ಸಿನಿಮಾ

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು: ಎಚ್​ಡಿಕೆ

ಬೆಂಗಳೂರು: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿರುವ ಕಾಂಗ್ರೆಸ್​ ಸರ್ಕಾರದ ಭವಿಷ್ಯ ಏನು ಬೇಕಾದರೂ ಆಗಬಹುದು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್​ ಸ್ಪೋಟಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್​ ವಿಮರ್ಶನಾತ್ಮಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ಮಾತು ಹೇಳಿದ್ದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಈ ಸರ್ಕಾರದಲ್ಲಿ ವಿಶ್ವಾದ ಕೊರತೆ ಇದೆ ಹೀಗಾಗಿ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಸರ್ಕಾರದಲ್ಲಿ ಏನು ಬೇಕಾದರೂ ಆಗಬಹುದು. ಅಧಿಕಾರಿಕ್ಕೆ ಬಂದ ತಕ್ಷಣ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಚುನಾವಣೆಗೂ ಮುನ್ನ ಜನತೆಗೆ ಭರವಸೆಗಳನ್ನು ನೀಡಿದ್ದರು.

HD Kumaraswamy

ಹೇಗೆ ಕೊಡುತ್ತಾರೋ ನೋಡೋಣ

ಎಲ್ಲರಿಗೂ ಉಚಿತ ಎಂದು ಮುಖ್ಯಮಂತ್ರಿಗಳು ಭಾಷಣದ ವೇಳೆ ಹೇಳುತ್ತಿದ್ದರು. ಈಗ ಸುಳ್ಳು ಹೇಳಿ ಜನತೆಗೆ ಟೋಪಿ ಹಾಕಲು ಹೊರಟ್ಟಿದ್ದಾರೆ. ಹೇಗೆ ಕೊಡುತ್ತಾರೋ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಜನತೆಗೆ ಟೋಪಿ ಹಾಕಲು ನಾವು ಬಿಡುವುದಿಲ್ಲ ಕೊಟ್ಟ ಭರವಸೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾನು ಸಂಕಷ್ಟದ ಸಂದರ್ಭದಲ್ಲಿ ಒಂದು ಸಮುದಾಯದ ಪರ ಅಚಲವಾಗಿ ನಿಂತಿದ್ದೆ. ಆದರೆ, ಆ ಸಮುದಾಯದ ಹೆಚ್ಚಿನ ಜನ ಕಾಂಗ್ರೆಸ್​ಗೆ ಮತ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ವಿರುದ್ಧ ಒಂದು ಸಮುದಾಯವನ್ನು ಎತ್ತಿ ಕಟ್ಟಿದ್ದರು ಇದು ಜೆಡಿಎಸ್​ಗೆ ಚುನಾವಣೆಯಲ್ಲಿ ಹಿನ್ನಡೆಯಾಯಿತು ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿಮರ್ಶನಾತ್ಮಕ ಸಭೆಯಲ್ಲಿ ಹೇಳಿದ್ಧಾರೆ.

Latest Posts

ಲೈಫ್‌ಸ್ಟೈಲ್