More

    ಒಂದೇ ರೋಲ್​ ನಂಬರ್, ಒಂದೇ ರ‍್ಯಾಂಕ್, ಮೊದಲ ಹೆಸರೂ ಕೂಡ ಒಂದೇ! ಏನಿದು ಯುಪಿಎಸ್​ಸಿಯ ನಿಗೂಢತೆ?

    ಭೋಪಾಲ್: ಇತ್ತೀಚೆಗಷ್ಟೇ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ)ದ ಫಲಿತಾಂಶ ಹೊರಬಿದ್ದಿದ್ದು, ಮಧ್ಯಪ್ರದೇಶ ವಿಚಿತ್ರ ಪ್ರಕರಣವೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಮೊದಲ ಹೆಸರು ಮತ್ತು ರೋಲ್​ ನಂಬರ್​ ಒಂದೇ ರೀತಿ ಇರುವ ಇಬ್ಬರು ಯುವತಿಯರು ಒಂದೇ ರ‍್ಯಾಂಕ್ ಪಡೆದಿದ್ದು, ಭಾರೀ ಗೊಂದಲ ಸೃಷ್ಟಿಯಾಗಿದೆ.

    23 ವರ್ಷದ ಆಯಶಾ ಫಾತಿಮಾ ದೇವಾಸ್​ ಜಿಲ್ಲೆಯವಳು ಮತ್ತು 26 ವರ್ಷದ ಆಯಶಾ ಮಕ್ರಾನಿ ಅಲಿರಾಜ್​ಪುರ್​ ಜಿಲ್ಲೆಯವಳು. ಇಬ್ಬರು ಕೂಡ ಯುಪಿಎಸ್​ಸಿ ಪರೀಕ್ಷೆಯಲ್ಲಿ 184ನೇ ರ‍್ಯಾಂಕ್ ಪಡೆದಿದ್ದಾರೆ. ಇಬ್ಬರು ಸುಮಾರು 200 ಕಿ.ಮೀ ಅಂತರದಲ್ಲಿ ವಾಸವಿದ್ದಾರೆ. ಇಬ್ಬರು ಕೂಡ ತಮ್ಮ ತಮ್ಮ ಹಾಲ್​ಟಿಕೆಟ್​ ತೋರಿಸುವ ಮೂಲಕ 184ನೇ ರ‍್ಯಾಂಕ್ ನನ್ನದೇ ಎಂಬ ವಾದಕ್ಕೆ ಇಳಿದಿದ್ದಾರೆ. ಅಲ್ಲದೆ, ಸ್ಥಳೀಯ ಪೊಲೀಸ್​ ಠಾಣೆ ಮತ್ತು ಯುಪಿಎಸ್​ಸಿಗೂ ದೂರು ನೀಡಿ, ಇದರಲ್ಲಿ ಏನೋ ವಂಚನೆ ನಡೆದಿದೆ ಎಂದು ಆರೋಪಿಸಿ ಸ್ಪಷ್ಟನೆ ನೀಡುವಂತೆ ಇಬ್ಬರು ಕೋರಿದ್ದಾರೆ.

    ಇದನ್ನೂ ಓದಿ: ರಿಯಲ್​ ಎಸ್ಟೇಟ್​ ಉದ್ಯಮಿ ಸೇರಿ ಡಬಲ್​ ಮರ್ಡರ್​: ಬೆಚ್ಚಿಬಿದ್ದ ಧಾರವಾಡದ ಜನತೆ

    ನ್ಯಾಯ ಸಿಗಬೇಕು

    ನಾನು ಎರಡು ವರ್ಷಗಳ ಕಾಲ ಕಷ್ಟಪಟ್ಟು ಓದಿದ್ದೇನೆ ಮತ್ತು ನನ್ನ ಹಕ್ಕನ್ನು ಬೇರೆಯವರು ತೆಗೆದುಕೊಳ್ಳಲು ನಾನು ಬಿಡುವುದಿಲ್ಲ. ನನಗೆ ಯುಪಿಎಸ್​ಸಿ ಮತ್ತು ಸರ್ಕಾರದಿಂದ ನ್ಯಾಯ ಸಿಗಬೇಕು ಎಂದು ಆಯಶಾ ಮಕ್ರಾನಿ ಒತ್ತಾಯ ಮಾಡಿದ್ದಾರೆ.

    ನನಗೆ ಆಘಾತವಾಯಿತು

    ಆಯಶಾ ಫಾತಿಮಾ ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬೇರೆಯವರು ನನ್ನ ರೋಲ್ ನಂಬರ್​ ಹೊಂದಿದ್ದಾರೆಂದು ತಿಳಿದು ನನಗೆ ಆಘಾತವಾಯಿತು ಎಂದು ಹೇಳಿದದ್ದಾರೆ. ವಂಚನೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ಯಾವುದೇ ಜ್ಞಾಪನಾ ಪತ್ರ ಅಥವಾ ಯಾವುದಾದರೂ ದಾಖಲೆ ನೀಡಲು ಕೇಳಿದರೆ, ಮುಂದೆ ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.

    ವ್ಯತ್ಯಾಸಗಳು ಕಂಡುಬರುತ್ತವೆ

    ಇಬ್ಬರ ಪ್ರವೇಶ ಕಾರ್ಡ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೆಚ್ಚಿನ ವ್ಯತ್ಯಾಸಗಳು ಕಂಡುಬರುತ್ತವೆ. ಆಯಶಾ ಮಕ್ರಾನಿ ಅವರ ಕಾರ್ಡ್ ವ್ಯಕ್ತಿತ್ವ ಪರೀಕ್ಷೆಯ ದಿನಾಂಕವನ್ನು ಉಲ್ಲೇಖಿಸುತ್ತದೆ. ಇದು 2023ರ ಏಪ್ರಿಲ್ 25ರ ಗುರುವಾರ ನಡೆಯಲಿದೆ ಎಂದು ಪತ್ರದಲ್ಲಿದೆ. ಆಯಶಾ ಫಾತಿಮಾ ಅವರ ಕಾರ್ಡ್ ಕೂಡ ಅದೇ ದಿನಾಂಕವನ್ನು ತೋರಿಸುತ್ತದೆ. ಆದರೆ ಏಪ್ರಿಲ್​ 25 ಗುರುವಾರ ಬದಲಾಗಿ ಮಂಗಳವಾರ ತೋರಿಸುತ್ತಿದೆ. ಕ್ಯಾಲೆಂಡರ್​ ಪ್ರಕಾರ ಏಪ್ರಿಲ್​ 25 ಮಂಗಳವಾರ ಆಗಿದೆ.

    ಇದನ್ನೂ ಓದಿ: ಶನಿವಾರ ಬೆಳಗ್ಗೆ ನೂತನ 24 ಸಚಿವರ ಪದಗ್ರಹಣ; ಸಂಭವನೀಯ ಸಚಿವರ ಪಟ್ಟಿ ಹೀಗಿದೆ…

    ಫಾತಿಮಾ ಸರಿಯಾದ ಅಭ್ಯರ್ಥಿ

    ಫಾತಿಮಾ ಅವರ ಕಾರ್ಡ್ QR ಕೋಡ್‌ನೊಂದಿಗೆ ಯುಪಿಎಸ್​ಸಿಯ ವಾಟರ್‌ಮಾರ್ಕ್ ಹೊಂದಿದೆ. ಆದರೆ, ಮಕ್ರಾನಿ ಅವರ ಕಾರ್ಡ್ ಯಾವುದೇ QR ಕೋಡ್ ಇಲ್ಲದೆ ಸರಳ ಕಾಗದದ ಮುದ್ರಣವನ್ನು ಹೋಲುತ್ತದೆ. ಈ ವಿಚಿತ್ರ ಘಟನೆ ಬಗ್ಗೆ ಯುಪಿಎಸ್​ಸಿ ಈಗಾಗಲೇ ಅಗತ್ಯ ತಿದ್ದುಪಡಿಗಳನ್ನು ಮಾಡಿದ್ದು, ಫಾತಿಮಾ ಸರಿಯಾದ ಅಭ್ಯರ್ಥಿ ಎಂದು ಹೇಳಿದೆ. ಈ ದೋಷ ಹೇಗೆ ಸಂಭವಿಸಿತು ಎಂದು ತನಿಖೆ ನಡೆಸುವುದಾಗಿಯೂ ಯುಪಿಎಸ್​ಸಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ರಿಯಲ್​ ಎಸ್ಟೇಟ್​ ಉದ್ಯಮಿ ಸೇರಿ ಡಬಲ್​ ಮರ್ಡರ್​: ಬೆಚ್ಚಿಬಿದ್ದ ಧಾರವಾಡದ ಜನತೆ

    ಶನಿವಾರ ಬೆಳಗ್ಗೆ ನೂತನ 24 ಸಚಿವರ ಪದಗ್ರಹಣ; ಸಂಭವನೀಯ ಸಚಿವರ ಪಟ್ಟಿ ಹೀಗಿದೆ…

    ಶನಿವಾರ ಬೆಳಗ್ಗೆ ನೂತನ 24 ಸಚಿವರ ಪದಗ್ರಹಣ; ಸಂಭವನೀಯ ಸಚಿವರ ಪಟ್ಟಿ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts