಷೆಯಲ್ಲಿದ್ದಾರೆ

ಬಿಜೆಪಿಯಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಜನರಿಗೆ ಪರಿಚಿತರಾಗಿರುವ ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ ಹಾಗೂ ಕುಮಾರ್ ಬಂಗಾರಪ್ಪರಂತ ನಾಯಕರು ಜನರ ನಡುವೆ ಗುರುತಿಸಿಕೊಂಡು ತಮ್ಮ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಿದೆ. ಶಿವಮೊಗ್ಗ ಜನತೆ ಜನಮಾನಸಕ್ಕೆ ಹತ್ತಿರವಾಗುವ ಮಾಸ್ ಲೀಡರ್​ಗಳ ನಿರೀಕ್ಷೆಯಲ್ಲಿದ್ದಾರೆ. ಆ ನಿರೀಕ್ಷೆ ಎಷ್ಟರಮಟ್ಟಿಗೆ ಫಲಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

ಹಿಂದಿನ ಬಿಜೆಪಿ ಸರ್ಕಾರದ ಬಿಬಿಎಂಪಿ ವ್ಯಾಪ್ತಿಯ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್!

ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಬರ್ಬರ ಹತ್ಯೆ: ಕಾಡಿನಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆ

ಕಾಂಗ್ರೆಸ್​ನವರು ಬೈಯೋದು ಬೇಡ, ಬಿಜೆಪಿಯವರು ಬೊಬ್ಬೆ ಹೊಡೆಯೋದು ಬೇಡ: ಸಿಎಂ ಸಿದ್ದುಗೆ ಪ್ರತಾಪ್ ಸಿಂಹ ಸಲಹೆ​

Latest Posts

ಲೈಫ್‌ಸ್ಟೈಲ್