ಸಿನಿಮಾ

ಒಳಉಡುಪಿನಲ್ಲಿ ನೋಡುವ ಬಯಕೆಯಂತೆ! ಬಾಲಿವುಡ್​ ಚಿತ್ರರಂಗದ ಮತ್ತೊಂದು ಕರಾಳ ಕತೆ ಬಿಚ್ಚಿಟ್ಟ ಪಿಗ್ಗಿ

ನವದೆಹಲಿ: ಬಾಲಿವುಡ್​ ಚಿತ್ರರಂಗದದಲ್ಲಿ ಕಾಸ್ಟಿಂಗ್​ ಕೌಚ್​ ಕುರಿತ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅನೇಕ ನಟಿಯರು ತಮಗಾದ ಕರಾಳ ಅನುಭವವನ್ನು ಮಾಧ್ಯಮಗಳ ಮುಂದೆಯೇ ಬಯಲು ಮಾಡಿದ್ದಾರೆ. ಬಾಲಿವುಡ್​ ಸಿನಿಮಾ ಇಂಡಸ್ಟ್ರಿ ಒಂದು ಕರಾಳ ಜಗತ್ತು ಎನ್ನುವುದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ನೀಡಿರುವ ಹೇಳಿಕೆ ಮತ್ತೊಂದು ಸಾಕ್ಷಿಯಾಗಿದೆ.

ಒಳಉಡುಪಿನಲ್ಲಿ ನೋಡುವ ಬಯಕೆ

ದಿ ಜೊಯಿ ರಿಪೋರ್ಟ್​ ಮಾಧ್ಯಮದ ಸಂದರ್ಶನದಲ್ಲಿ ಬಾಲಿವುಡ್​ ಕರಾಳತೆಯನ್ನು ಪ್ರಿಯಾಂಕಾ ಬಿಚ್ಚಿಟ್ಟಿದ್ದಾರೆ. ಹಿಂದಿ ಸಿನಿಮಾದ ನಿರ್ದೇಶಕರೊಬ್ಬರು ನಿರ್ದಿಷ್ಟ ದೃಶ್ಯವೊಂದಕ್ಕೆ ಪ್ರಿಯಾಂಕಾ ಅವರನ್ನು ಬರೀ ಒಳಉಡುಪಿನಲ್ಲಿ ನೋಡಲು ಬಯಸಿದ್ದರಂತೆ. ಈ ಅನುಭವವನ್ನು “ಅಮಾನವೀಯತೆ” ಎಂದು ವಿವರಿಸಿರುವ ಪ್ರಿಯಾಂಕಾ, ಚಿತ್ರತಂಡದ ಜತೆ 2 ದಿನಗಳ ಕಾಲ ಕೆಲಸ ಮಾಡಿದ ನಂತರ ಪ್ರೊಡಕ್ಷನ್ ಹೌಸ್‌ಗೆ ಸಂಭಾವನೆ ಹಿಂದಿರುಗಿಸಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಒಮ್ಮೆ ಹಿಂದಿ ಸಿನಿಮಾರಂಗವನ್ನು ಬಿಡಲು ಇದೇ ಕಾರಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ರೋಲ್​ ನಂಬರ್, ಒಂದೇ ರ‍್ಯಾಂಕ್, ಮೊದಲ ಹೆಸರೂ ಕೂಡ ಒಂದೇ! ಏನಿದು ಯುಪಿಎಸ್​ಸಿಯ ನಿಗೂಢತೆ?

ಆ ನಿರ್ದೇಶಕ ಯಾರು ಎಂಬುದನ್ನು ಪ್ರಿಯಾಂಕಾ ಹೇಳಿಲ್ಲ. ಆದರೆ, ಈ ಘಟನೆ 2002 ಅಥವಾ 2003ರಲ್ಲಿ ನಡೆದಿದ್ದು, ಇದೇ ಸಮಯದಲ್ಲಿ ನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೆ ಎಂದಿದ್ದಾರೆ.

ಮೋಹದ ಬಲೆಗೆ ಬೀಳಿಸಲು ಬಟ್ಟೆ ಬಿಚ್ಚಬೇಕು

ನಾನು ಆ ಸಿನಿಮಾದಲ್ಲಿ ಅಂಡರ್​ಕವರ್​ ಏಜೆಂಟ್​ ಆಗಿರುತ್ತೇನೆ ನಾನು ಓರ್ವ ವ್ಯಕ್ತಿಯನ್ನು ಮೋಹದ ಬಲೆಗೆ ಬೀಳಿಸಬೇಕಾಗಿರುತ್ತದೆ. ಅಂಡರ್​ಕವರ್​ ಆಗಿದ್ದ ಹುಡುಗಿಯರು ನಿಜವಾಗಿಯೂ ಇದನ್ನು ಮಾಡಲೇಬೇಕು. ಆದರೆ, ಆ ವ್ಯಕ್ತಿಯನ್ನು ಮೋಹದ ಬಲೆಗೆ ಬೀಳಿಸಲು ಬಟ್ಟೆ ಬಿಚ್ಚಬೇಕು ಎಂದಿದ್ದರು. ನಾನು ಮೇಲೆ ಯಾವುದಾದರು ತೆಳು ಬಟ್ಟೆ ಧರಿಸುತ್ತೇನೆ ಎಂದಿದ್ದಾರೆ. ಅದಕ್ಕೆ ನಿರ್ದೇಶಕರು ನೋ ಎಂದರು ಮತ್ತು ಒಳಉಡುಪಿನಲ್ಲಿ ನೋಡಲು ಬಯಸುತ್ತೇನೆ. ಹೀಗೆ ಮಾಡದಿದ್ದರೆ ಈ ಸಿನಿಮಾ ನೋಡಲು ಯಾರಾದರೂ ಏಕೆ ಬರುತ್ತಾರೆ? ಎಂದರು ಎಂದು ಪ್ರಿಯಾಂಕಾ ಹಳೆಯ ಘಟನೆಯನ್ನು ಮೆಲಕು ಹಾಕಿದ್ದಾರೆ.

ಅವರಿಗೆ ನನ್ನ ಕಲೆ ಮುಖ್ಯವಲ್ಲ

ಈ ಮಾತುಗಳನ್ನು ಸ್ಥಳದಲ್ಲಿ ಹಾಜರಿದ್ದ ತಮ್ಮ ಸ್ಟೈಲಿಸ್ಟ್‌ಗೆ ನಿರ್ದೇಶಕರು ಹೇಳಿದರು. ಅವರು ನೇರವಾಗಿ ನನಗೆ ಹೇಳಲಿಲ್ಲ. ನನ್ನ ಮುಂದೆಯೇ ಇದ್ದ ಅವರ ಸ್ಟೈಲಿಸ್ಟ್‌ಗೆ ಹೇಳುವ ಮೂಲಕ ಪರೋಕ್ಷವಾಗಿ ನನಗೆ ಹೇಳಿದರು. ನಿಜಕ್ಕೂ ಇದೊಂದು ಅಮಾನವೀಯ ಕ್ಷಣವಾಗಿದೆ. ಅವರಿಗೆ ನನ್ನ ಕಲೆ ಮುಖ್ಯವಲ್ಲ ಮತ್ತು ನಾನು ಏನು ಕೊಡುಗೆ ನೀಡುತ್ತೇನೆ ಎಂಬುದು ಮುಖ್ಯವಾಗಿರಲಿಲ್ಲ. ಕೇವಲ ಮೈಮಾಟ ಪ್ರದರ್ಶನ ಮುಖ್ಯವಾಗಿತ್ತು ಎಂದು ಅಸಮಾಧಾನ ಹೊರಹಾಕಿದರು.

ಸಂಭಾವನೆ ಹಿಂದಿರುಗಿಸಿದೆ

ನನ್ನ ತಂದೆಯ ಸಲಹೆಯ ಮೇರೆಗೆ ಎರಡು ದಿನಗಳ ನಂತರ ಆ ಸಿನಿಮಾವನ್ನು ತೊರೆದೆ ಮತ್ತು ನನಗಾಗಿ ಪ್ರೊಡಕ್ಷನ್ ಹೌಸ್ ಮಾಡಿದ್ದ ಖರ್ಚು ಹಾಗೂ ಸಂಭಾವನೆಯನ್ನು ಹಿಂದಿರುಗಿಸಿದೆ. ನಾನು ಪ್ರತಿದಿನ ಅವನ ಮುಖ ನೋಡಲು ಇಷ್ಟವಾಗಲಿಲ್ಲ ಎಂದು ನಿರ್ದೇಶಕನ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದರು.

ಇದನ್ನೂ ಓದಿ: ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!

ಬಾಲಿವುಡ್​ ರಾಜಕೀಯದಿಂದ ಬೇಸತ್ತಿದ್ದೇನೆ

ಕಳೆದ ಮಾರ್ಚ್​ನಲ್ಲಿ ಡಾಕ್ಸ್​ ಸೆಫರ್ಡ್​ನ ಪಾಡ್​ಕಾಸ್ಟ್​ ಸಂದರ್ಶನದಲ್ಲಿ ಬಾಲಿವುಡ್​ ಅನ್ನು ತೊರೆದಿದ್ದೇಕೆ ಎಂಬ ಪ್ರಶ್ನೆಗೆ ಪ್ರಿಯಾಂಕಾ ನೇರವಾಗಿ ಉತ್ತರ ನೀಡಿದರು. ನನ್ನನ್ನು ಬಾಲಿವುಡ್​ ಇಂಡಸ್ಟ್ರಿಯ ಒಂದು ಮೂಲೆಗೆ ತಳ್ಳಿದರು. ನನ್ನನ್ನು ಯಾವುದೇ ಪಾತ್ರಕ್ಕೆ ಆಯ್ಕೆ ಮಾಡಲಿಲ್ಲ. ನನ್ನ ಜತೆ ಕೆಲವರಿಗೆ ಸಮಸ್ಯೆಯಿತ್ತು. ಸಿನಿಮಾರಂಗದಲ್ಲಿ ಕುತಂತ್ರ ಆಟವಾಡುವುದರಲ್ಲಿ ನಾನು ನಿಪುಣೆಯಲ್ಲ. ಬಾಲಿವುಡ್​ ರಾಜಕೀಯದಿಂದ ಬೇಸತ್ತಿದ್ದೇನೆ. ಹೀಗಾಗಿ ನನಗೆ ವಿಶ್ರಾಂತಿ ಬೇಕು ಎಂದೆನಿಸಿತು. ಆದ್ದರಿಂದ ಬಾಲಿವುಡ್​ ತೊರೆದೆ ಎಂದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಪ್ರಿಯಾಂಕಾ ಅವರು ಕೊನೆಯದಾಗಿ ಸಿಟಾಡೆಲ್ ಮತ್ತು ಲವ್ ಎಗೇನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾ ಮೂಲಕ ಬಾಲಿವುಡ್‌ನಲ್ಲಿ ಪುನರಾಗಮನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ಏಕತಾ ಬಂದರು ಏತಕೆ?

ಸಂಪಾದಕೀಯ | ಅರ್ಹರಿಗಷ್ಟೆ ಸಿಗಲಿ; ಬಿಪಿಎಲ್ ಕಾರ್ಡಿಗೆ ಹೆಚ್ಚಿದ ಬೇಡಿಕೆ

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 28 ಗಂಟೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

Latest Posts

ಲೈಫ್‌ಸ್ಟೈಲ್