More

  ಬರೆಯುವ ಮುನ್ನ ಸಂಪೂರ್ಣ ತಿಳಿದುಕೊಳ್ಳಿ: ಬಾಲಯ್ಯ ಸಿನಿಮಾ ಬಗ್ಗೆ ವದಂತಿ, ತಮನ್ನಾ ಬೇಸರ

  ಹೈದರಾಬಾದ್​: ಹೀರೋ ಮತ್ತು ಹೀರೋಯಿಗಳ ಬಗ್ಗೆ ವದಂತಿಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮಾನ್ಯ. ಕೆಲ ನಟ-ನಟಿಯರ ವದಂತಿಗಳಿಗೆ ಕಿವಿಗೊಡುವುದಿಲ್ಲ. ಅವರಲ್ಲಿ ನಟಿ ತಮನ್ನಾ ಕೂಡ ಒಬ್ಬರು. ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ ಸಿನಿಮಾ ರಂಗಕ್ಕೆ ಕಾಲಿಟ್ಟು ಸುಮಾರು 8 ವರ್ಷಗಳೇ ಕಳೆದಿದ್ದು, ಇಂದಿಗೂ ಸ್ಟಾರ್​ ನಟಿಯಲ್ಲಿ ಒಬ್ಬರಾಗಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ಯಶಸ್ಸು ಸುಲಭವಾಗಿ ಬಂದಿಲ್ಲ. ಅದಕ್ಕಾಗಿ ತಮನ್ನಾ ಸಾಕಷ್ಟು ಶ್ರಮಪಟ್ಟಿದ್ದಾರೆ.

  ಇದನ್ನೂ ಓದಿ: ಕಾಂಗ್ರೆಸ್​ನವರು ಬೈಯೋದು ಬೇಡ, ಬಿಜೆಪಿಯವರು ಬೊಬ್ಬೆ ಹೊಡೆಯೋದು ಬೇಡ: ಸಿಎಂ ಸಿದ್ದುಗೆ ಪ್ರತಾಪ್ ಸಿಂಹ ಸಲಹೆ​

  ಬರೆಯುವ ಮುನ್ನ ಸಂಪೂರ್ಣ ತಿಳಿದುಕೊಳ್ಳಿ: ಬಾಲಯ್ಯ ಸಿನಿಮಾ ಬಗ್ಗೆ ವದಂತಿ, ತಮನ್ನಾ ಬೇಸರ

  ಭಾರೀ ಮೊತ್ತದ ಸಂಭಾವನೆ

  ಇತ್ತೀಚೆಗೆ ತಮನ್ನಾ ಅವರ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡತೊಡಗಿವೆ. ನಟ ವಿಜಯ್​ ವರ್ಮಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿಯು ಇದೆ. ಆದರೆ, ಇದನ್ನೆಲ್ಲ ತಮನ್ನಾ ತಳ್ಳಿಹಾಕಿದ್ದಾರೆ. ಇದೀಗ ಮತ್ತೊಂದು ವದಂತಿ ಟಾಲಿವುಡ್​ ಗಲ್ಲಿಯಲ್ಲಿ ಸುಳಿದಾಡುತ್ತದೆ. ಅದೇನೆಂದರೆ, ಅನಿಲ್​ ರಾವಿಪುಡಿ ನಿರ್ದೇಶನದ ಸೂಪರ್​ಸ್ಟಾರ್​ ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಸೊಂಟ ಬಳಕಿಸಲು ತಮನ್ನಾ ಭಾರೀ ಮೊತ್ತದ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಇದರಿಂದ ಅವರ ವಿರುದ್ಧ ಚಿತ್ರತಂಡ ಅಸಮಾಧಾನಗೊಂಡಿದೆ ಎಂದು ಹೇಳಲಾಗುತ್ತಿದೆ.

  ಇದರಿಂದ ನನಗೂ ನೋವಾಗಿದೆ

  ಆದರೆ, ಈ ವದಂತಿಗೆ ತಮನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ನನಗೆ ತುಂಬಾ ಇಷ್ಟ. ನಂದಮೂರಿ ಬಾಲಕೃಷ್ಣ ಅವರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಆದರೆ, ನನ್ನ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸುದ್ದಿ ಬರೆಯುತ್ತಿದ್ದಾರೆ. ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ನನ್ನ ಬಗ್ಗೆ ಮತ್ತು ಹಾಡಿನ ಬಗ್ಗೆ ಬರೆಯುತ್ತಿದ್ದಾರೆ. ಇದರಿಂದ ನನಗೂ ನೋವಾಗಿದೆ. ಬರೆಯುವ ಮುನ್ನ ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಮನ್ನಾ ನೋವು ತೋಡಿಕೊಂಡಿದ್ದಾರೆ.

  ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋಗಳನ್ನು ಹರಿಬಿಟ್ಟವರಿಗೆ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ತಿರುಗೇಟು!

  ಬರೆಯುವ ಮುನ್ನ ಸಂಪೂರ್ಣ ತಿಳಿದುಕೊಳ್ಳಿ: ಬಾಲಯ್ಯ ಸಿನಿಮಾ ಬಗ್ಗೆ ವದಂತಿ, ತಮನ್ನಾ ಬೇಸರ

  ಮುಂದಿನ ಸಿನಿಮಾಗಳು ಯಾವುವು?

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ತಮನ್ನಾ ಅವರು ಸದ್ಯ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದರೊಂದಿಗೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

  ಉದ್ಯೋಗ ಹುಡುಕುವಾಗ ಹುಷಾರು..

  ಖಾಸಗಿ ಫೋಟೋ, ವಿಡಿಯೋಗಳನ್ನು ಹರಿಬಿಟ್ಟವರಿಗೆ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ತಿರುಗೇಟು!

  ಹಿಂದಿನ ಬಿಜೆಪಿ ಸರ್ಕಾರದ ಬಿಬಿಎಂಪಿ ವ್ಯಾಪ್ತಿಯ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts