ಸಿನಿಮಾ

ರಿಯಲ್​ ಎಸ್ಟೇಟ್​ ಉದ್ಯಮಿ ಸೇರಿ ಡಬಲ್​ ಮರ್ಡರ್​: ಬೆಚ್ಚಿಬಿದ್ದ ಧಾರವಾಡದ ಜನತೆ

ಧಾರವಾಡ: ರಿಯಲ್​ ಎಸ್ಟೇಟ್​ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆಯಾಗಿರುವ ಆಘಾತಕಾರಿ ಘಟನೆ ಧಾರವಾಡ ನಗರದ ಕಮಲಾಪುರ ಹೊರವಲಯದಲ್ಲಿ ನಡೆದಿದ್ದು, ಭೀಕರ ಹತ್ಯೆಯಿಂದಾಗಿ ವಿದ್ಯಾಕಾಶಿ ಜನತೆ ಭಯಭೀತರಾಗಿದ್ದಾರೆ.

ಮಹಮ್ಮದ್​ ಕುಡಚಿ, ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ಆತನ ಮನೆ ಎದುರೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಹಮ್ಮದ್​ ಕುಡಚಿ ಮನೆಯ ಮುಂದೆ ಕುಳಿತಿದ್ದರು ಈ ವೇಳೆ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ದಾಳಿ ಮಾಡಿ, ಕುಡಚಿಯನ್ನು ಬರ್ಬರವಾಗಿ ಹತ್ಯೆಗೈದಿದೆ.

ಕುಡಚಿ ನಿವಾಸದ ಅನತಿ ದೂರದಲ್ಲೇ ಮತ್ತೊಂದು ಶವ ಪತ್ತೆಯಾಗಿದೆ. ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆತನ ಹೆಸರು ಇನ್ನೂ ತಿಳಿದುಬಂದಿಲ್ಲ. ಆತನೂ ಸಹ ಕುಡಚಿ ಮನೆಯಿಂದಲೇ ಓಡಿ ಹೋಗಿ ಬೇರೆ ಜಾಗದಲ್ಲಿ ಪ್ರಾಣ ಬಿಟ್ಟಿದ್ದಾರೆ. ದಾರಿಯುದ್ದಕ್ಕೂ ರಕ್ತ ಚೆಲ್ಲಿದೆ.

ಇದನ್ನೂ ಓದಿ: ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!

ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣಗುಪ್ತ ಭೇಟಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲ ಆಯಾಮದಲ್ಲೂ ತನಿಖೆ ಆಗುತ್ತಿದೆ

ಈ ಬಗ್ಗೆ ರಮಣಗುಪ್ತ ಪ್ರತಿಕ್ರಿಯೆ ನೀಡಿದ್ದು, ಕಮಲಾಪುರ ಬಡಾವಣೆಯಲ್ಲಿ ಡಬಲ್ ಮರ್ಡರ್ ಆಗಿದೆ. ನಾನು‌ ಸೇರಿ ಹಿರಿಯ ಅಧಿಕಾರಿಗಳು ವೈಜ್ಞಾನಿಕ ತಳಹದಿಯಲ್ಲಿ ತನಿಖೆ ಮಾಡುತ್ತಿದ್ದೇವೆ. ಎಲ್ಲ ಆಯಾಮದಲ್ಲೂ ತನಿಖೆ ಆಗುತ್ತಿದೆ. ಪ್ರಕರಣ ಸಂಬಂಧ ಮೂರು ಮಾರಕಾಸ್ತ್ರಗಳು ಸಿಕ್ಕಿವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಇದಕ್ಕಾಗಿ ತನಿಖಾ ತಂಡವು ರಚನೆಯಾಗಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

ಮನೆ ಕೆಲಸದಾಕೆಯ ಅಸಭ್ಯ ವರ್ತನೆ; ಮೂತ್ರದಲ್ಲೇ ನೆಲ ಒರೆಸಿದಳು!

7ನೇ ವೇತನ ಆಯೋಗ ವರದಿ ಜಾರಿಯಲ್ಲಿ ತಾರತಮ್ಯ; ಸರ್ಕಾರದ ನಡೆ ವಿರುದ್ಧ ಮಹಾನಗರ ಪಾಲಿಕೆ ನೌಕರರ ಆಕ್ರೋಶ

ಶನಿವಾರ ಬೆಳಗ್ಗೆ ನೂತನ 24 ಸಚಿವರ ಪದಗ್ರಹಣ; ಸಂಭವನೀಯ ಸಚಿವರ ಪಟ್ಟಿ ಹೀಗಿದೆ…

Latest Posts

ಲೈಫ್‌ಸ್ಟೈಲ್