ಮನೆ ಕೆಲಸದಾಕೆಯ ಅಸಭ್ಯ ವರ್ತನೆ; ಮೂತ್ರದಲ್ಲೇ ನೆಲ ಒರೆಸಿದಳು!

Maid
Published on

ಲಖನೌ: ಕೆಲಸದಾಕೆ ಮನೆಯನ್ನು ಶುಚಿಗೊಳಿಸುವ ವೇಳೆ ತನ್ನ ಮೂತ್ರದಿಂದ ನೆಲ ಒರೆಸಿರುವ ಘಟನೆ ಉತ್ತರಪ್ರದೇಶದ ಗ್ರೇಟರ್​ ನೊಯ್ಡಾದ ಅಜ್​ನಾರ ಹೌಸಿಂಗ್​ ಸೊಸೈಟಿಯಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪ್ರಕರಣ ಸಂಬಂಧ ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಮೂತ್ರದಲ್ಲಿ ಮನೆ ಒರೆಸಿದ ಮಹಿಳೆ

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮನೆ ಕೆಲಸದಾಕೆಸಬೀನಾ ಕಟುನ್​ ನೆಲ ಒರೆಸುವ ವೇಳೆ ಬಕೆಟ್​ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಕಾಣಬಹುದು.

ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸಬೀನಾ ಮಾಲೀಕರ ಆರೋಪಗಳನ್ನು ನಿರಾಕರಿಸಿದ್ದು ಬಳಿಕ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದು ಕೃತ್ಯದ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net